ಬೆಂಗಳೂರು: ಜೈಲಿನಲ್ಲಿ ಇರಬೇಕಾದಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೊರಗೆ ಓಡಾಡುತ್ತಿದ್ದಾರೆ. ಇಂತಹ ತಂಡ ಕಾಂಗ್ರೆಸ್ ನಲ್ಲಿದೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಬಿಜೆಪಿ ಯುವ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು,ರಾಹುಲ್ ಗಾಂಧಿ ನೇಪಾಳಕ್ಕೆ ಯಾಕೆ ಹೋಗಿದ್ರು ? ನೈಟ್ ಪಾರ್ಟಿಯಲ್ಲಿ ಯಾರ ಜೊತೆ ಮಾತನ್ನಾಡುತ್ತಿದ್ದರು. ಯಾಕೆ ಸಿದ್ದರಾಮಣ್ಣ, ಡಿ.ಕೆ ಶಿವಕುಮಾರ್ ಮಾತನ್ನಾಡುತ್ತಿಲ್ಲ ಎಂದರು.
ಡಿ.ಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದವರು. ಅವರು ಜೈಲಿಗೆ ಹೋಗುವಾಗಲೂ ಜೈಕಾರ, ಜೈಲಿನಿಂದ ಬಿಡುಗಡೆಯಾದಾಗಲೂ ಜೈಕಾರ, ಜೈಲಿನಲ್ಲಿ ಇರಬೇಕಾದವರು ಹೊರಗಡೆ ಇದ್ದಾರೆ. ಮೊಹಮ್ಮದ್ ನಲಪ್ಪಾಡ್ ಜೈಲಿನಲ್ಲಿರಬೇಕಿತ್ತು. ಹೊರಗಡೆ ಓಡಾಡಿಕೊಂಡು ಇದ್ದಾರೆ. ಅಂತಹ ತಂಡ ಕಾಂಗ್ರೆಸ್ ನಲ್ಲಿದೆ ಎಂಬುದಾಗಿ ಕೈ ನಾಯಕರ ವಿರುದ್ಧ ಕಟೀಲ್ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದರು.
ಕೇವಲ ವಿಸಿಟಿಂಗ್ ಕಾರ್ಡ್ ಹೊಂದುವದಲ್ಲ. ಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ವಿಧಾನಸೌಧಕ್ಕೆ ಹೋಗೋದು, ಸಚಿವರ ಬಳಿ ಓಡಾಡಿಕೊಂಡು ಕೆಲಸ ಮಾಡಿಸಿಕೊಳ್ಳೋದಲ್ಲ. ಬೂತ್ ಗಳಲ್ಲಿ ಏನು ಕೆಲಸ ಮಾಡಿದ್ದೀರಿ. ಎಷ್ಟು ಮನೆಗಳಿಗೆ ಭೇಟಿ ಕೊಟ್ಟಿದ್ದೀರಿ ಅನ್ನೋದು ಮುಖ್ಯವಾಗಿದೆ. ಯಾರ್ ಯಾರ್ ಏನೇನು ಮಾಡುತ್ತಿದ್ದಾರೆ ಅನ್ನೋ ವರದಿ ನಮಗೆ ಬರಲಿದೆ. ಹಾಗಾಗಿ ಎಲ್ಲರೂ ಪಕ್ಷ ಸಂಘಟನೆಗಾಗಿ ಅಹರ್ನಿಶಿ ಕೆಲಸ ಮಾಡಬೇಕಿದೆ ಎಂಬುದಾಗಿ ಯುವ ಮೋರ್ಚಾ ಸದಸ್ಯರಿಗೆ ಕಿವಿಮಾತು ಹೇಳಿದರು.




