Sunday, December 22, 2024

Latest Posts

ಇಂಟ್ರೆಸ್ಟಿಂಗ್ ಸ್ಟೋರಿ : ಡಿಕೆಶಿ ರಾಜಕಾರಣದ ಆ ದಿನಗಳು..!

- Advertisement -

ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್ ಡಿಕೆ ಶಿವಕುಮಾರ್.. ಹೌದು ಇಡೀ ದೇಶಾದ್ಯಂತ ಇಂದು ಕೇಳಿ ಬರ್ತಿರುವ ಹೆಸರು ಇದೊಂದೆ. ಯಾಕಂದ್ರೆ  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿಯನ್ನ ಇಡಿ ಅಧಿಕಾರಿಗಳು ಹಿಡಿದು ತನಿಖೆಗೆ ಒಳಪಡಿಸಿದ್ದಾರೆ. ಒಂದು ಕಾಲದಲ್ಲಿ ಒಂದೊತ್ತು ಊಟಕ್ಕೂ ಕಷ್ಟಪಟ್ಟಿದ್ರು. 35 ವರ್ಷಗಳ ಹಿಂದೆ ಡಿಕೆಶಿವಕುಮಾರ್ ಬೆಂಗಳೂರಿನಲ್ಲಿ ಇರಲು ಜಾಗವಿಲ್ಲದೆ ಪಡಬಾರದ ಕಷ್ಟಪಟ್ಟಿದ್ದಾರೆ.. ರಾಜಕಾರಣದ ಆರಂಭದ ದಿನದಿಂದಲೂ ಚಾಣಕ್ಯನ ತಂತ್ರ ಪಯೋಗಿಸಿ ಇದೀಗ ಪ್ರಭಾವಿ ನಾಯಕನಾಗಿ ಬೆಳೆದು ನಿಂತಿದ್ದಾರೆ.  ಇಂದು ಇಷ್ಟೊಂದು ಪ್ರಭಾವಿಯಾದ ಡಿಕೆ ಶಿವಕುಮಾರ್ ಗೆ ಕಾಂಗ್ರೆಸ್ ನಲ್ಲಿ ಪರ್ಯಾಯ ಒಕ್ಕಲಿಗ ನಾಯಕರೇ ಇಲ್ಲಅಂತ ಎಲ್ರೂ ಅಂದು ಕೊಳ್ತಿದ್ದಾರೆ ಸದ್ಯಕ್ಕೆ ಅದು ಸತ್ಯನೆ.. ಇತ್ತ ಬಿಜೆಪಿಯಲ್ಲಿ ಆರ್. ಅಶೋಕ್ ಹಿರಿಯ ಒಕ್ಕಲಿಗ ನಾಯಕರಾದ್ರೂ ಅಡ್ಜೆಸ್ಟ್ ಮೆಂಟ್ ರಾಜಕಾರಣಿ ಅನ್ನುವ ಆರೋಪ. ಹೀಗಾಗಿ ಮಲ್ಲೇಶ್ವರಂ ಶಾಸಕ ಡಾ ಅಶ್ವಥ್ ನಾರಾಯಣ್ ಗೆ ಸಚಿವ ಸ್ಥಾನ ಕೊಟ್ಟು ಡಿಸಿಎಂ ಪಟ್ಟ ಕಟ್ಟಿದ್ದಾರೆ. ಆದ್ರೆ, ಕೆಲವರು ಅಂದುಕೊಳ್ಳಬಹುದೇನೋ.. ಡಿ.ಕೆ.ಶಿಗೆ ಯಾವ ಕಾರ್ನನರ್ ನಲ್ಲೂ ಅಶ್ವಥ್ ನಾರಾಯಣ್ ಸರಿಸಾಟಿ ಅಲ್ಲ ಅಂತ.. ಆದ್ರೆ, ಈ ಸ್ಟೋರಿ ಕೇಳಿದ್ರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಾ..

ಈಗ ಡಿಸಿಎಂ ಆಗಿರುವ ಅಶ್ವಥ್ ನಾರಾಯಣ್ 30 ವರ್ಷಗಳ ಹಿಂದೆ ಡಿಕೆಶಿಗೆ ರಾಜಕೀಯವಾಗಿ ಮೊದಲ ಪೋಸ್ಟ್ ಕೊಟ್ರು.. ಇದೇ ಅಶ್ವಥ್ ನಾರಾಯಣ್ ಮುಂದೆ 30 ವರ್ಷಗಳ ಹಿಂದೆ ಡಿಕೆಶಿ ಕೈಕಟ್ಟಿ ಕಾಂಗ್ರೆಸ್ ಪಕ್ಷದಲ್ಲಿ ಪದವಿಗಾಗಿ ಕೋರಿ ನಿಂತ್ರು.. ಆಗ ಬೆಂಗಳೂರು ರೂರಲ್ ಯೂತ್ ಕಾಂಗ್ರೆಸ್ ಆರ್ಗನೈಸ್ ಸೆಕ್ರೇಟರಿ ಪೋಸ್ಟ್ ಕೊಟ್ಟಿದ್ದು ಇದೇ ಡಿಸಿಎಂ ಆಗಿರುವ ಅಶ್ವಥ್ ನಾರಾಯಣ್..  ಹಿಂದೆ ಡಾ. ಅಶ್ವಥ್ ನಾರಾಯಣ್ ಕಾಂಗ್ರೆಸ್ ಪಕ್ಷದಲ್ಲಿ ಮಾರ್ಗರೇಟ್ ಆಳ್ವಾ ಶಿಷ್ಯರಾಗಿದ್ರಂತೆ. ಆದ್ರೆ ಎಷ್ಟೋ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ.. ಡಿಕೆಶಿವಕುಮಾರ್ ಬೆಳೆದು ಬಂದ ಹಾದಿಯನ್ನ ಹಿರಿಯ ರಾಜಕಾರಣಿ ಡಿಕೆಶಿ ಸಿನಿಯರ್, ಒಡನಾಡಿ ಆರ್.ವಿ ಹರೀಶ್ ತುಂಬಾ ಸೋಗಸಾಗಿ ಹೇಳಿದ್ದಾರೆ.. ಅಗ್ನಿ ಶ್ರೀಧರ್ ( Agni Sreedhar ) ಅವರ ಯೂಟ್ಯೂಬ್ ಚಾನಲ್ ನಲ್ಲಿ 2019. ಫೆಬ್ರವರಿ 11ರಂದು ‘77 ಶಿವು ಲೆಕ್ಕಾಚಾರ – ಬಂಗಾರಪ್ಪಅಡಿಪಾಯ ಅರ್ಧ ಶತಮಾನದ ಜಾಡಿನಲ್ಲಿ”ಅಪ್ ಲೋಡ್ ಆಗಿರುವ  12 ನಿಮಿಷ 40 ಸೆಕೆಂಡ್ ವರೆಗೆ ವಿಡಿಯೋ ಸಂಪೂರ್ಣ ನೋಡಿ.

ಸುದ್ದಿಯ ಕೃಪೆ : ಅಗ್ನಿ ಶ್ರೀಧರ್ ಅವರ ಯುಟ್ಯೂಬ್ ಚಾನಲ್ ಹಾಗೂ ಹಿರಿಯ ರಾಜಕಾರಣಿ ಆರ್.ವಿ ಹರೀಶ್ ರವರು

- Advertisement -

Latest Posts

Don't Miss