Thursday, January 16, 2025

Latest Posts

ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!

- Advertisement -

State News:

ಡಿ.ಕೆ.ಶಿವಕುಮಾರ್ ವಿರುದ್ಧ  ಇದೀಗ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ರಾಜಕಾರಣದಲ್ಲಿ ಇರಲು ನಾಲಾಯಕ್‌ ಆಗಿದ್ದಾರೆ. ಎಲ್ಲರ ಸಿಡಿ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ. ನಾನು ಸಹಕಾರ ಸಚಿವ ಆಗಿದ್ದಾಗ 10 ಸಾವಿರ ಕೋಟಿ ರೂ. ಫೈಲ್‌ಗಳನ್ನು ಕ್ಲಿಯರ್‌ ಮಾಡಲು ಹೇಳಿದ್ದರು. ಆದರೆ, ನಾನು ಇದಕ್ಕೂ ಒಪ್ಪಿಕೊಂಡಿರಲಿಲ್ಲ. ಜೊತೆಗೆ ಅವರು ಹೇಳಿದವರಿಗೆ ಕಾಮಗಾರಿಗಳ ಟೆಂಡರ್‌ ಕೊಡದಿದ್ದರಿಂದ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊದಿಗೆ ಮಾತನಾಡಿದ ಅವರು, ರಾಜ್ಯದ ಹಲವು ನಾಯಕರ ಸಿಡಿ ಇಟ್ಟುಕೊಂಡು ಬ್ಲಾಕ್‌ ಮೇಲ್‌ ಮಾಡುತ್ತಾರೆ. ನಾನು ಸಚಿವನಾಗಿದ್ದರೂ ಅವರು ಹೇಳಿದ ಕಾಮಗಾರಿಗಳನ್ನು, ಯೋಜನೆಗಳನ್ನು ಜಾರಿಗೊಳಿಸಿ ಅವರು ಹೇಳಿದವರಿಗೆ ಟೆಂಡರ್‌ ಕೊಡಬೇಕಿತ್ತು. ಈ ಬಗ್ಗೆ ಭಾರಿ ಪ್ರಮಾಣದಲ್ಲಿ ನನಗೆ ಬ್ಲಾಕ್‌ಮೇಲ್‌ ಮಾಡಿದ್ದರು. ನೀವು ನಾನು ಹೇಳಿದ ಮಾತನ್ನು ಕೇಳದಿದ್ದರೆ ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ನಾನು ಅವರ ಷರತ್ತಿಗೆ ಒಪ್ಪಿಕೊಂಡಿದ್ದರೆ ಅಂದು ಸಿಡಿ ಹೊರಬರುತ್ತಿರಲಿಲ್ಲ. ನಾನು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ಜೀವನ ಹಾಳಾಗಲಿಲ್ಲ ಎಂದು ಹೇಳಿದ್ದಾರೆ.

“ಕಮಲ” ಬಿಟ್ಟು “ದಳ” ಸೇರಿದ ಹಿರಿಯ ನಾಯಕ…!

ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಬೇಕಿದೆ: ರಿಷಭ್ ಶೆಟ್ಟಿ

ಡಾ. ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ..?! ಸಿಎಂ ಹೇಳಿದ್ದೇನು..?!

- Advertisement -

Latest Posts

Don't Miss