Wednesday, August 20, 2025

Latest Posts

ಡಿಕೆ ಶಿವಕುಮಾರ್ ರಿಲೀಸ್ ಆಗೋದು ಯಾವಾಗ..?

- Advertisement -

ಆಪರೇಷನ್​ ಆಟವೋ.. ಗದ್ದುಗೆ ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್​ನಿಂದ 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ ಅಲ್ಲ.. ಬಿಜೆಪಿ ಮಾಸ್ಟರ್​ ಮೈಂಡ್ ಅಮಿತ್ ಶಾ ತಂತ್ರಗಾರಿಕೆಯಿಂದ.. ಅಮಿತ್​ ಶಾ ಸೂಚನೆಯಂತೆಯೇ ಎಲ್ಲವೂ ನಡೆದಿದ್ದು ಕಾಂಗ್ರೆಸ್ ಜೆಡಿಎಸ್ ಶಾಸಕರು ಗಟ್ಟಿ ನಿರ್ಧಾರ ಮಾಡಿದ್ದು ಕೂಡ ಇದೇ ಅಮಿತ್ ಶಾ ಮಾತಿನಿಂದ ಅನ್ನೋದು ಕೂಡ ಗೊತ್ತಿರೋ ಸಂಗತಿನೇ..

17 ಶಾಸಕರ ರಾಜೀನಾಮೆಯಿಂದ 105 ಶಾಸಕರನ್ನಷ್ಟೇ ಹೊಂದಿದ್ದ ಬಿಜೆಪಿ ಸರ್ಕಾರ ರಚಿಸಿದೆ.. ಆದ್ರೆ ಆ 17 ಶಾಸಕರು ಮಾತ್ರ ಅನರ್ಹಗೊಂಡಿದ್ದು ಅವರ ಭವಿಷ್ಯ ಅತಂತ್ರವಾಗಿದೆ. ಅತ್ತ ಶಾಸಕ ಸ್ಥಾನವನ್ನೂ ಕಳೆದುಕೊಂಡು ಇತ್ತ ಬಿಜೆಪಿ ಸರ್ಕಾರದಲ್ಲಿ ಅಧಿಕಾರವೂ ಇಲ್ಲದೇ ಅನರ್ಹ ಶಾಸಕರು ಅತಂತ್ರವಾಗಿದ್ದಾರೆ.. ಆದ್ರೂ ಬಿಜೆಪಿಗೆ ಬೆಂಬಲ ಕೊಟ್ಟ ಇವರಿಗೆಲ್ಲಾ ರಾಜಕೀಯ ಭವಿಷ್ಯ ರೂಪಿಸಬೇಕು ಅನ್ನೋದು ಯಡಿಯೂರಪ್ಪನವರ ಹಠ.. ಇದಕ್ಕಾಗಿ ಅಮಿತ್​ ಶಾ ಮೇಲೂ ಒತ್ತಡ ಹೇರಿದ್ದಾರೆ.. ಅಮಿತ್ ಶಾ ಕೂಡ ಈ 17 ಶಾಸಕರಿಗಾಗಿಯೇ ಒಂದು ದಾಳ ಉರುಳಿಸಿದ್ದಾರೆ.. ಅದೇ ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್​ಗೆ ಖೆಡ್ಡಾ ತೋಡಿರೋದು.. ಡಿಕೆಶಿ ಬೆನ್ನಿಗೆ ಇಡಿಯನ್ನ ಛೂಬಿಟ್ಟು ಲಾಕ್ ಮಾಡಿರೋದು ಅನ್ನೋ ಆರೋಪವೂ ಇದೆ..

ಉಪ ಚುನಾವಣೆ ಮುಗಿಯುವವರೆಗೂ ಲಾಕ್​..!?

 ಹೌದು, ಬಿಜೆಪಿಯ ಮಾಸ್ಟರ್​ ಮೈಂಡ್​ ಅಮಿತ್​ ಶಾ ಅವರೇ ರಣತಂತ್ರ ಹೆಣೆದಿದ್ದು ಡಿಕೆ ಶಿವಕುಮಾರ್​ಗೆ ಖೆಡ್ಡಾ ತೋಡಿದ್ದಾರೆ.. ಅದ್ರ ಪರಿಣಾಮೇ ಇವತ್ತು ಡಿಕೆಶಿ ಇಡಿ ಕುಣಿಕೆಯಲ್ಲಿ ಸಿಲುಕಿರೋದು ಅನ್ನೋ ಆರೋಪವೂ ಇದೆ.. ಯಾಕಂದ್ರೆ ಅನರ್ಹಗೊಂಡ 15 ಶಾಸಕರ ಕ್ಷೇತ್ರಗಳಿಗೆ  ಉಪ ಚುನಾವಣೆ ನಡೆಯಲಿದೆ.. ಆ ಚುನಾವಣೆಯಲ್ಲಿ ಕಾಂಗ್ರೆಸ್​ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್​ ರೋಷಾವೇಶದಿಂದ ಹೋರಾಡ್ತಾರೆ.. ಹೀಗಾಗಿ ಡಿಕೆಶಿಯನ್ನ ಈಗಲೇ ಕಟ್ಟಿಹಾಕಬೇಕು ಅನ್ನೋದು ಅಮಿತ್ ಶಾ ರಣತಂತ್ರ ಎನ್ನಲಾಗಿದೆ..  ಆದ್ದರಿಂದಲೇ ಡಿಕೆಶಿಯನ್ನ ಬಿಟ್ರೂ ನೆಮ್ಮದಿಯಿಂದ ಇರಲು ಬಿಡೋದಿಲ್ಲ.. ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ಡಿಕೆಶಿ  ಒಬ್ಬೊಬ್ಬ ಬೆಂಬಲಿಗರನ್ನೇ ಬೇಟೆಯಾಡುತ್ತಿದ್ದಾರೆ. 180ಕ್ಕೂ ಹೆಚ್ಚು ಮಂದಿಗೆ ನೋಟಿಸ್​ ಕೊಟ್ಟು ಬಲೆ ಬೀಸಿದ್ದಾರೆ ಎನ್ನಲಾಗಿದೆ..

ಮೊನ್ನೆಯಷ್ಟೇ ಡಿಕೆಶಿ ಪುತ್ರಿ ಐಶ್ವರ್ಯ ವಿಚಾರಣೆ ಮಾಡಿದ್ರು.. ಇದಾದ ಮೇಲೆ ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್​​ಗೂ ಇಡಿ ಡ್ರಿಲ್​ ನಡೆದಿದೆ. ಲಕ್ಷ್ಮೀಯವರೇ ಹೇಳಿದಂತೆ ಇನ್ನೂ 180ಕ್ಕೂ ಹೆಚ್ಚು ಬೆಂಬಲಿಗರಿಗೆ ನೋಟಿಸ್ ಬಂದಿದ್ದು ವಿಚಾರಣೆ ಮಾಡೋ ಸಾಧ್ಯತೆ ಇದೆ.. ಸೋ ಇದನ್ನೆಲ್ಲಾ ನೋಡಿದ್ರೆ ಖಂಡಿತ ಕನಕಪುರದ ಬಂಡೆ ಡಿಕೆಶಿಗೆ ಇಡಿ ಕುಣಿಕೆ ಅಷ್ಟು ಬೇಗ ಮುಗಿಯೋದಿಲ್ಲ ಅನ್ನೋದು ಅರ್ಥವಾಗ್ತಿದೆ.. ಕಾಂಗ್ರೆಸ್​ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್​ ಅಕ್ರಮ ಹಣ ವರ್ಗಾವಣೆ ಪ್ರಕರಣ ಎಲ್ಲೆಲ್ಲಿಗೋ ಹೋಗ್ತಿದೆ.. ಅಷ್ಟು ಜನರನ್ನ ವಿಚಾರಣೆ ಮಾಡೋದು ಅಂದ್ರೆ ತುಂಬಾ ದಿನ ಟೈಮ್ ಬೇಕಾಗುತ್ತೆ.. ಅಲ್ಲಿವರೆಗೂ ಡಿಕೆಶಿವಕುಮಾರ್​ಗೆ ನೆಮ್ಮದಿ ಅನ್ನೋದೇ ಇರೋದಿಲ್ಲ…. ಇದೆಲ್ಲಾವನ್ನೂ ನೋಡಿದ್ರೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದ ಮೇಲೆ ಡಿಕೆ ಶಿವಕುಮಾರ್ ಗೆ ಬಿಡುಗಡೆ ಭಾಗ್ಯ ಸಿಗಬಹುದೇನೋ..?

ನಿಮ್ಮ ಪ್ರಕಾರ ಶಿವಕುಮಾರ್ ಪ್ರಾಮಾಣಿಕರಾ..? ಅಮಿತ್ ಶಾ ಸೇಡಿನ ರಾಜಕಾರಣ ಮಾಡ್ತಿದ್ದಾರಾ..? ಈ ಬಗ್ಗೆ ಕಾಮೆಂಟ್ ಮಾಡಿ..

- Advertisement -

Latest Posts

Don't Miss