Friday, December 13, 2024

Latest Posts

ಜಿಲ್ಲಾಧಿಕಾರಿಯೇ ಇಲ್ಲದ ಜಿಲ್ಲೆ..!

- Advertisement -

www.karnatakatv.net: ರಾಯಚೂರು: ಜಿಲ್ಲೆಗೆ ಅದ್ಯಾವ ಶಾಪವೋ ಏನೋ ಗೊತ್ತಿಲ್ಲ ಆದರೆ ಅಧಿಕಾರ ಬಂದು 3-4 ತಿಂಗಳ ಒಳಗೆ ವರ್ಗಾವಣೆ ಆಗುತ್ತುದ್ದಾರೆ. ರಾಜಕೀಯ ಚೇಲ್ಲಾಟೋ ಸರ್ಕಾರದ ನಿರ್ಲಕ್ಷೋ ಜಿಲ್ಲೆ ಅಭಿವೃದ್ಧಿಯಾಗದೇ ಕುಂಠಿತ ವಾಗಿದೆ. ಇಡೀ ರಾಜ್ಯದಲ್ಲಿ ಜಿಲ್ಲಾಧಿಕಾರಿ ಇಲ್ಲದ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡ ಜಿಲ್ಲೆಯಾಗಿದೆ.

ಹೌದು ರಾಯಚೂರು ಜಿಲ್ಲೆಯಲ್ಲಿ ಒಂದು ವಾರದಿಂದ ಜಿಲ್ಲಾಧಿಕಾರಿ ಇಲ್ಲದೇ ಅನಾಥವಾಗಿರೋ ಜಿಲ್ಲಾಧಿಕಾರಿಗಳ ಕಛೇರಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪದೇ ಪದೇ ಬದಲಾವಣೆಯಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತ ವಾಗುತ್ತಿದೆ. ಒಂದು ವಾರ ಕಳೆದ್ರೂ ಇದುವರೆಗೂ ನೂತನ ಜಿಲ್ಲಾಧಿಕಾರಿ ಇಲ್ಲದೇ ಜಿಲ್ಲೆ ಅನಾಥವಾಗಿ ಇದೆ. ಜಿಲ್ಲಾಧಿಕಾರಿ ಡಾ ಬಿಸಿ ನಾಗೇಶ್ ಅಧಿಕಾರ ವಹಿಸಿಕೊಂಡು ಕೇವಲ 78 ದಿನಗಳಲ್ಲೇ ವರ್ಗಾವಣೆ ಮಾಡಿದರು.

ಅ.11 ರಂದು ರಾಯಚೂರು ಜಿಲ್ಲಾಧಿಕಾರಿ ಡಾ.ಸತೀಶ ಅವರನ್ನು ಕೊಡಗು ಜಿಲ್ಲೆಯ ಡಿಸಿಯನ್ನಾಗಿಸಿ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ. ಅಲ್ಲಿದ್ದ ಡಿಸಿ ಚಾರುಲತಾ ಸೋಮಲ್ ಅವರನ್ನು ಹೊಸ ಡಿಸಿಯಾಗಿ ರಾಯಚೂರಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಆದೇಶ ಹೊರಬಿದ್ದು ವಾರ ಕಳೆದರೂ ಹೊಸ ಡಿಸಿ ಚಾರುಲತಾ ಸೋಮಲ್ ಅಧಿಕಾರ ಸ್ವೀಕರಿಸಿಲ್ಲ. ರಾಯಚೂರು ಜಿಲ್ಲೆಗೆ ಬರಲು ಜಿಲ್ಲಾಧಿಕಾರಿಗಳ ಹಿಂದೇಟು ಹಾಕುತ್ತಿದಾರೆ ಎಂಬ ಅನುಮಾನ ಮೂಡಿದೆ. ಇನ್ನೂ ಅಕ್ರಮ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಷ್ಠಾವಂತ, ಖಡಕ್ ಅಧಿಕಾರಿಗಳಿಗೆ ಇಲ್ಲಿ ಜಾಗವಿಲ್ಲ ಎನ್ನುವಂತಹ ಒತ್ತಡ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಪದೇ ಪದೇ ಡಿಸಿಗಳ ವರ್ಗಾವಣೆ, ಖಡಕ್ ಅಧಿಕಾರಿಗಳ ನಿಯುಕ್ತಿಗೊಳಿಸಿದರೂ ಅವರು ಬಾರದಂತೆ ಅಡ್ಡಗಟ್ಟುವ ಕಾಣದಕೈಗಳು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿವೆ. ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಜಿಲ್ಲೆಯ ಶಾಸಕರಿಗೂ ಅಸಮಧಾನ ತರಿಸಿದ ಜಿಲ್ಲಾಧಿಕಾರಿಗಳ ನಿರಂತರ ವರ್ಗಾವಣೆ ಪ್ರಕ್ರಿಯೆಯಾಗಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕ್ತಿರೋ ಜಿಲ್ಲೆಯ ಜನ ಇನ್ನೂ ಸರ್ಕಾರ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ನೀಡಿ ರಾಯಚೂರು ಅಭಿವೃದ್ಧಿ ಆಗುತ್ತ ಎಂದು ನೋಡಬೇಕಾಗಿದೆ.

ಅನಿಲ್ ಕುಮಾರ್, ಕರ್ನಾಟಕ ಟಇವಿ- ರಾಯಚೂರು

- Advertisement -

Latest Posts

Don't Miss