Film News:
ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಬ್ಯೂಟಿಫುಲ್ ಬೆಡಗಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ನಿವ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿ ಫ್ಯಾನ್ಸ್ ನಿದ್ದೆಗೆಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಫ್ಯಾನ್ಸ್ ಅವರ ಫೋಟೋ ನೋಡಿ ಹೊಸ ಹೆಸರನ್ನು ಕೂಡಾ ಇಟ್ಟಿದ್ದಾರಂತೆ ಹಾಗಿದ್ರೆ ಯಾರೀ ಬೆಡಗಿ ಇಲ್ಲಿದೆ ಕಂಪ್ಲೀಟ್ ಸ್ಟೋರಿ…
ಆಕೆ ಮಂಗಳೂರಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದ ಚೆಂದುಳ್ಳಿ ಚೆಲುವೆ. ಕಿರುತೆರೆ ಮೂಲಕ ಎಂಟ್ರಿಕೊಟ್ಟು ಇದೀಗೆ ಸಿನಿಮಾ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಹಾಲುಗೆನ್ನೆ ಬೆಡಗಿ. ಎಷ್ಟೇ ಸಿನಿಮಾ ಮಾಡಿದ್ರು ಕಿರುತೆರೆಯನ್ನ ಮರೆಯೋಲ್ಲ ಅಂತರೋ ಹುಡುಗಿ.ಎಸ್ ಆಕೆ ಮತ್ಯಾರು ಅಲ್ಲ ಜೊತೆಜೊತೆಯಲಿ ಮೂಲಕ ಅನು ಸಿರಿಮನೆಯಾಗಿ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ.
ಹೌದು. ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ಮೇಘಾ ಶೆಟ್ಟಿ ಹೆಸರುವಾಸಿಯಾಗಿದ್ದಾರೆ. ಅನು ಸಿರಿಮನೆ ಎಂಬ ಹೆಸರಿನಲ್ಲಿ ಕನ್ನಡ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ. ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸಮಯದಲ್ಲೇ ಇದೀಗ ಫೋಟೋಶೂಟ್ ಮಾಡಿಸಿ ಸುದ್ದಿಯಾಗುತ್ತಿರೋ ಮೇಘಾ ಶೆಟ್ಟಿಗೆ ಇತ್ತೀಚೆಗಷ್ಟೇ ಫ್ಯಾನ್ಸ್ ಬಾಲಿವುಡ್ ನಟಿ ತರಾ ಕಾಣಿಸ್ತಾ ಇದ್ದೀರಾ ಎಂದು ಕಮೆಂಟ್ ಮಾಡಿದ್ದರು ಇದೀಗ ಮತ್ತೆ ಹೊಸದೊಂದು ಫೋಟೋ ಶೂಟ್ ಮಾಡಿಸಿದ್ದಾರೆ ಮೇಘಾ ಶೆಟ್ಟಿ.
ಹೌದು ಬಿಳಿ ಹೂವಿನ ಡಿಸೈನ್ ಇರೋ ಡ್ರೆಸ್ ನಲ್ಲಿ ಮಿಂಚಿರೋ ಮೇಘಾ ಶೆಟ್ಟಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಬಿಳಿ ಗುಲಾಬಿಯ ವಿನ್ಯಾಸದ ಬಟ್ಟೆ ಇದಾಗಿದ್ದು ಮೇಘಾ ಪೋಸ್ ಗೆ ಫ್ಯಾನ್ಸ್ ಫಿದಾ ಆಗಿ ಬಿಳಿ ಗುಲಾಬಿ ಎಂದು ಹೆಸರಿಟ್ಟಿದ್ದಾರೆ. ಎಲ್ಲರೂ ‘ಬಿಳಿ ಗುಲಾಬಿ’ ಎಂದು ಕರೆದಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ. ಇದು ಅವರ 300ನೇ ಪೋಸ್ಟ್ ಅನ್ನೋದು ವಿಶೇಷ.