Political News: ಸದನದಲ್ಲಿ ಆಡಳಿತ ಪಕ್ಷ ವಿಪಕ್ಷಗಳ ನಡುವೆ ಗದ್ದಲ ಜೋರಾಗುತ್ತಿದೆ. ಯತ್ನಾಳ್ ಮಾತಿಗೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆಶಿ ಕೆಂಡಾಮಂಡಲವಾದರು.
ಭ್ರಷ್ಟಾಚಾರದ ವಿಚಾರವಾಗಿ ಯತ್ನಾಳ್ ಎದ್ದುನಿಂತು ನಿರಂತರ ಆರೋಪಿಸುತ್ತಿರುವ ವೇಳೆಯಲ್ಲಿ ಡಿಕೆಶಿವಕುಮಾರ್ ಅವರನ್ನು ಭ್ರಷ್ಟಾಚಾರದ ಬಂಡೆ ಎಂಬುವುದಾಗಿ ಕುಟುಕಿದರು.
ಇದೇ ವೇಳೆ ರೊಚ್ಚಿಗೆದ್ದ ಡಿಸಿಎಂ ಡಿಕೆಶಿ ಪ್ರತಿಮಾತುಗಳಾಡಿದರು. ಏಯ್ ಕೂತ್ಕೊಳ್ಳಯ್ಯ ಸುಮ್ಮನೆ ನಾನಾಗಿದ್ದರೆ ಈ ಕ್ಷಣನೇ ಇಂತಹವರನ್ನು ಪಕ್ಷದಿಂದ ಡಿಸ್ಮಿಸ್ ಮಾಡುತ್ತಿದ್ದೆ, ನಿಮ್ಮಂತವರಿಂದಲೇ ನೀವು ಈಗ ವಿಪಕ್ಷ ಸ್ಥಾನದಲ್ಲಿ ಕುಳಿತಿರುವುದು ಎಂಬುವುದಾಗಿ ಪ್ರತಿ ಮಾತುಗಳನ್ನು ಆಡಿದರು.
ಒಂದು ಕ್ಷಣ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು.
Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ