Political News: ನಾವು ಹುಟ್ಟಿ ಬೆಳೆದ ಮನೆಗೆ ನಮಗೇ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್ ಬೇಸರ

Political News: ನಟ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್, ನಾವು ಹುಟ್ಟಿ ಬೆಳೆದ ಮನೆಗೆ ನಮಗೇ ಪ್ರವೇಶ ಸಿಗುತ್ತಿಲ್ಲವೆಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನಪಟ್ಟಣದ ಚಕ್ಕೆರೆ ಎಂಬಲ್ಲಿ ನಿಶಾ ಯೋಗೇಶ್ವರ್ ಅವರ ಮನೆ ಇದೆ. ಸದ್ಯ ತಂದೆ ಸಿ.ಪಿ.ಯೋಗೇಶ್ವರ್ ಮತ್ತು ಅವರ ಮಗಳಾದ ನಿಶಾ ಯೋಗೇಶ್ವರ ಮಧ್ಯೆ ಸಂಬಂಧ ಹದಗೆಟ್ಟಿದ್ದು, ಪುತ್ರಿಯನ್ನು ಯೋಗೇಶ್ವರ್ ದೂರ ಮಾಡಿದ್ದಾರೆ. ಹಾಗಾಗಿ ನಿಶಾ ಮತ್ತು ಅವರ ಸಹೋದರನಿಗೆ ಮನೆಗೆ ಪ್ರವೇಶ ಸಿಗುತ್ತಿಲ್ಲವೆಂದು ನಿಶಾ ಆರೋಪಿಸಿದ್ದಾರೆ.

ಊರ ಜಾತ್ರೆ ನಿಮಿತ್ತ ನಿಶಾ ಮತ್ತು ಅವರ ಸಹೋದರ ಮನೆಗೆ ಬಂದಿದ್ದು, ಮನೆಗೆ ಪ್ರವೇಶ ಸಿಗುತ್ತಿಲ್ಲ. ನಾವು ಹೋಗೋದಾದ್ರೆ ಅಮ್ಮನ ಆಶೀರ್ವಾದ ಪಡೇದೇ ಹೋಗೋದು. ಹಾಗೇ ಹೋಗುವ ಮಾತೇ ಇಲ್ಲ ಎಂದು ನಿಶಾ ಮನೆಯ ಎದುರು ಕುರ್ಚಿ ಹಾಕಿ ಕುಳಿತು ಮೌನ ಪ್ರತಿಭಟನೆ ಮಾಡಿದ್ದಾರೆ. ಕೆಲ ಗ್ರಾಮಸ್ಥರು ನಿಶಾ ಅವರಿಗೆ ಸಾಥ್ ನೀಡಿದ್ದಾರೆ.

ನಿಶಾ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಚನ್ನಪಟ್ಟದ ಚೆಕ್ಕೆರೆ ಗ್ರಾಮದೇವತೆಯ ಜಾತ್ರೆಗಾಗಿ ಊರಿಗೆ ಬಂದಿದ್ದೆವು. ಆದರೆ ಮನೆಯ ಗೇಟ್‌ಗೆ ಬೀಗ ಹಾಕಿದೆ. ನನ್ನ ಬಳಿ ಬೀಗದ ಕೈ ಇಲ್ಲ. ಸಂಬಂಧಿಕರಿಗೆ ಕಾಲ್ ಮಾಡಿದರೂ ಏನು ರೆಸ್ಪಾನ್ಸ್ ನೀಡಲಿಲ್ಲ. ಅಲ್ಲದೇ, ನಮಗೆ ಕೀ ಕೂಡ ಸಿಕ್ಕಿಲ್ಲ. ನಾವು ಹಬ್ಬ ಆಚರಿಸಲು ಬಂದಿದ್ದೇವೆ. ಆದರೆ ನಮಗೆ ಒಳಗಡೆ ಹೋಗಲು ಅವಕಾಶ ಸಿಗುತ್ತಿಲ್ಲ. ಆದರೆ ತಾಯಿಯ ಆಶೀರ್ವಾದ ಇಲ್ಲದೇ ನಾನು ಹೋಗುವವಳಲ್ಲ ಎಂದು ನಿಶಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಹೋದರ, ತಾವು ಚಿಕ್ಕಂದಿನಲ್ಲಿ ಯಾವ ರೀತಿ ಜಾತ್ರೆ ಆಚರಿಸುತ್ತಿದ್ದೆವು. ಸಂಬಂಧಿಕರ ಜೊತೆ ಸೇರಿ ಯಾವ ರೀತಿ ಹಬ್ಬ ಮಾಡುತ್ತಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ. ಅಲ್ಲದೇ ನಿಶಾ ಯೋಗೇಶ್ವರ್ ಅವರು ಉಪವಾಸ ಮಾಡಿದ್ದರು ಕೂಡ, ಅವರ ಹಿತೈಷಿಗಳು, ಸ್ನೇಹಿತರು ಅಡು ಮಾಡಿ, ಬುತ್ತಿ ತಂದು, ನಿಶಾ ಅವರನ್ನು ಊಟಕ್ಕೆ ಕರೆದಿದ್ದಾರೆ. ಅವರಿಗೆಲ್ಲ ನಾನು ಆಭಾರಿ ಎಂದು ನಿಶಾ ತಿಳಿಸಿದ್ದಾರೆ. ಮನೆಯ ಆಚೆ ನಿಂತು ರಾತ್ರಿಯೆಎಲ್ಲ ಕಾದರೂ ಮನೆಗೆ ಪ್ರವೇಶ ಸಿಗಲಿಲ್ಲ. ಆದರೂ ನಿಶಾ ಜಾತ್ರೆ ಮುಗಿಸಿಯೇ ಹೋಗೋದು ಎಂದು ಪಣ ತೊಟ್ಟಿದ್ದಾರೆ. ಅಂದಹಾಗೆ ನಿಶಾ ಅವರಿಗೆ ಕಾಲು ಫ್ರ್ಯಾಕ್ಚರ್ ಕೂಡ ಆಗಿದೆ. ಆದರೂ ಆಕೆ ಹಬ್ಬ ಆಚರಿಸಲೇಬೇಕು ಎಂದು ನಿರ್ಧರಿಸಿದ್ದಾರೆ.

About The Author