Saturday, May 10, 2025

Latest Posts

ಸೋಲಾರ್ ಹಗರಣ & ಡಿಕೆ ಶಿವಕುಮಾರ್ ಹಾಗೂ ಬಿಜೆಪಿ – ಕನಕಪುರ ಬಂಡೆ ಹೇಳಿದ್ದೇನು.?

- Advertisement -

ಉಡುಪಿ: ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್  ಎಂಬ ಕೀರ್ತಿ ಪಡೆದಿರುವ ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿ ನಾನು ಶೇ. 0.1ರಷ್ಟು ತಪ್ಪು ಮಾಡಿದ್ದರೂ ನಾನು ಅದರ ಹೊಣೆ ಹೊರಲು ಬದ್ಧನಾಗಿದ್ದೇನೆ. ಬಿಜೆಪಿ ಸರ್ಕಾರ ಯಾವ ತನಿಖೆಯನ್ನಾದರೂ ಮಾಡಲಿ, ಎಲ್ಲ ತನಿಖೆಗೂ ಸಿದ್ಧನಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಉಡುಪಿಯ ಉಪ್ಪುಂದದ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಸಚಿವ ಸುನಿಲ್ ಕುಮಾರ್ ಅವರ ಪಾವಗಡ ಸೌರ ವಿದ್ಯುತ್ ಸ್ಥಾವರ ಯೋಜನೆಯಲ್ಲಿನ ಅಕ್ರಮ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಏನು ಆರೋಪ ಮಾಡಿದ್ದಾರೋ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾದು ನೋಡೋಣ. ರಾಜ್ಯ ವಿದ್ಯುತ್ ಉತ್ಪಾದನೆ ಇತಿಹಾಸದಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡಾಗ ಪರಿಸ್ಥಿತಿ ಹೇಗಿತ್ತು, ನಾನು ಆ ಜವಾಬ್ದಾರಿ ಬಿಟ್ಟ ನಂತರ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪಾವಗಡ ಯೋಜನೆ ಬಗ್ಗೆ ಆಗಲಿ, ಇತರೆ ಯಾವುದೇ ಯೋಜನೆ ಬಗ್ಗೆಯೇ ಆಗಲಿ, ಸರ್ಕಾರ ಯಾವ ತನಿಖೆ ಬೇಕಾದರೂ ಮಾಡಲಿ. ನಾನು ಅಲ್ಪ ಪ್ರಮಾಣದಲ್ಲಿ ತಪ್ಪು ಮಾಡಿದ್ದರೂ ನಾನು ನನ್ನ ಕತ್ತು ನೀಡಲು ಬದ್ಧನಾಗಿದ್ದೇನೆ. ಕರ್ನಾಟಕ ರಾಜ್ಯ ಹೇಗಿತ್ತು, ನಮ್ಮ ಸರ್ಕಾರ ಇದ್ದಾಗ ಎಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು, ಈಗ ಪರಿಸ್ಥಿತಿ ಹೇಗಿದೆ ಎಂಬ ದಾಖಲೆಗಳು ನನ್ನ ಬಳಿ ಇವೆ. ಏನು ಬೇಕಾದರೂ ತನಿಖೆ ಮಾಡಲಿ. ಅವರ ಸರ್ಕಾರ ಇದ್ದಾಗ ಕಲ್ಲಿದ್ದಲು ವಿಚಾರ ಹೇಗಿತ್ತು, ನಮ್ಮ ಸರ್ಕಾರ ಬಂದ ಮೇಲೆ ಏನಾಯಿತು, ಈಗ ಅವರ ಸರ್ಕಾರ ಬಂದ ನಂತರ ಏನೆಲ್ಲಾ ಬದಲಾವಣೆ ಮಾಡಿದ್ದಾರೆ ಎಂದೆಲ್ಲಾ ಮಾಹಿತಿ ಗೊತ್ತಿದೆ. ಸದ್ಯಕ್ಕೆ ನಾನು ಆ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿದ್ರು.

ಕರ್ನಾಟಕ ಟಿವಿ, ಬೆಂಗಳೂರು

 

- Advertisement -

Latest Posts

Don't Miss