ಮುಂಬೈ: ಡೆಲ್ಲಿ ತಂಡದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಹೀಗಾಗಿ ಚೆನ್ನೈ ಹಾಗೂ ಡೆಲ್ಲಿ ನಡುವಿನ ಇಂದಿನ ಪಂದ್ಯ ನಡೆಯೋದು ಅನುಮಾನದಿಂದ ಕೂಡಿದೆ.
ಡೆಲ್ಲಿ ತಂಡದ ಆಟಗಾರರೊಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಡೆಲ್ಲಿ ತಂಡವನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಮುಂದಿನ ನಿರ್ಧಾರ ತಿಳಿಸುವವರೆಗೂ ಡೆಲ್ಲಿ ತಂಡದ ಆಟಗಾರರಿಗೆ ಹೋಟೇಲ್ ರೂಂಗಳಲ್ಲೆ ಇರುವಂತೆ ಸೂಚಿಸಲಾಗಿದೆ.
ಮಾಹಿತಿ ಪ್ರಕಾರ ಸೋಂಕಿಗೆ ಗುರಿಯಾಗಿರುವ ಆಟಗಾರ ಇರ್ನೋರ್ವ ಆಟಗಾರನ ಜೊತೆ ಸಂಕಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಆ ಇಬ್ಬರು ಆಟಗಾರರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಇವರ ಫಲಿತಾಂಶ ಏನು ಬಂದಿದೆ ಅನ್ನೋದು ಇನ್ನು ತಿಳಿದು ಬಂದಿಲ್ಲ.
ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಡೆಲ್ಲಿ ತಂಡದಲ್ಲಿ ಸೋಂಕು ಪತ್ತೆಯಾಗಿರುವುದರಿಂದ ಚೆನ್ನೈ ತಂಡದ ಆಟಗಾರರಿಗೆ ಪರೀಕ್ಷೆಗೆ ಒಳಪಡಿಸಿಲ್ಲ.
ಇತ್ತಿಚೆಗೆ ಡೆಲ್ಲಿ ತಂಡದ ಸ್ಟಾರ್ ಆಟಗಾರ ಮಿಚೆಲ್ ಮಾರ್ಷ್ ಗೆ ಸೋಂಕು ತಗುಲಿತ್ತು, ಹಲವಾರು ಬಾರಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.