Political News
ಬೆಂಗಳೂರು(ಫೆ.9): ರಾಜಕೀಯ ರಂಗದಲ್ಲಿ ಒಂದಲ್ಲಾ ಒಂದು ಬದಲಾವಣೆ ಆಗುತ್ತಿರುವ ಹಿನ್ನಲೆಯಲ್ಲಿ ಪಕ್ಷಗಳ ನಡುವೆ ಹಲವಾರು ರೀತಿಯಲ್ಲಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡು ರಾಜ್ಯದಲ್ಲಿ ಸುತ್ತವರೆಯುತ್ತಿದೆ. ಇದೀಗ ಪ್ರಜಾಧ್ವನಿ ಯಾತ್ರೆಯ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿ. ಆರ್ ಅಂಬೇಡ್ಕರ್ ಅವರ ಪತ್ಥಳಿಗೆ ಹೂವಿನ ಹಾರ ಎಸೆದಿರುವ ಘಟನೆ ನಡೆದಿದೆ. ಈ ಘಟನೆ ಎರಡು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದಿದೆ ಎಂಬ ಮಾಹಿತಿಯಿದೆ.
ಈಗಾಗಲೇ ಬಹಳ ಅದ್ಧೂರಿಯಾಗಿ ನಡೆಯುತ್ತಿರುವ ಪ್ರಜಾಧ್ವನಿ ಯಾತ್ರೆ ಜನರನ್ನು ತಲುಪುತ್ತಿದೆ, ಈ ವೇಳೆ ಯಾತ್ರೆಯ ವೇಳೆ ಡಿಕೆ ಶಿವಕುಮಾರ್ ಅವರು ಹಾರ ಎಸೆದಿರುವುದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅನ್ನೋದು ಕಾಂಗ್ರೆಸ್ ನ ಆಶಯ, ಹೀಗಾಗಿ ದಲಿತರನ್ನು ಅವಮಾನ ಮಾಡೋದು ಕಾಂಗ್ರೆಸ್ ನ ಹುಟ್ಟುಗುಣ, ಡಿಕೆ ಶಿವಕುಮಾರ್ ಅವರ ವರ್ತನೆ ನಾಚಿಕೆಗೇಡಿನ ವಿಚಾರ ಎಂದು ಬಿಜೆಪಿ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದೆ.