Thursday, February 6, 2025

Latest Posts

Fraud Case : ಡಿಕೆ ಸುರೇಶ್ ಆಯ್ತು ಈಗ ಸೋಮಣ್ಣ ಸರದಿ! :ರಾಜ್ಯದಲ್ಲಿ ಯಾಕೆ ಹೀಗೆ ಆಗ್ತಿದೆ !

- Advertisement -

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಭಾವಿ ನಾಯಕರ ಹೆಸರಿನಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ನಡುವೆ ತುಮಕೂರಿನಲ್ಲಿ ಕೂಡ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಹಿ ದುರುಪಯೋಗ ಮಾಡಿಕೊಂಡು ವಂಚನೆ ಮಾಡಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

 

ರಾಜ್ಯದಲ್ಲಿ ಇತ್ತೀಚೆಗೆ ಡಿಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ಚಿನ್ನ ಖರೀದಿಸಿ ವಂಚಿಸಿದ ಪ್ರಕರಣವೊಂದು ಇಡೀ ರಾಜ್ಯದ ಗಮನ ಸೆಳೆದಿತ್ತು. ಇದಿಗ ತುಮಕೂರಿನಲ್ಲಿ ನಕಲಿ ಲೆಟರ್ ಹೆಡ್ ಮತ್ತು ಸಹಿ ಹಾಕಿ ವಂಚಿಸಿದ ಹಿನ್ನೆಲೆ ಓರ್ವ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ನಿವಾಸಿ ಗೋವರ್ಧನ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಸಚಿವ ವಿ. ಸೋಮಣ್ಣ ಮತ್ತು ಕಾರ್ಯದರ್ಶಿಯ ಹೆಸರಲ್ಲಿ ಗೋವರ್ಧನ ಎಂಬಾತ ವಂಚನೆಗೆ ಪಯತ್ನ ನಡೆಸಿದ್ದ ಎನ್ನಲಾಗಿದೆ. ಆತ ಗೃಹ ಸಚಿವರ ಹೆಸರಲ್ಲಿ ವಂಚನೆ ಬಳಿಕ ಕೇಂದ್ರ ಸಚಿವರ ಹೆಸರಲ್ಲಿ ವಂಚನೆಗೆ ಯತ್ನ ಮಾಡಿದ್ದಾನೆ. ಕೇಂದ್ರ ಸಚಿವ ಸೋಮಣ್ಣ, ಕಾರ್ಯದರ್ಶಿ ಶಾಲಿನಿ ರಜನೀಶ್ ಹೆಸರಲ್ಲಿ ವಂಚನೆಗೆ ಯತ್ನ ನಡೆಸಿದ್ದಾನೆ. ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಸಹಿ, ಲೆಟರ್ ಹೆಡ್ ನಕಲು ಮಾಡಿದ್ದ ಗೋವರ್ಧನ್ ಶಾಲಿನಿ ರಜನೀಶ್​ ಹೆಸರಲ್ಲಿ ನಕಲಿ ಆದೇಶ ಪ್ರತಿಯನ್ನೂ ನೀಡಿದ್ದ ಎಂಬ ಆರೋಪ ಕೇಳಿ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸೋಮಣ್ಣ ಅವರ ಆಪ್ತ ಸಹಾಯಕನ ದೂರಿನ ಮೇರೆಗೆ ಗೋವರ್ಧನ ಎಂಬಾತನನ್ನು ಬಂಧಿಸಲಾಗಿದೆ. ಸೋಮಣ್ಣ ಅವರ ಕಚೇರಿಯ ಆಪ್ತ ಸಹಾಯಕ ಮಹೇಶ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಪ್ರಭಾವಿಗಳ ಹೆಸರಲ್ಲಿ ನಕಲಿ ಸಹಿ ಮತ್ತು ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಆರೋಪಿ ಗೋವರ್ಧನ ನಕಲಿ ಆದೇಶ ಪ್ರತಿ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್​ಇಪಿಎಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest Posts

Don't Miss