Saturday, April 19, 2025

Latest Posts

ದೀಪಾವಳಿಯ ಅಮಾವಾಸ್ಯೆ ಹಾಗು ಸೂರ್ಯಗ್ರಹಣ ಒಟ್ಟಿಗೆ ಬಂದಿದೆ ಹಾಗಾದರೆ ದೀಪಾವಳಿ ಹೇಗೆ ಆಚರಿಸಬೇಕು ….?

- Advertisement -

Astrology:

ಈ ವರ್ಷ ದೀಪಾವಳಿಯ ಅಮಾಸ್ಯೆಯದಿನ ಗ್ರಹಣ ಬಂದಿರುವುದರಿಂದ ಎಲ್ಲರಲ್ಲೂ ಗೊಂದಲಗಳು ಈಗಾಗಲೇ ಉಂಟಾಗಿದೆ ,ಆ ದಿನ ಹಬ್ಬವನ್ನು ಮಾಡ ಬಹುದಾ,ಅಥವಾ ಮಾಡ ಬಾರದ ಮಾಡಿದರೆ ಯಾವ ಸಮಯಕ್ಕೆ ಮಾಡಬೇಕು ಲಕ್ಷ್ಮಿಯನ್ನು ಯಾವ ಸಮಯದಲ್ಲಿ ಕೂರಿಸಬೇಕು ,ಗ್ರಹಣ ನಮ್ಮ ಮೇಲೆ ಎಫೆಕ್ಟ್ ಆಗುತ್ತದೆಯೋ ಇಲ್ಲವೋ ,ಗ್ರಹಣ ನಮ್ಮ ಭಾರತದಲ್ಲಿ ಇದಿಯೋ ಇಲ್ಲವೋ ,ಗ್ರಹಣದ ದಿನ ಪೂಜೆ ಹೇಗೆ ಮಾಡಬೇಕು ಯಾವ ಸಮಯದಲ್ಲಿ ಪೂಜೆ ಮಾಡಬೇಕು ಎಂಬ ಆತಂಕ ಎಲ್ಲರಲ್ಲೂ ಮೂಡಿದೆ,ಕೆಲವರಿಗಂತೂ ಏನು ಮಾಡಬೇಕು ಎನ್ನುವುದು ತಿಳಿದೀರುವುದಿಲ್ಲ ಹಾಗಾದರೆ ಬನ್ನಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಂಡು ಬರೋಣ .

ನಮ್ಮ ಭಾರತದಲ್ಲಿ ಸೂರ್ಯ ಗ್ರಹಣ ಗೋಚರ ಇಲ್ಲದೆ ಇರುವ ಕಾರಣ ನಾವು ಯಾವ ಭಯ ಪಡುವ ಅವಶ್ಯಕತೆಯು ಇಲ್ಲ ,ಆಚರಣೆ ಮಾಡಲೇ ಬೇಕೆಂಬ ರೂಲ್ಸ್ ಖಂಡಿತ ವಾಗಿಯುಇಲ್ಲ ಆದರೆ ಇದನ್ನು ಆಚರಣೆ ಮಾಡಿಕೊಂಡ್ರೆ ಬಹಳ ಒಳ್ಳೆಯದು ,ನಮ್ಮ ಭಾರತದ ಸಮಯದ ಪ್ರಕಾರ ಗ್ರಹಣ ಶುರುವಾಗುವುದು 25ನೇ ತಾರೀಕು ಮದ್ಯಾನ 2ಗಂಟೆ 28ನಿಮಿಷಕ್ಕೆ,ಮಧ್ಯಕಾಲ4:30 ನಿಮಿಷಕ್ಕೆ ,ಮೋಕ್ಷಕಾಲ 6:32ನಿಮಿಷಕ್ಕೆ, ಗ್ರಹಣವು ತುಲಾ ರಾಶಿಯ ಸ್ವಾತಿ ನಕ್ಷತ್ರದಲ್ಲಿ ಗೋಚರಿಸುತ್ತದೆ, ಅಲ್ಲಿ ಸೂರ್ಯನು ನೀಚ ಸ್ಥಾನದಲ್ಲಿರುತ್ತಾನೆ ಹಾಗಾದರೆ ಗ್ರಹಣದಿಂದ ಎನೆಲ್ಲ ತೊಂದರೆಗಳು ಆಗುತ್ತದೆ ಎನ್ನುವುದನ್ನು ನೋಡೋಣ ಬನ್ನಿ .

ಸೂರ್ಯನು ನೀಚನಾದಾಗ ,ರಾಜಕೀಯದಲ್ಲಿ ಕ್ರಾಂತಿಗಳಾಗುವುದು,ಯುದ್ಧಗಳಾಗುವುದು,ಇದು ಕರ್ನಾಟಕದಲ್ಲದೆ ಇಡೀ ಪ್ರಪಂಚದಲ್ಲಿ ಆಗುವಂಥದು, ಆರ್ಥಿಕ ಸ್ಥಿತಿ ಕುಸಿತ ವಾಗುತ್ತದೆ ,ಆಹಾರದ ಅಭಾವ ,ಧಾರ್ಮಿಕ ಘರ್ಷಣೆ ಹೆಚ್ಚಾಗುವುದು ಹಾಗು ಬರಗಾಲ ಬರುವ ಸಾಧ್ಯತೆ ಹೆಚ್ಚಾಗಿರುವುದು, ಅಂದರೆ ಚಂಡಮಾರುತ ದಿಂದ ನಾಶವಾಗುವುದು ,ಮಳೆಯಿಂದ ಬೆಳೆ ನಾಶವಾಗುವುದು, ಬೆಳೆನಾಶದಿಂದ ಮನುಷ್ಯರಿಗೆ ಇದರ ಕೊರತೆ ಕಾಡುತ್ತದೆ, ಆದ್ದರಿಂದ ಬೇರೆ ಬೇರೆ ಕಡೆ ಇಂದ ಬೆಳೆಗಳು ತರೆಸಿ ಕೊಳ್ಳುವಂತಹ ಸಾಧ್ಯತೆಗಳು ಇರುತ್ತದೆ ,ಬೆಳೆಗಳಿಗೆ ಅತಿಯಾದ ದುಡ್ಡು ಕೊಟ್ಟು ಖರೀದಿಸುವ ಪರಿಸ್ಥಿತಿ ಉಂಟಾಗುತ್ತದೆ ,ಈ ರೀತಿಯಾದ ಬರಗಾಲ ಕಾಡುತ್ತದೆ ಹಾಗು ವಿಮಾನಗಳ ಅಪಘಾತ ಜಾಸ್ತಿ ಯಾಗುತ್ತದೆ ಈ ರೀತಿ ತೊಂದರೆಗಳು ಈ ಗ್ರಹಣದಿಂದ ಸಂಭವವಾಗುತ್ತದೆ.

ಹಾಗಾದರೆ ದೀಪಾವಳಿ ಅಮಾವಾಸ್ಯೆ ಯಾವ ದಿನ ಮಾಡಬೇಕು…? ಲಕ್ಷ್ಮಿ ಪೂಜೆ ಯಾವದಿನ ಮಾಡಬೇಕು …?ಎಂದು ಯೋಚನೆ ಮಾಡುವವರು ೨೪ನೇ ತಾರೀಕು ಸಾಯಂಕಾಲ ೫ಗಂಟೆಗೆ start ಆಗಿ ಮಾರನೆಯ ದಿನ ೨೫ನೇ ತಾರೀಖು ೪ಗಂಟೆಗೆ ಮುಗಿಯುತ್ತದೆ ,ಕೆಲವರು ೨೫ನೇ ತಾರೀಕು ಸೂರ್ಯಗ್ರಹಣ ೬:೩೫ ನಿಮಿಷಕ್ಕೆ ಮುಗಿಯುತ್ತದೆ ೬:೩೦ಮೇಲೆ ಪೂಜೆ ಮಾಡ್ಕೊಳೋಣ ಅಂದು ಕೊಳ್ಳುತ್ತಾರೆ, ಆದರೆ ಹೀಗೆ ಮಾಡಿದರೆ ನಿಮಗೆ ಅಮಾಸ್ಯೆ ಸಿಗುವುದಿಲ್ಲ ,ಇದರಿಂದ ಪೂಜೆಮಾಡಿ ಪ್ರಯೋಜನ ಸಿಗುವುದಿಲ್ಲ ,ಅದರಿಂದ ಪೂಜೆ ಮಾಡುವಂತಹ ಸಮಯ ಹಾಗು ಲಕ್ಷ್ಮಿಯನ್ನು ಕೂಡಿಸುವ ಸಮಯ ನೋಡಿ ಕೂಡಿಸಿದರೆ ಪೂಜೆಯ ಫಲ ಸಿಗುತ್ತದೆ .ಮನೆಯಲ್ಲಿ ಲಕ್ಷ್ಮಿಯನ್ನು ಕೂಡಿಸುವವರು ೨೪ನೇ ತಾರಿಕ್ಕು ಸಾಧ್ಯವಾಗುವುದಿಲ್ಲ ಆದ್ದರಿಂದ ೨೫ನೇ ತಾರೀಕು ಮಂಗಳವಾರ ಮುಂಜಾನೆ ೬:೩೦ ಇಂದ ೭:೩೦ಯಾ ಸಮಯದಲ್ಲಿ ತುಂಬಾ ಒಳ್ಳೆಯ ಲಗ್ನ ಈ ಲಗ್ನದಲ್ಲಿ ಲಕ್ಷ್ಮಿ ಪೂಜೆ ಮಾಡುವುದರಿಂದ ನಿಮಗೇ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ ಇದರಿಂದ ನಿಮಗೆ ಶುಕ್ರನ ಬಲ ಬರುತ್ತದೆ ,ನಿಮ್ಮ ಜೀವನದಲ್ಲಿ ಆರ್ಥಿಕ ಅಭಿವೃದ್ಧಿ ಯಾಗುತ್ತದೆ ,ಹಾಗು ಒಳ್ಳೆಯ ಬೆಳವಣಿಗೆಯಾಗುತ್ತದೆ . ಲಕ್ಷ್ಮಿಯ ಪೂಜೆಯ ಸಮಯದಲ್ಲಿ ಶಂಖ ಊದುವುದರಿಂದ ಮನೆಯಲ್ಲಿ ನೆಗಿಟಿವ್ ಎನರ್ಜಿ ಹೋಗಿ ನೆಮದಿ ಬರುತ್ತದೆ ,ಮನೆಯಲ್ಲಿ ಶಂಖ ಇಲ್ಲದೆ ಇರುವವರು ಮೊಬೈಲ್ಅಲ್ಲಿ ಶಂಕು ಸೌಂಡ್ ಅನ್ನು ಇಟ್ಟುಕೊಳ್ಳ ಬಹುದು, ಹಾಗು ಲಕ್ಷ್ಮಿಗೆ ಇಷ್ಟವಾದ ಎಲ್ಲ ವಸ್ತುಗಳನ್ನು ತಂದು ಪೂಜೆ ಮಾಡಬೇಕು .ಸಾದ್ಯವಾದರೆ ಕಬ್ಬನ್ನು ಲಕ್ಷ್ಮಿಯ ಪೂಜೆಯಲ್ಲಿ ಇಡಿಸಬೇಕು ಇದರಿಂದ ಲಕ್ಷ್ಮಿಯ ಅನುಗ್ರಹ ನಿಮಗೆ ಸಿಗುತ್ತದೆ .ಹಾಗು ತಾವರೆ ಹೊ ಲಕ್ಷ್ಮಿಗೆ ಅರ್ಪಿಸಿ ಇಲ್ಲದಿದ್ದರೆ ತಾವರೆ ಬೀಜದಿಂದ ಶ್ಲೋಕಗಳನ್ನೂ ಜಪಿಸ ಬೇಕು ,ನಂತರ ಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು . ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ, ಆದ್ದರಿಂದ ಇದು ದೀಪಾವಳಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?!

ನವರಾತ್ರಿಯಲ್ಲಿ ಬನ್ನಿ ಮರದ ಪೂಜೆಯ ವಿಶೇಷ … !

ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!

 

- Advertisement -

Latest Posts

Don't Miss