- Advertisement -
ಮಂಡ್ಯ: ಜೆಡಿಎಸ್ ಪ್ರಾಬಲ್ಯ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿಚಾರವಾಗಿ ದುಗ್ಗನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ನಂಬಿಕೆ ಯಾಕಿದೆ? ರಾಜ್ಯದಲ್ಲಿ ಕಾಂಗ್ರೆಸ್ಸಿಗರ ಪರಿಸ್ಥಿತಿಯನ್ನು ನೋಡಿ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅವರು ವ್ಯಂಗವಾಡಿದರು. ಕಾಂಗ್ರೆಸ್ಸಿಗರಿಂದ ನಡೆದ ಚುನಾವಣಾ ಪೂರ್ವ ಸಮೀಕ್ಷೆ ವಿಚಾರವಾಗಿ ಮಾತನಾಡಿ, ಚಿನ್ನದ ತಗಡು ಹೊಡೆಸಿಕೊಂಡು ಮನೆ, ಕಚೇರಿಯಲ್ಲಿ ಹಾಕಿಕೊಳ್ಳೋಕೆ ಹೇಳಿ ನಿತ್ಯ ಅದನ್ನ ನೋಡಿಕೊಂಡು ಆನಂದಪಡಲಿ ಎಂದು ವಾಗ್ದಾಳಿ ನದೇಸಿದರು.
ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಡಿ. 22 ರಿಂದ ಕೇರಳಕ್ಕೆ 51 ರೈಲುಗಳ ಸಂಚಾರ
- Advertisement -