Thursday, February 13, 2025

Latest Posts

“ಮೋದಿ ಸರಕಾರಕ್ಕೆ ಕರ್ನಾಟಕದ ಬಗ್ಗೆ ಗೌರವವಿಲ್ಲ”..?!

- Advertisement -

Political News:

ಗಣರಾಜ್ಯೋತ್ಸವದ ತಯಾರಿಯಲ್ಲಿದೆ ಸರಕಾರ. ಆದರೆ ಈ ತರಾತುರಿಯಲ್ಲಿ ಸರಕಾರ ಎಡವೊಟ್ಟೊಂದನ್ನು ಮಾಡಿಕೊಂಡಿದೆ. ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಮೋದಿ ಸರಕಾರಕ್ಕೆ ಕರ್ನಾಟಕದ ಬಗ್ಗೆ ಗೌರವವಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಟ್ಯಾಬ್ಲೋ ಕೈ ಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು ಕರ್ನಾಟಕ ರಾಜ್ಯವೆಂದರೆ ಮೋದಿಗೆ ಒಂಥರ ಅಸಡ್ಡೆ. ರಾಜ್ಯದ ಸಮಸ್ಯೆ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ, ಧೈರ್ಯವಿಲ್ಲ
ರಾಜ್ಯದಲ್ಲಿ 25 ಸಂಸದರಿದ್ದಾರೆ. ಅವರನ್ನು ಕರೆದು ಒಂದು ದಿನ ಕೂಡ ಚರ್ಚೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ರಾಜ್ಯದ ಸಮಸ್ಯೆ ಬಗ್ಗೆ ನಿಯೋಗ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕಾಗಿತ್ತು. ಅದೂ ಕೂಡಾ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮೀಸಲಾತಿ ಹೆಚ್ಚಳದ ಬಗ್ಗೆ ಸರಿಯಾದ ಮಾಹಿತಿಯನ್ನು ಈ ಸರ್ಕಾರ ನೀಡಿಲ್ಲ. ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬುದು ಅದರಿಂದ ಗೊತ್ತಾಗುತ್ತಿದೆ. ಈ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಬೇಕು ಎಂಬುದಾಗಿ ಕರೆ ಕೂಡಾ ನೀಡಿದ್ದಾರೆ ಎನ್ನಲಾಗಿದೆ.

ಭಾರತಕ್ಕೆ ಬರಲಿವೆ ಮತ್ತಷ್ಟು ಚೀತಾಗಳು..! ಎಲ್ಲಿಂದ ಗೊತ್ತಾ..?!

ಪಕ್ಷಿ ಪ್ರಿಯರಿಗೆ ಹಕ್ಕಿ ಹಬ್ಬ…! ಚಾರಣ ಸ್ಥಳದಲ್ಲಿ 3೦೦ ಪ್ರಭೇದದ ಪಕ್ಷಿಗಳು…!

“ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ”:ಶಾಸಕ ಪ್ರೀತಂಗೌಡ

- Advertisement -

Latest Posts

Don't Miss