Sunday, September 8, 2024

Latest Posts

Raghavendra rajkumar :”ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ರಾಘಣ್ಣ

- Advertisement -

ಸಿನಿಮಾ ಸುದ್ದಿ : ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಮೂಲಕ ನಿರ್ದೇಶಕಿ ಆರ್‍ನಾ ಸಾಧ್ಯ ಅವರು ಸಿನಿಮಾಕ್ಕೆ ಬಂಡವಾಳ ಹಾಕುವುದರ ಮೂಲಕ ನಿರ್ಮಾಪಕಿಯಾಗಲಿದ್ದಾರೆ. ಇನ್ನು ಈ ಚಿನ್ನದಸ ಮಲ್ಲಿಗೆ ಹೂವೆ ಸಿನಿಮಾವನ್ನು ನವಿಲುಗರಿ ನವೀನ್ ಪಿ.ಬಿ ನಿರ್ದೇಶನ ಮಾಡುತ್ತಿದ್ದು ನಾಯಕನಾಗಿ ಷಣ್ಮುಖ ಗೋವಿಂದರಾಜ್ ನಟಿಸುತ್ತಿದ್ದಾರೆ

ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ತಮ್ಮ ಮುದ್ದಾದ ಅಕ್ಷರದ ಮೂಲಕ ಖ್ಯಾತ ಸಾಹಿತಿ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದುಕೊಟ್ಟರು. ನಟ ಡಾ||ರಾಘವೇಂದ್ರ ರಾಜಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನವಿಲುಗರಿ ನವೀನ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ. ಡಾ||ರಾಜಕುಮಾರ್ ಮೊಮ್ಮಗ (ಲಕ್ಷ್ಮೀ ಹಾಗೂ ಗೋವಿಂದರಾಜ್ ಅವರ ಪುತ್ರ) ಷಣ್ಮುಖ ಗೋವಿಂದರಾಜ್ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ನಾಗೇಂದ್ರ ಪ್ರಸಾದ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರಗಳ ಆಡಿಷನ್ ನಡೆಯುತ್ತಿದೆ. ಪ್ರಣವ್ ಸತೀಶ್ “ಚಿನ್ನದ ಮಲ್ಲಿಗೆ ಹೂವೇ”ಗೆ ಸಂಗೀತ ನೀಡುತ್ತಿದ್ದು, ಮಧು ತುಂಬಕೆರೆ ಅವರ ಸಂಕಲನವಿರಲಿದೆ.

Roopesh Shetty | ರಾಕ್ ಸ್ಟಾರ್ ರೂಪೇಶ್ ಶೆಟ್ಟಿಗೆ ಗಿಚ್ಚಿ ಗಿಲಿಗಿಲಿ ಜಾಹ್ನವಿ ಜೋಡಿ

MeghanaRaj : “ತತ್ಸಮ ತದ್ಭವ” ಚಿತ್ರದಿಂದ “ದೂರಿ ಲಾಲಿ” ಚಾಲೆಂಜ್ .

Raani movie: ಭಾರಿ ಮೊತ್ತಕ್ಕೆ ಮಾರಾಟವಾಯಿತು “ರಾನಿ” ಆಡಿಯೋ ರೈಟ್ಸ್ .

- Advertisement -

Latest Posts

Don't Miss