Navaratri special:
ನವರಾತ್ರಿ ಹಬ್ಬದಲ್ಲಿ ನವದುರ್ಗೆಯರ ಆರಾಧನೆ ಜೊತೆಯಲ್ಲಿ ವಿಶೇಷವಾಗಿ ಬನ್ನಿ ಮರದ ಪೂಜೆಯನ್ನು ಮಾಡಲಾಗುತ್ತದೆ ,ಈ ಬನ್ನಿ ಮರಕ್ಕೆ ರಾಮಾಯಣ ಮಹಾಭಾರತದಿಂದಲೂ ಅದ್ದರದ್ದೇ ಆದ ಮಹತ್ವವಿದೆ .ನವರಾತ್ರಿ ಹಬ್ಬ ಬಂದರೆ ಸಾಕು ಅಖಂಡದೀಪದ ಆರಾಧನೆ ಜೊತೆಗೆ , ಬನ್ನಿಮರದ ಆರಾಧನೆ ಮಾಡುತ್ತಾರೆ .
ಹಾಗಾದರೆ ಯಾವ ಕಾರಣಕ್ಕಾಗಿ ಬನ್ನಿಮರದ ಪೂಜೆ ಮಾಡಲಾಗುತ್ತದೆ ಎನ್ನುವುದು ಹಲವಾರು ಜನರಿಗೆ ತಿಳಿದಿರುವುದಿಲ್ಲ ,ಯಾವುದೇ ಪೂಜೆ ಮಾಡುವ ಮೊದಲು ಆ ಪೂಜೆಯ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿದರೆ ಫಲಿತಾಂಶ ಸಂಪೂರ್ಣವಾಗಿ ಸಿಗುತ್ತದೆ.ಬನ್ನಿ ಮರಕ್ಕೆ ಪೂಜೆ ಮಾಡುವುದರಿಂದ ನಮ್ಮ ಕಷ್ಟಗಳು ಪರಿಹಾರವಾಗುತ್ತದೆ ಹಾಗು ಸಂತಾನವಿಲ್ಲದವರಿಗೆ ಈ ಮರವನ್ನು ಪೂಜಿಸಿದರೆ ಸಂತಾನವಾಗುತ್ತದೆ ಎಂಬ ನಂಬಿಕೆ ಇದೆ ಹಾಗು ಮಾದುವೆ ಯಾಗದ ಹುಡುಗ ಅಥವಾ ಹುಡುಗಿಗೆ ಕಂಕಣಭಾಗ್ಯ ಕೂಡಿ ಬರಲಿ ಎಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸುತ್ತಾರೆ .
ಕೆಲವರಂತು ನವರಾತ್ರಿ ಹಬ್ಬದಲ್ಲಿ ಈ ಪೂಜೆಯನ್ನು ಒಂಬತ್ತು ದಿನಗಳು ತಪ್ಪದೆ ಆಚರಣೆ ಮಾಡುತ್ತಾರೆ.
ಹಾಗಾದರೆ ಪೂಜೆ ಯಾವರೀತಿ ಮಾಡಬೇಕು ?
ಬನ್ನಿ ಪಾತ್ರವನ್ನು ಬಂಗಾರಕ್ಕೆ ಹೋಲಿಕೆ ಮಾಡುತ್ತಾರೆ , ನವರಾತ್ರಿಯ ಒಂಬತು ದಿನಗಳು ಸೂರ್ಯೋದಯಕ್ಕೆ ಮುಂಚೆ ಈ ಮರಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ , ಪೂಜೆಗೆ ಬೇಕಾಗುವ ಸಾಮಗ್ರಿಗಳನ್ನು ಹಿಂದಿನ ದಿನವೇ ಸಿದ್ದತೆ ಮಾಡಿಕೊಳ್ಳಬೇಕು . ಮೊದಲು ಬನ್ನಿ ಮರವನ್ನು ಸ್ವಲ್ಪ ನ್ನೀರಲ್ಲಿ ತೊಳೆದು ಹರಷಿನ ,ಕುಂಕುಮ ಹಚ್ಚಬೇಕು , ನಂತರ ತಾಂಬೂಲಾ ಇಟ್ಟು ತುಪ್ಪದ ದೀಪಾರಾಧನೆ ಮಾಡಿದರೆ ಒಳ್ಳೆಯದು ,ದೀಪ ಹಚ್ಚುವಾಗ ನೀವು ಯಾವ ಕಾರಣ ದಿಂದ ಈ ಪೂಜೆ ಮಾಡುತ್ತಿದ್ದೀರ ಎಂದು ಸಂಕಲ್ಪ ಮಾಡಿಕೊಳ್ಳಬೇಕು ,ಯಾವುದೇ ರೀತಿಯ ತೊಂದರೆಗಳಿದ್ದರೂ ನವರಾತ್ರಿಯ ದಿನ ಈ ಮರಕ್ಕೆ ಪೂಜೆ ಸಲ್ಲಿಸಿದರೆ ಖಂಡಿತ ಪರಿಹಾರ ವಾಗುತ್ತದೆ ಪೂಜೆ ಮುಗಿದ ನಂತರ ಮರಕ್ಕೆ ೫ ಅಥವಾ ೯ ಸುತ್ತು ಮರದ ಸುತ್ತ ಸುತ್ತಬೇಕು .ಹೀಗೆ ಒಂಬತ್ತು ದಿನಗಳು ಮಾಡಬೇಕು ಒಂಬತ್ತನೇ ದಿನ ಏನಾದರೂ ಪ್ರಸಾದ ಮಾಡಿ , ಮುತೈದೆಯರಿಗೆ ಅರಿಶಿನ, ಕುಂಕುಮ ಕೊಟ್ಟು ಪ್ರಸಾದ ಕೊಟ್ಟು ಆಶೀರ್ವಾದ ಪಡೆದುಕೊಳ್ಳ ಬೇಕು ವಿಜದಶಮಿಯ ನಂತರ ಬನ್ನಿ ಪಾತ್ರವನ್ನು ಮನೆಗೆ ತೆಗೆದುಕೊಂಡು ಬಂದು ಮನೆಯಲ್ಲಿ ಪೂಜೆ ಮಾಡಿದರೆ ನಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎನ್ನೋದು ನಂಬಿಕೆಯಾಗಿದೆ .