Wednesday, March 12, 2025

Latest Posts

ಶಾಗೆ ಶಾಕ್ ಕೊಡಲು ಜೈಲಿನಲ್ಲಿ ಡಿಕೆಶಿ ಮಾಸ್ಟರ್ ಪ್ಲಾನ್

- Advertisement -

ತಿಹಾರ್​ ಜೈಲು ಸೇರಿದ್ಮೇಲೆ ಹೆಚ್ಚಾಯ್ತು ಡಿಕೆಶಿ ಶಕ್ತಿ.. ಕನಕಪುರದ ಬಂಡೆ ಹೆಣೆದಿದ್ದಾರೆ ರಣತಂತ್ರ.. ಅಂದುಕೊಂಡಂತೆ ಆದ್ರೆ ಅಮಿತ್ ಶಾಗೆ ಬಿಗ್ ಶಾಕ್ ಗ್ಯಾರಂಟಿ..

 ಯಸ್​.. ಕನಕಪುರದ ಬಂಡೆ ಡಿಕೆಶಿಯನ್ನ ಇಡಿ ಅಧಿಕಾರಿಗಳು ಫುಲ್ ಲಾಕ್ ಮಾಡಿದ್ದಾರೆ.. ತಿಹಾರ್​ ಜೈಲಿನಲ್ಲಿ ಕ ಬಿ ಎಣಿಸುವಂತೆ ಮಾಡಿದ್ದಾರೆ.. ಆದ್ರೂ ಬಂಡೆಯಂತಹ ಡಿಕೆಶಿ ಈಗಲೂ ಜಗ್ಗಿಲ್ಲ.. ಜೈಲಿನಿಂದ ಬಂದ್ಮೇಲೆ ಏನ್ಮಾಡಬೇಕು.. ಮುಂದಿನ ನಡೆ ಹೇಗಿರಬೇಕು ಅಂತ ದಿಲ್ಲಿಯಲ್ಲೇ ಕೂತು ಒಂದು ರಣತಂತ್ರವನ್ನೂ ಹೆಣೆದಿದ್ದಾರೆ.. ಕಾಂಗ್ರೆಸ್​ ಪಾಲಿನ ಟ್ರಬಲ್ ಶೂಟರ್​ ಡಿಕೆಶಿಗೆ ಬಂಧನ ಭೀತಿ, ಜೈಲಿನ ತೂಗುಗತ್ತಿ ಒಂದು ವರ್ಷಗಳಿಂದಲೇ ಇತ್ತು. ಒಂದಲ್ಲ ಒಂದು ದಿನ ನನ್ನನ್ನ ಜೈಲಿಗೂ ಹಾಕಿಸ್ತಾರೆ ಅಂತ ಸ್ವತಃ ಡಿಕೆಶಿಯೇ ಹೇಳ್ತಿದ್ರು.. ಡಿಕೆಶಿ ಕೊರಳಿಗೆ ಉರುಳು ಜಾಸ್ತಿಯಾಗುತ್ತಾ ಹೋಗಿದ್ದು ಕೇಂದ್ರದಲ್ಲಿ ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೇಲೆ.. ಡಿಕೆಶಿ ಮೇಲೆ ಬಿಜೆಪಿಯವರಿಗೆ ಕಣ್ಣು ಇದ್ರೂ ಮೋದಿ ಮೊದಲ ಐದು ವರ್ಷದ ಅವಧಿಯಲ್ಲಿ ಬರೀ ಐಟಿ ರೇಡ್​ ಮಾಡುತ್ತಲೇ ಬಂದ್ರು.. ಆದ್ರೆ ಎರಡನೇ ಬಾರಿಗೂ ಕೇಂದ್ರದಲ್ಲಿ ಯಾವಾಗ ಮೋದಿ ಸರ್ಕಾರ ಬಂತೋ.. ಅಮಿತ್ ಶಾ ಗೃಹ ಸಚಿವರಾಗಿ ಎಂಟ್ರಿ ಕೊಟ್ರೋ ಅಂದೇ ಡಿಕೆಶಿ ಹಣೆಬರಹ ಬದಲಾಯ್ತು.. ಡಿಕೆ ಇನ್​ ಟ್ರಬಲ್​ ಅನ್ನೋ ಕನ್ಫರಮ್ ಆಯ್ತು.  ಡಿಕೆಶಿ ಬಂಧನ, ಜೈಲಿನ ದರ್ಶನ ಇವೆಲ್ಲವೂ ನಿರೀಕ್ಷಿತವೇ ಆಗಿದ್ದವು.. ಆದ್ದರಿಂದ ಡಿಕೆ ಬ್ರದರ್ಸ್​ ಇದಕ್ಕೆಲ್ಲಾ ಮಾನಸಿಕವಾಗಿಯೂ ಸಿದ್ಧವಾಗಿದ್ರು.. ಕನಕಪುರದ ಬಂಡೆ ಮುಂದೆ ಏನ್ಮಾಡಬೇಕು.. ಹೇಗೆ ದಾಳ ಉರುಳಿಸಬೇಕು ಅನ್ನೋ ಲೆಕ್ಕಾಚಾರವನ್ನೂ ಮಾಡಿದ್ರು.. ಆದ್ರೂ ಇಡಿ ಬಲೆಯನ್ನ ತಪ್ಪಿಸಿಕೊಳ್ಳು ಕಾನೂನು ಹೋರಾಟ ಮಾಡುತ್ತಲೇ ಇದ್ರು.. ಮತ್ತೊಂದ್ಕಡೆ ಬಂಧನದ ಬಳಿಕ ರಾಜಕೀಯದ ಭವಿಷ್ಯ ರೂಪಿಸಿಕೊಳ್ಳೋದು ಹೇಗೆ ಅನ್ನೋ ತಂತ್ರಗಾರಿಕೆಯನ್ನೂ ಡಿಕೆಶಿ ರೂಪಿಸುತ್ತಿದ್ರು.. ಆದ್ದರಿಂದಲೇ ಈಗಲೂ ಡಿಕೆಶಿ ಬಂಡೆಯಂತೆಯೇ ಗಟ್ಟಿಯಾಗಿಯೇ ನಿಂತಿದ್ದಾರೆ.. ಏನಾದ್ರೂ ಸರಿ ಎಲ್ಲವನ್ನೂ ಎದುರಿಸಿಯೇ ಹೋಗೋಣ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ.. ರಾಜಕೀಯವಾಗಿಯೂ ಒಂದು ಮಾಸ್ಟರ್ ಪ್ಲಾನ್ ಕೂಡ ಸಿದ್ಧಪಡಿಸಿದ್ದಾರೆ..

ಡಿಕೆಶಿ ಮುಂದಿನ ರಾಜಕೀಯದ ಹಾದಿ ಹೇಗಿರುತ್ತೆ..?

ಹೌದು, ಡಿಕೆಶಿ ಒಬ್ಬ ಚಾಣಕ್ಷ ರಾಜಕಾರಣಿ.. ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದೇ ರಾಜಕಾರಣದಲ್ಲಿ ಈ ಮಟ್ಟಕ್ಕೆ ಬೆಳೆದವರು.. ಪ್ರಸ್ತುತ ರಾಜಕೀಯ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ರಾಜಕಾರಣಿಗಳಲ್ಲಿ ಸಾಚಾ ಯಾರೂ ಇಲ್ಲ.. ಹಳ್ಳಿಯಿಂದ ದಿಲ್ಲಿವರೆಗೂ ಇರೋ ರಾಜಕಾರಣಿಗಳಲ್ಲಿ ಬಹುತೇಕರು ಅಧಿಕಾರಕ್ಕಾಗಿ ಏನ್ಬೇಕಾದ್ರೂ ಮಾಡ್ತಾರೆ.. ಡಿಕೆಶಿ ರಾಜಕೀಯ ಪಯಣದಲ್ಲೂ ಸಾಕಷ್ಟು ಏಳು ಬೀಳು ಕಂಡಿದ್ದಾರೆ.. ತಮ್ಮದೇ ಕಾಂಗ್ರೆಸ್ ಪಕ್ಷದಲ್ಲಿ ಶತ್ರುಗಳನ್ನ ಎದುರಾಕಿಕೊಂಡಿದ್ದಾರೆ.. ಡಿಕೆಶಿ ಅಂದ್ರೆ ಟ್ರಬಲ್ ಶೂಟರ್​ ಅನ್ನೋ ಮಟ್ಟಕ್ಕೆ ಬೆಳೆದಿದ್ದಾರೆ.. ಇಂಥ ಕನಕಪುರದ ಬಂಡೆ ಈಗ ಜೈಲಿಗೆ ಹೋದ ತಕ್ಷಣ ರಾಜಕಾರಣ ಬಿಡ್ತಾರಾ.. ಖಂಡಿತ ಇಲ್ಲ.. ಮತ್ತಷ್ಟು ಜಾಸ್ತಿ ಮಾಡ್ತಾರೆ… ಯಾವಾಗ ಡಿ.ಕೆ.ಶಿವಕುಮಾರ್​ ಇಡಿ ಪ್ರಕರಣದಲ್ಲಿ ಲಾಕ್ ಆದ್ರೋ ಇತ್ತ ಕಾಂಗ್ರೆಸ್​ ಪಕ್ಷದಲ್ಲಿ ಚಟುವಟಿಕೆ ಜೋರಾಗಿವೆ.. ಒಂದಿಷ್ಟು ದಿನ ಡಿಕೆಶಿಗಾಗಿ ಪ್ರತಿಭಟನೆ ಮಾಡಿದ್ದು ಬಿಟ್ರೆ ಈಗ ಅದ್ನ ಮರೆತೇ ಬಿಟ್ಟಿದ್ದಾರೆ.. ಮುಖ್ಯವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್​ ಟೀಂ ಡಿಕೆಶಿ ಇಲ್ಲದ ಕಾಂಗ್ರೆಸ್​ನಲ್ಲಿ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಮಾಜಿ ಸ್ಪೀಕರ್ ರಮೇಶ್​ ಕುಮಾರ್​, ಹೆಚ್​.ಕೆ.ಪಾಟೀಲ್​, ಎಂ.ಬಿ.ಪಾಟೀಲ್​, ಈಶ್ವರ್​ ಖಂಡ್ರೆ ಹೀಗೆ ಘಟಾನುಘಟಿ ನಾಯಕರ ಬೆಂಬಲ ಪಡೆದಿರುವ ಸಿದ್ದರಾಮಯ್ಯ ಡಿಕೆಶಿಯನ್ನ ಸೈಡ್​ ಲೈನ್ ಮಾಡೋ ಅಸ್ತ್ರ ಬಿಡ್ತಿದ್ದಾರೆ.. ಆದ್ರೆ ಸಿದ್ದರಾಮಯ್ಯ ಆಟಕ್ಕೆ ಮೂಲ ಕಾಂಗ್ರೆಸ್ಸಿಗ ಡಾ.ಜಿ.ಪರಮೇಶ್ವರ್​ ಮುನಿಸಿಕೊಂಡಿದ್ದು ಇದೇ ಪರಮೇಶ್ವರ್​ ಇದೀಗ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ. ದೆಹಲಿಗೆ ಹೋಗಿ ಡಿಕೆಶಿಯನ್ನ ಆಸ್ಪತ್ರೆಯಲ್ಲಿ ಭೇಟಿಯಾಗಿ ರಾಜ್ಯ ರಾಜಕೀಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿಯೂ ಬಂದಿದ್ದಾರೆ..

ಅನುಕಂಪದ ಲಾಭ ಪಡೆಯಲು ಡಿಕೆಶಿಗೆ ಮಣೆ..?

 ಯೆಸ್​.. ತಿಹಾರ್​ ಜೈಲಿನಲ್ಲಿರುವ ಡಿಕೆಶಿ ಕೂಡ ಇದೇ ಲೆಕ್ಕಾಚಾರದಲ್ಲಿ ಇರುವಂತೆ ಕಾಣ್ತಿದೆ.. ಜೈಲಿನಲ್ಲಿದ್ರೂ ಡಿಕೆ ನರನಾಡಿಗಳಲ್ಲೂ ರಾಜಕೀಯವೇ ಇದೆ.. ಕಾಂಗ್ರೆಸ್​ನಲ್ಲಿ ಏನಾಗ್ತಿದೆ.. ಸಿದ್ದರಾಮಯ್ಯ ಏನ್ಮಾಡ್ತಿದ್ದಾರೆ.. ಮುಂದೆ ನಾನು ಏನ್ಮಾಡಬಹುದು ಅನ್ನೋ ಯೋಚನೆಯಲ್ಲೂ ಡಿಕೆಶಿ ತೊಡಗಿದ್ದಾರೆ.. ಮತ್ತೊಂದ್ಕಡೆ ಪರಮೇಶ್ವರ್​ ಸೇರಿ ಮೂಲ ಕಾಂಗ್ರೆಸ್ಸಿಗರಾದ ಡಿಕೆಶಿ ಬಂಧವನ್ನೇ ಮುಂದಿಟ್ಟುಕೊಂಡು ಮತ ಬೇಟೆಯಾಡೋ ಪ್ಲಾನ್ ಕೂಡ ಮಾಡಿಕೊಂಡಿದ್ದಾರಂತೆ.. ಮುಖ್ಯವಾಗಿ ಡಿಕೆಶಿ ಬೆನ್ನಿಗೆ ಬೃಹತ್​ ಸಂಖ್ಯೆಯಲ್ಲಿ ಒಕ್ಕಲಿಗರ ಮತಗಳಿಗೆ.. ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರೆಲ್ಲಾ ಒಂದಾಗಿ ರ್ಯಾಲಿಯನ್ನೂ ಮಾಡಿದ್ದಾರೆ.. ಅವರಿಗೆಲ್ಲಾ ಡಿಕೆಶಿ ಮೇಲೆ ಅನುಕಂಪ ಬಂದಿದೆ. ಅದೇ ಅನುಕಂಪದ ಅಲೆಯನ್ನ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಡಿಕೆಶಿ ಕೂಡ ದಾಳ ಉರುಳಿಸಿದ್ದಾರೆ.. ಇದೇ ಅವಕಾಶ ಬಳಸಿಕೊಂಡು ಕಾಂಗ್ರೆಸ್​ನಲ್ಲಿ ಸಿಎಂ ಪಟ್ಟಕ್ಕೂ ಏರೋ ಪ್ಲಾನ್ ಸಹ ಇದೆ ಎನ್ನಲಾಗಿದೆ..  ಡಿಕೆ ಶಿವಕುಮಾರ್ ರನ್ನ ಜೈಲಿಗೆ ಕಳ್ಸಿ ಮಟ್ಟಹಾಕಬಹುದು ಅಂತ ಕನಸು ಕಾಣ್ತಿದ್ದ ಅಮಿತ್ ಶಾ ಇದೀಗ ಡಿಕೆಶಿ ಬಂಡೆಯಂತೆ ತಿರುಗೇಟು ನೋಡಿ ದಂಗಾಗಿ ಹೋಗಿದ್ದಾರೆ..

ಸಿಎಂ ಆಗಿಯೇ ರಾಜಕೀಯ ನಿರ್ಗಮನ ಅಂದ್ರಾ ಡಿಕೆ..?

ಡಿಕೆ ಶಿವಕುಮಾರ್.. ಡೇರ್ ಅಂಡ್ ಡೆವಿಲ್ ರಾಜಕಾರಣಿ… ಯಾವುದಕ್ಕೂ ಜಗ್ಗದ ಬಗ್ಗದ ಎಂಟೆದೆ ಭಂಟ ಅಂತಲೇ ರಾಜಕೀಯವಾಗಿ ಗುರುತಿಸಿಕೊಂಡೋರು.. ಆದ್ರೆ ಅದ್ಯಾಕೋ ಏನೋ ಡಿಕೆಶಿವಕುಮಾರ್​ ಟೈಮೇ ಸರಿ ಇಲ್ಲ ಅಂತ ಕಾಣ್ತಿದೆ.. ಒಂದಲ್ಲ ಒಂದು ಕಂಟಕ ಡಿಕೆಶಿ ಮೇಲೆರಗುತ್ತಿದೆ. ಆದಾಯ ತೆರಿಗೆ ಭೂತವಂತೂ ಬೆನ್ನತ್ತಿ ಕಾಡ್ತಿದೆ. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳು ಡಿಕೆ ಶಿವಕುಮಾರ್​ ಮನೆ, ಆಪ್ತರ ಮನೆಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ಒಂದಲ್ಲ ಎರಡಲ್ಲ ನಾಲ್ಕು ಪ್ರಕರಣಗಳು ಡಿಕೆ ಶಿವಕುಮಾರ್​ ಮೇಲೆ ದಾಖಲಾಗಿವೆ. ತಿಹಾರ್​ ಜೈಲಿನ ದರ್ಶನವೂ ಆಗಿದೆ. ಐಟಿ ಪ್ರಕರಣ ಡಿಕೆ ಬ್ರದರ್ಸ್​ಗೆ ನಿದ್ದೆಯಿಲ್ಲದಂತೆ ಮಾಡಿರೋದಂತೂ ಸತ್ಯ.. ಆದ್ರೂ ಇದ್ಯಾವುದಕ್ಕೂ ಡಿಕೆಶಿಯದ್ದು ಬಗ್ಗೋ ಜಯಾಮಾನವಲ್ಲ..

ಸುಮಾರು 20 ದಿನಗಳ ಕಾಲ ಡಿಕೆಶಿಯನ್ನ ಇಡಿ ಅಧಿಕಾರಿಗಳು ಹಿಂಡಿ ಹಿಪ್ಪೆ ಮಾಡಿದ್ರೂ ಕ್ಯಾರೆ ಅಂದಿಲ್ಲ.. ಕೊಂಚ ಬಳಲಿದಂತೆ ಕಾಣಿಸಿದ್ರೂ ಅವರು ಸೋಲೊಪ್ಪಿಕೊಳ್ಳೋದಿಲ್ಲ.. ಎಸೆದಷ್ಟೇ ವೇಗವಾಗಿ ಡಿಕೆಶಿ ಮುನ್ನುಗ್ಗಿ ಬರ್ತಾರೆ ಅನ್ನೋದು ಅವರನ್ನ ಹತ್ತಿರದಿಂದ ಬಲ್ಲವರು ಹೇಳೋ ಮಾತು.. ಅಷ್ಟೇ ಅಲ್ಲ ಸ್ವತಃ ಡಿಕೆಶಿ ಅವರೇ ಜಿ.ಪರಮೇಶ್ವರ್​​ಗೆ ಒಂದು ಮಾತು ಹೇಳಿದ್ದು ಇದೇ ನವೆಂಬರ್​ ಬಳಿಕ ಡಿಕೆಶಿ ಭವಿಷ್ಯವೇ ಬದಲಾಗುತ್ತಂತೆ.. ಒಂದೂವರೆ ತಿಂಗಳ ಬಳಿಕ ಡಿಕೆಶಿಗೆ ರಾಜಯೋಗ ಬರುತ್ತಂತೆ.. ಈ ರಾಜಯೋಗ ಇನ್ನು 10 ವರ್ಷ ಇರುತ್ತೆ.. ಆದ್ದರಿಂದ ಈ 10 ವರ್ಷದಲ್ಲಿ ಡಿಕೆಶಿ ಜೀವನದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆ.. ನಾನು ಕೊನೆಯಾದಾಗಿ ಮುಖ್ಯಮಂತ್ರಿಯಾಗಿಯೇ ರಾಜಕೀಯ ನಿರ್ಗಮನ ಮಾಡ್ತೇನೆ ಅಂತ ಸ್ವತಃ ಡಿಕೆಶಿವಕುಮಾರ್​ ಅವರೇ ಪರಮೇಶ್ವರ್​​ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ 

ಡಿಕೆಶಿಗಾಗಿ ಒಂದಾದ ಒಕ್ಕಲಿಗರು.. ಬಂಡೆಗೆ ಬಲ..!

 ಹೌದು, ನಿಜಕ್ಕೂ ರಾಜಯೋಗದಂತೆ ಡಿಕೆಶಿಗೆ ಸಿಎಂ ಆಗೋ ಯೋಗ ಬರುತ್ತಾ.. ಅದ್ರ ಸಾಧ್ಯತೆ ಎಷ್ಟು ಅಂತ ನೋಡಿದ್ರೆ ಡಿಕೆಶಿ ಬಂಧನವೇ ಅನುಕಂಪವಾಗಿ ಪರಿವರ್ತನೆಯಾಗಿದೆ.. ಅಪಾರ ಸಂಖ್ಯೆಯಲ್ಲಿರುವ ಒಕ್ಕಲಿಗರು ಡಿಕೆಶಿ ಬೆನ್ನಿಗೆ ನಿಲ್ಲುತ್ತಿದ್ದಾರೆ.. ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರೆಲ್ಲಾ ಒಂದಾಗಿ ರಾಲಿಯನ್ನೂ ಮಾಡಿದ್ದಾರೆ.. ಅವರಿಗೆಲ್ಲಾ ಡಿಕೆಶಿ ಮೇಲೆ ಅನುಕಂಪ ಬಂದಿದೆ. ಅದೇ ಅನುಕಂಪದ ಅಲೆಯನ್ನ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಡಿಕೆಶಿ ಕೂಡ ದಾಳ ಉರುಳಿಸಿದ್ದಾರೆ.. ಇದೇ ಅವಕಾಶ ಬಳಸಿಕೊಂಡು ಕಾಂಗ್ರೆಸ್​ನಲ್ಲಿ ಸಿಎಂ ಪಟ್ಟಕ್ಕೂ ಏರೋ ಪ್ಲಾನ್ ಸಹ ಇದೆ ಎನ್ನಲಾಗಿದೆ..

ಡಿಕೆಶಿ ಭವಿಷ್ಯ ಬದಲಿಸುತ್ತಾ ಅನುಕಂಪದ ಅಲೆ..?

ವಾಯ್ಸ್ 6: ಹೌದು, ಪ್ರಬಲ ಒಕ್ಕಲಿಗ ಸಮುದಾಯವೇ ಡಿಕೆ ಶಿವಕುಮಾರ್ ಅವರ ಬಲ.. ಡಿ.ಕೆ.ಶಿ ಪ್ರಭಾವ ಈ ಮೊದಲು ರಾಮನಗರ, ಬೆಂಗಳೂರು ಸುತ್ತಮುತ್ತಕ್ಕೆ ಸೀಮಿತವಾಗಿತ್ತು.. ಆದ್ರೆ ಯಾವಾಗ ಇಡಿ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ರೋ ಅವತ್ತಿನಿಂದ ಡಿಕೆಶಿ ಖ್ಯಾತಿ ಮತ್ತಷ್ಟು ಹೆಚ್ಚಾದಂತೆ ಕಾಣ್ತಿದೆ.. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ರೂ ಅವರು ಇನ್ನೂ ಆರೋಪಿನೇ.. ಅದು ಸಾಬೀತು ಆಗಿಲ್ಲ.. ಜೈಲು ಶಿಕ್ಷೆಯೂ ವಿಧಿಸಿಲ್ಲ.. ಒಂದು ವೇಳೆ ಈ ಹಂತದಲ್ಲೇ ಜಾಮೀನು ಪಡೆದು ಹೊರ ಬಂದ್ರೆ ಡಿಕೆಶಿ ಡ್ಯಾಮೇಜಿಗೆ ಧಕ್ಕೆಯೇನೋ ಆಗಿಲ್ಲ.. ಯಾಕಂದ್ರೆ ಡಿಕೆಶಿ ಇಡಿ ವಶದಲ್ಲಿದ್ರೂ ಇದನ್ನೆಲ್ಲಾ ಮಾಡ್ತಿರೋದು ಬಿಜೆಪಿಯವರು ಅನ್ನೋ ಅಸ್ತ್ರ ಬಿಡ್ತಿದ್ದಾರೆ.. ಇಡಿ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚಿದ್ದಾರೆ.. ಈ ಮೂಲಕ ಡಿಕೆಶಿ ತಮ್ಮ ರಾಜಕೀಯ ಹಾದಿಯನ್ನ ಇನ್ನೂ ಮುಕ್ತವಾಗಿಯೇ ಇಟ್ಟುಕೊಂಡಿದ್ದಾರೆ..  ಏನೇ ಹೇಳಿದ್ರೂ ಜೈಲು ಅನ್ನೋದು ರಾಜಕಾರಣಿಗಳಿಗೆ ಹೊಸದೇನಲ್ಲ.. ಇವತ್ತು ಬಿಜೆಪಿ ಚಾಣಕ್ಯ ಮೋದಿ ಸರ್ಕಾರದಲ್ಲಿ ನಂಬರ್ 2 ಹುದ್ದೆಯ ಪ್ರಭಾವಿ ರಾಜಕಾರಣಿ ಅಮಿತ್ ಶಾ ಕೂಡ ಜೈಲಿಗೆ ಹೋಗಿ ಬಂದವರೇ.. ಇದೇ ಇಡಿ ಅಧಿಕಾರಿಗಳು, ಐಟಿ ಮತ್ತು ಸಿಬಿಐ ಅಧಿಕಾರಿಗಳು ಅಮಿತ್ ಶಾ ರನ್ನ ಬಂಧಿಸಿ ಜೈಲಿಗೂ ಕಳುಹಿಸಿದ್ರು.. ಆದ್ರೆ ಅಮಿತ್ ಶಾ ಮತ್ತೆ ರಾಜಕೀಯವಾಗಿ ಬೆಳೆಯಲಿಲ್ವಾ.. ಕೇಂದ್ರದಲ್ಲಿ ಗೃಹ ಸಚಿವರೇ ಆಗ್ಲಿಲ್ವಾ.. ಅದು ಬಿಡಿ, ನಮ್ದೇ ರಾಜ್ಯದ ಹಾಲಿ ಸಿಎಂ ಯಡಿಯೂರಪ್ಪ ಕೂಡ ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಹೋಗಿದ್ದವರೇ ಅಲ್ವಾ.. ಆದ್ರೂ ಅವರು ಸಿಎಂ ಆಗ್ಲಿಲ್ವಾ.. ಸೋ.. ಅದೇ ರೀತಿ ನಾನು ಕೂಡ ಒಂದಲ್ಲ ಒಂದು ದಿನ ಸಿಎಂ ಆಗ್ತಾನೆ ಅನ್ನೋ ಅಚ್ಚಲ ವಿಶ್ವಾಸದಲ್ಲಿದ್ದಾರೆ ಡಿ.ಕೆ.ಶಿವಕುಮಾರ್​.. .

 ಡಿಕೆಶಿ ರಾಶಿ ಪ್ರಕಾರ ಮುಂದಿನ ತಿಂಗಳು ನವೆಂಬರ್​ 20 ರ ನಂತರ ರಾಜಯೋಗ ಎಂಟ್ರಿಯಾಗುತ್ತಂತೆ.. ಅಲ್ಲಿಂದ ಇನ್ನೂ 10 ವರ್ಷ ರಾಜಯೋಗ ಅವರಲ್ಲಿಯೇ ಇರುತ್ತೆ.. ನಿಮ್ಮ ರಾಜಕೀಯ ಹಾದಿಗೆ ಇನ್ಮುಂದೆ ಯಾವುದೇ ಅಡ್ಡಿ ಇರೋದಿಲ್ಲ ಅಂತ ಅವಧೂತರೊಬ್ಬರು ಡಿಕೆಶಿಗೆ ಹೇಳಿದ್ದಾರಂತೆ.. ಆದ್ದರಿಂದ ಡಿಕೆಶಿ ಸಿಎಂ ಆಗಿಯೇ ತೀರುತ್ತೇನೆ ಅನ್ನೋ ಮನಸ್ಥಿತಿಯಲ್ಲಿದ್ದಾರೆ.. ಒಟ್ನಲ್ಲಿ ರಾಜಯೋಗ ಬರುತ್ತೋ ಇಲ್ಲ ಅನುಕಂಪದ ಅಲೆಯಲ್ಲಿ ಡಿಕೆಶಿ ರಾಜಕೀಯ ಹಾದಿ ಬದಲಾಗುತ್ತೋ ಅನ್ನೋ ಲೆಕ್ಕಾಚಾರವಂತೂ ನಡೀತಿದೆ.. ಈ ಹಾವು ಏಟಿ ಆಟದಲ್ಲಿ ಕನಕಪುರದ ಬಂಡೆಗೆ ಮುಖ್ಯಮಂತ್ರಿ ಪಟ್ಟ ಒಲಿದು ಬರಲೂಬಹುದು..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಡಿಕೆಶಿ ಕರ್ನಾಟಕದ ಮುಖ್ಯಮಂತ್ರಿಯಾಗ್ತಾರಾ..? ಅಥವಾ ರಾಜಕಾರಣದಲ್ಲಿ ಕಳೆದುಹೋಗ್ತಾರಾ..? ಈ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

- Advertisement -

Latest Posts

Don't Miss