ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಬೆಳವಣಿಗೆಗಳು ಆಗ್ತಾಯಿವೆ. ಕುರ್ಚಿ ಗುದ್ದಾಟ ಜೋರಾಗಿವೆ. ಈ ಮದ್ಯೆ ಡಿಕೆ ಶಿವಕುಮಾರ್ ಕುರ್ಚಿಯನ್ನ ಒದ್ದು ಕಿತ್ಕೋತೀನಿ ಅನ್ನೋ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್ ಅವರ ಕೈಲಿ ಆ ಶಕ್ತಿ ಇಲ್ಲದ ಹಾಗೆ ಕಾಣುತ್ತಿದೆ. ಒದ್ದು ಕಿತ್ಕೊಳೋಹಾಗಿದ್ರೆ ಮೊನ್ನೆನೇ ಕಿತ್ಕೊಬೇಕಿತ್ತು. ಟೈಮ್ ಮುಗಿದು ಹೋಗಿದೆ. ಎರಡೂವರೆ ವರ್ಷ ಆಗಿದೆ. ಆಗ್ತಾಯಿಲ್ಲ ಅವರ ಕೈಲಿ ದೇವರುಗಳ ಮೊರೆ ಹೋಗ್ತಿದ್ದಾರೆ.
ಸಿದ್ದರಾಮಯ್ಯನ ಇಳಿಸುವಂತ ಗ್ರೂಪ್, ಡಿಕೆ ನಾ ಸಿಎಂ ಮಾಡೋ ಗ್ರೂಪ್ ಬೆಂಗಳೂರು ರೆಸಾರ್ಟ್ ನಲ್ಲಿ ಎಲ್ಲರು ಠಿಕಾಣಿ ಹೂಡಿ ಗುಂಪು ಗುಂಪಾಗಿ ಮೀಟಿಂಗ್ ಮಾಡ್ತಿವೆ. MLA ಗಳಿಂದ ಬೆಂಗಳೂರು ಸುತ್ತ ಮುತ್ತ ರೆಸಾರ್ಟ್ ತುಂಬಿ ಹೋಗಿವೆ ಎಂದಿದ್ದಾರೆ.
ಸಿದ್ದರಾಮಯ್ಯ ಸುಲಭವಾಗಿ ಸಿಎಂ ಕುರ್ಚಿ ಬಿಡಲ್ಲ. ಮಾತು ತಪ್ಪಿದ ಮಗ ಅಂತ ಒಬ್ಬರು, ಇನ್ನೊಬ್ಬರು ಜನಕ್ಕೆ ಏನು ಮಾತು ಕೊಟ್ಟಿದ್ದೇನೋ ಅದೇ ಅಂತ ಟ್ವಿಟ್ ಮಾಡಿದ್ದಾರೆ. ಇಲ್ಲಿ ಟ್ವಿಟ್ ವಾರ್ ನಡಿಯುತ್ತಿದೆ. ಟ್ವಿಟ್ ಮಾಡೋದು, ಇದು ನಂದಲ್ಲಾ ಅಂತ ಹೇಳೋದು ಇದು ಕಾಂಗ್ರೆಸ್ಸಿನ ಚಾಳಿ. ಸಿದ್ದರಾಮಯ್ಯ, ಡಿಕೆಶಿ ಮುಖಾಮುಖಿ ಬರಲ್ಲ ಟ್ವಿಟ್ ಅಲ್ಲೇ ಹೊಡೆದಾಡಿಕೊಳ್ಳುತ್ತಾರೆ ಅಂತ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಇನ್ನು ಸಿದ್ದು ಡಿಕೆಶಿ ಬ್ರೇಕ್ ಪಾಸ್ಟ್ ಮೀಟಿಂಗ್ ಬಗ್ಗೆ ಮಾತನಾಡಿದ R ಅಶೋಕ್ ಅದು ಬ್ರೇಕ್ ಪಾಸ್ಟ್ ಮೀಟಿಂಗ್ ಅಲ್ಲ ಬ್ರೇಕ್ ಮೀಟಿಂಗ್. ಅಲ್ಲಿ ಏನು ನಡೆಯಲ್ಲ. ಇಡ್ಲಿನು ಇಲ್ಲ, ದೋಸೇನೂ ಇಲ್ಲ, ಉಪ್ಪಿಟ್ಟು ಇಲ್ಲಾ ಬರಿ ಜಗಳ ಅಷ್ಟೇ ಎಂದಿದ್ದಾರೆ. ಡಿಕೆಶಿ ಸಿಎಂ ಪಟ್ಟ ಕೇಳ್ತಿದ್ದಾರೆ.
ಸಿದ್ದರಾಮಯ್ಯ ಬಿಟ್ಟು ಕೊಡೋಕೆ ರೆಡಿ ಇಲ್ಲ. ಎರಡೂವರೆ ವರ್ಷ ಅಂತಾ 6 ಜನರ ಮದ್ಯೆ ಮಾತಾಗಿದೆ ಎಂದು ಡಿಕೆಶಿ ಡೈರೆಕ್ಟ್ ಆಗೇ ಹೇಳ್ತಿದ್ದಾರೆ. ಕೇಂದ್ರ ನಾಯಕರಿಗೆ ದಮ್ ಇದ್ರೆ ಹೇಳ್ಬೇಕಾಗಿತ್ತು. ಹೌದು ಎರಡೂವರೆ ವರ್ಷ ಮಾತಾಗಿತ್ತು. ತೀರ್ಮಾನ ಮಾಡ್ತೀವಿ ಅಂತ ಆದ್ರೆ ಹೇಳ್ಲಿಲ್ಲಾ. ಅದು ವೀಕ್ ಹೈಕಮ್ಯಾಂಡ್ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ

