ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಹಿರೇಮಠ ಭೇಟಿ

www.karnatakatv.net : ಬೆಳಗಾವಿ : ಕೋವಿಡ್ ಮಹಾಮಾರಿ ಇರುವುದರಿಂದ ರಾಜ್ಯಾದ್ಯಂತ ಎಸ್ಎಸ್ಎಲ್ ಸಿ ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬೆಳಗಾವಿ ಸರಕಾರಿ ಸರ್ದಾರ ಪದವಿ ಪೂರ್ವ ಮಹಾವಿದ್ಯಾಲಯ ಶಾಲೆಯ ಆವರಣಕ್ಕೆ ಆಗಮಿಸಿ ಸ್ಯಾನಿಟೈಸರ್ ಮತ್ತು ಕಡ್ಡಾಯವಾಗಿ ಮಾಸ್ಕ  ಹಾಕಿಕೊಂಡು ಒಳಗೆ ಬರುವಂತೆ ಸೂಚನೆ ನೀಡಿದರು .

ಬೆಳಗಾವಿ ಶೈಕ್ಷಣಿಕ ವಲಯದಲ್ಲಿ SSLC ಪರೀಕ್ಷೆಯನ್ನ 35,308 ವಿದ್ಯಾರ್ಥಿಗಳು.ಬರೆಯುತ್ತಿದ್ದಾರೆ.ಹಾಗೇಯೆ

194 ಪರೀಕ್ಷಾ ಕೇಂದ್ರಗಳಲ್ಲಿ  35,308 ವಿಧ್ಯಾರ್ಥಿಗಳು ಎಸ್ ಎಸ್ಎಲ್ಸಿ ಪರೀಕ್ಷೆ.19134 ಬಾಲಕರು ಹಾಗೂ 16174 ಬಾಲಕಿಯರು.

ಒಟ್ಟಾರೆಯಾಗಿ ಬೆಳಗಾವಿ ನಗರ 10302, ಬೆಳಗಾವಿ ಗ್ರಾಮೀಣ 5758, ಬೈಲಹೊಂಗಲ 4358, ಖಾನಾಪೂರ 4169, ರಾಮದುರ್ಗ 3796,  ಸವದತ್ತಿ 4874, ಚನ್ನಮ್ಮನ ಕಿತ್ತೂರು 2051 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಇದರಿಂದ ನಗರದ ಸರ್ದಾರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಯೂ ಸಹ ಮಹಾವಿದ್ಯಾಲಯದ ಸುತ್ತ ಮುತ್ತ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸೂಚಿಸಿದೆ .

ಕೋವಿಡ್ ಮಾರ್ಗಸೂಚಿ ಅನ್ವಯ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದ್ದು ಪರೀಕ್ಷಾ ಕೇಂದ್ರ ಪ್ರವೇಸಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮಾಡಿ ಒಳಕಳಿಸುತ್ತಿದ್ದಾರೆ ಶಾಲಾ ಸಿಬ್ಬಂದಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರಗಳ ಸಿದ್ಧತೆ ಮಾಡಿಕೊಂಡಿದೆ. ಸರ್ದಾರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

About The Author