Sunday, September 8, 2024

Latest Posts

ಡೆಂಗ್ಯೂ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಜಿಲ್ಲಾಡಳಿತ

- Advertisement -

www.karnatakatv.net : ರಾಯಚೂರು : ಜಿಲ್ಲೆಯಲ್ಲಿ ಕೊರೊನಾರ್ಭಟ ಪ್ರಕರಣಗಳು ಕಡಿಮೆಯಾದಂತೆ ಡೆಂಗೂ ಜ್ವರದ ಭೀತಿ   ಎದುರಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಡೆಂಗ್ಯೂ ನಿಯಂತ್ರಣಕ್ಕೆ ಹರಸಾಹಸ ಪಡ್ತಿದೆ…

ಹೌದು ಜಿಲ್ಲೆಯಲ್ಲಿ ಕೊರೊನ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಡೆಂಗ್ಯೂ ಜ್ವರದ ಆತಂಕ ಎದುರಾಗಿದ್ದು, ಜಿಲ್ಲಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ.. ಅದ್ರಲ್ಲೂ ರಾಯಚೂರು ತಾಲೂಕಿನಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಡೆಂಗ್ಯೂ ಪೀಡಿತ ಮಕ್ಕಳು ಸದ್ದಿಲ್ಲದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೋನಾ ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಭಾದಿಸುತ್ತದೆ ಎಂಬ ಸುದ್ದಿ ಬೆನ್ನಲ್ಲೇ, ಡೆಂಗ್ಯೂ ಜ್ವರ ಸಹ ಜಿಲ್ಲೆಯ ಮಕ್ಕಳನ್ನ ಹೆಚ್ಚು ಕಾಡ್ತಿದೆ. ದಿನಕ್ಕೆ 2 ರಿಂದ 3 ಮಕ್ಕಳು ಖಾಸಗೀ ಆಸ್ಪತ್ರೆಗೆ ನಿತ್ಯ ದಾಖಲಾಗ್ತಿದಾರೆ… ಇನ್ನು ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಖಂಡಿತ ಅಂತಾರೆ ಮಕ್ಕಳ ತಜ್ಞರು..

ಹೌದು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗ್ತಿದೆ. ಮುಖ್ಯವಾಗಿಬರಾಯಚೂರು ತಾಲ್ಲೂಕಿನ ಶಕ್ತಿನಗರ ಗ್ರಾಮದಲ್ಲಿ ಪ್ರತಿ ನಿತ್ಯ 3 ರಿಂದ 4 ಮಕ್ಕಳಿಗೆ ಈ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ.. ಇದರಿಂದಾಗಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಜನರಲ್ಲಿನ ಭೀತಿ ಹೋಗಲಾಡಿಸಿ, ಡೆಂಗ್ಯೂವಿನಿಂದ ರಕ್ಷಿಸಲು ಹರಸಾಹಸ ಪಡ್ತಿದೆ..

ಇನ್ನು ಕೊರೊನ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ತಜ್ಞರ ಸಲಹೆಯಂತೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.. ಆದರೆ ಡೆಂಗ್ಯೂ ಜ್ವರಕ್ಕೆ ಸಂಬಂಧ ಪಟ್ಟಂತೆ ಸೀರಿಯಸ್ಸಾಗಿ ಸಿದ್ಧತೆಯನ್ನು ಮಾಡಿಕೊಂಡಂತೆ‌ ಕಾಣಿಸ್ತಿಲ್ಲ. ಕಾರಣ ಡೆಂಗ್ಯೂ ಹೆಚ್ಚು ಉಲ್ಬಣಗೊಳ್ಳುತ್ತಿರುವ ಬಗ್ಗೆ ಇಲಾಖೆ ಬಳಿ ಮಾಹಿತಿ ಇಲ್ಲ.. ಕಾರಣ ಸರ್ಕಾರಿ ಆಸ್ಪತ್ರೆಗೆ ಮಕ್ಕಳು ದಾಖಲಾಗದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿ ಕೊರತೆ ಎದ್ದು ಕಾಣ್ತಿದೆ..

ಒಟ್ನಲ್ಲಿ ಮಳೆಗಾಲ ಹೆಚ್ಚಾಗಿ ಸ್ವಚ್ಛತೆ ಕೊರತೆಯಿಂದ ಡೆಂಗ್ಯೂ ಹರಡ್ತಾ ಇದ್ದು ಜನತೆ ಸ್ವಚ್ಚತೆ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ.. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಧ್ಯಂತ ಜಾಗೃತಿ ಮೂಡಿಸಲು ಮುಂದಾಗಬೇಕಿದೆ..

ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು

- Advertisement -

Latest Posts

Don't Miss