Sunday, April 13, 2025

Latest Posts

ಡಿಕೆಶಿಗೆ ಜಾಮೀನು, ಆದ್ರೆ ಮತ್ತೆ ಬಂಧನದ ಭೀತಿ..!

- Advertisement -

ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.

ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು, 25 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟ್ ನೀಡಬೇಕು. ಅಗತ್ಯ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಿ ಸಹಕರಿಸಬೇಕು ಎಂದು ಕೋರ್ಟ್ ಷರತ್ತುಗಳನ್ನು ಹಾಕಿದೆ.

ಡಿಕೆ ಶಿವಕುಮಾರ್ ಅವರು ರಾಜಕಾರಣಿ ಹೀಗಾಗಿ ಅವರು ವಿದೇಶಕ್ಕೆ ಪರಾರಿಯಾಗುವುದಿಲ್ಲ. ಅವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಕರೆದರೂ ಹಾಜರಾಗುತ್ತಾರೆ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದರು. ಈ ವಾದ ಪುರಸ್ಕರಿಸಿದ ನ್ಯಾಯಾಲಯ ಇಂದು ಜಾಮೀನು ಮಂಜೂರು ಮಾಡಿದೆ.

ಸುಪ್ರೀಂ ಕೋರ್ಟ್ ನಲ್ಲಿ ಇಡಿ ಮೇಲ್ಮನವಿಗೆ ನಿರ್ಧಾರ

ಇನ್ನು ದೆಹಲಿ ಹೈಕೋರ್ಟ್ ಜಾಮೀನು ಕೊಟ್ಟಿರುವುದನ್ನ ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಏನಾದರೂ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ರೆ ಮತ್ತೆ ಡಿಕೆಶಿ ಬಂಧನವಾಗುವ ಸಾಧ್ಯತೆ ಇದೆ. ಇದಲ್ಲದೆ ಸೋಲಾರ್ ಹಂಚಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಶುರುವಾಗಿದ್ದು ಆ ಪ್ರಕರಣದಲ್ಲಿ ಡಿಕೆಶಿಗೆ ಸಂಕಷ್ಟ ಎದುರಾಗಬಹುದು.. ಈಗ ಡಿಕೆಶಿ ಜಾಮೀನು ಪಡೆದಿದ್ರು, ಇನ್ನು ಹಲವು ಪ್ರಕರಣಗಳಲ್ಲಿ ಮತ್ತೆ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿದ್ದಾರೆ.

- Advertisement -

Latest Posts

Don't Miss