ಬುದುವಾರ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಷದಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾಷಣ ಮಾಡುವಾಗ ಪ್ರತಿ ದಿನ ಏರಿಕೆಯಾಗುತ್ತಿರುವ ದಿನಸಿ ಪದಾರ್ಥಗಳು ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ದುಡಿದು ದುಡಿದು ಸೊರಗಿ ಹೋಗಿದ್ದಾರೆ. ಅವರ ಬಾಳಲ್ಲಿ ಕತ್ತಲು ಕವಿದು ಬೆಳಕು ಇಲ್ಲದಂತಾಗಿದೆ . ಅದಕ್ಕಾಗಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಅವರ ಬಾಳಿಗೆ ಬೆಳಕನ್ನು ನೀಡಲು ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನೀಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದರು.
ಅದಕ್ಕೆ ಪ್ರತ್ಯುತ್ತರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಸಮಾವೇಶದಲ್ಲಿ ಮಾತನಾಡಿ ಕಾಂಗ್ರೇಸ್ ಸರ್ಕಾರ ಬೇಜವಬ್ದಾರಿ ಮತ್ತು ತರ್ಕ ಹೀನ ಹೇಳಿಕೆಯನ್ನು ನೀಡುತ್ತದೆ.. ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ಪ್ರತಿ ಮನೆಗೆ 200 ಯುನೀಟ್ ವಿದ್ಯುತ್ ಉಚಿತವಾಗಿ ನಿಡುವುದಾಗಿ ನೀಡಿರುವ ಭರವಸೆ ಬೇಜವಬ್ದಾರಿ ಹೇಳಿಕೆ. ಇನ್ನೂ ಮುಂದೆ ಈ ರೀತಿಯ ಹಲವಾರು ಹೇಳಿಕೆಗಳನ್ನು ನೀಡುತ್ತದೆ . ಈ ರೀತಿ ಹೇಳಿಕೆಯಿಂದಾಗಿ ಅವರು ಚುನಾವಣೆಯಲ್ಲಿ ಎಷ್ಟು ಕೆಳ ಮಟ್ಟದಲ್ಲಿದ್ದಾರೆ ಎಂಬುದನ್ನ ತೋರಿಸುತಿದ್ದಾರೆ ಎಂದು ಹೇಳಿದರು
ಸುಳ್ಳು ಭರವಸೆ ನೀಡಿ ಚುನಾವಾಣೆಯಲ್ಲಿ ಗೆಲ್ಲಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂದ ಬೊಮ್ಮಾಯಿಯವರು, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಆಡಳಿತ ನಡೆಸಿದ ಪಕ್ಷಕ್ಕೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಸಲ್ಲದು’ ಎಂದರು.
‘ಸಚಿವರ ನಾಲಿಗೆ ಕತ್ತರಿಸಿದವರಿಗೆ 10 ಕೋಟಿ ರೂಪಾಯಿ ಬಹುಮಾನ’ ಘೋಷಿಸಿದ ಧರ್ಮಗುರು..?!
“ಹುಬ್ಬಳ್ಳಿಯಲ್ಲಿ ನಡೆಸುತ್ತಿರುವುದು ಯುವಜನೋತ್ಸವ ಅಲ್ಲ ಯುವ ವಿನಾಶೋತ್ಸವ”..!: ಸಿದ್ದರಾಮಯ್ಯ
ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..