Tuesday, October 15, 2024

Latest Posts

ರೂಪಾಯಿ ಇಂದ 840 ಕೋಟಿವರೆಗೆ – ಡಿಕೆಶಿ ಸಂಪತ್ತು..!

- Advertisement -

ನನ್ನನ್ನ ಯಾರೂ ಏನೂ ಮಾಡೋಕಾಗಲ್ಲ ಅನ್ನುವ ಲೆಕ್ಕಾಚಾರದಲ್ಲಿದ್ದ ಡಿಕೆ ಶಿವಕುಮಾರ್ ಕೊನೆಗೂ ಇಡಿ ಪಾಲಾಗಿದ್ದಾರೆ.. ಬಹುತೇಕ ರಾಜಕಾರಣಿಗಳ ರೀತಿ ರಾಜಕೀಯಕ್ಕೆ ಬಂದ ಮೇಲೆ ಡಿಕೆ ಶಿವಕುಮಾರ್ ಸಂಪತ್ತನ್ನ ಸಂಪಾದನೆ ಮಾಡಿದ್ದು.. ಆದ್ರೆ, ಯಾರೂ ಊಹಿಸದಷ್ಟು ವೇಗವಾಗಿ ಸಂಪತ್ತನ್ನ ಸಂಪಾದನೆ ಮಾಡಿದ್ದಾರೆ.. ಸಾಮಾನ್ಯ ರೈತನ ಆಸ್ತಿ ಡಬಲ್ ಆಗೋದಿರಲಿ. ಒಂದು ಮದುವೆಯೋ, ಮನೆಯನ್ನೇ ಕಟ್ಟಿದ್ರೆ ಕರಗಿ ಹೋಗುತ್ತೆ.. ಆದ್ರೆ, ರಾಕೆಟ್ ವೇಗದಲ್ಲಿ ಡಿಕೆ ಶಿವಕುಮಾರ್ ಸಂಪತ್ತು ಏರಿಕೆಯಾಗಿದ್ದು ಎಂಥವರಿಗೂ ಶಾಕ್ ಆಗುತ್ತೆ. 2013ರಲ್ಲಿ 251 ಕೋಟಿ ಆಸ್ತಿ 2018ರ ವೇಳೆಗೆ 840 ಕೋಟಿಗೆ ಏರಿಕೆಯಾಗುತ್ತೆ. ಹಾಗಾದ್ರೆ, ಡಿಕೆಶಿ ರಾಜಕಾರಣಕ್ಕೆ ಬಂದಾಗ ಅವರ ಆಸ್ತಿ ಎಷ್ಟು ಬನ್ನಿ ನೋಡೋಣ..

ಡಿಕೆ ಶಿವಕುಮಾರ್ ಹುಟ್ಟಿದಾಗಲೇ ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿದವರಲ್ಲ.. ಸಾಮಾನ್ಯ ಸ್ಥಿತಿವಂತ ರೈತನ ಮಗನಾಗಿ ಜನಿಸಿದ್ರು.. ಕಾಲೇಜು ವಿದ್ಯಾಭ್ಯಾಸ ಮಾಡುವಾಗ ರಾಜಕೀಯ ಹಾಗೂ ಪ್ರಭಾವಿಗಳ ನಂಟಿನ್ನ ಬಳಸಿಕೊಂಡ್ರು. ನಂತರ 1985ರಲ್ಲಿ ಮೊದಲಬಾರಿ ದೇವೇಗೌಡರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ ಡಿಕೆ ಶಿವಕುಮಾರ್ ಬಳಿ ಅವರ ತಂದೆ ದೊಡ್ಡಾಲದಳ್ಳಿ ಕೆಂಪೇಗೌಡರು ಇಟ್ಟಿದ್ದ ಹೊಲ, ಮನೆ ಬಿಟ್ಟರೆ ಆ ಕಾಲಕ್ಕೆ ಸಾವಿರ ಲೆಕ್ಕದಲ್ಲಿದ್ದ ತಂದೆಯ ಸಂಪತ್ತು ಮಾತ್ರ..  ದೇವೇಗೌಡರ ವಿರುದ್ಧದ ಚುನಾವಣೆ ಆದ ಕಾರಣ ಆ ವೇಳೆ ಹಲವು ಮಂದಿ ಆರ್ಥಿಕವಾಗಿ ಸಹಾಯಮಾಡಿದ್ರು. 1989ರ ಚುನಾವಣೆಯಲ್ಲಿ ಎರಡನೇ ಬಾರಿ ಸ್ಪರ್ಧೇ ಮಾಡಿದ ಡಿಕೆ ಶಿವಕುಮಾರ್ ವಯಕ್ತಿಕವಾಗಿ ಲಕ್ಷವನ್ನೂ ಸಂಪಾದನೆ ಮಾಡಿರಲಿಲ್ಲವಂತೆ.. ಆ ವೇಳೆ ಆಪ್ತರ, ಹಣವುಳ್ಳವರ ಬಳಿ ಸಹಾಯ ಪಡೆದು ಚುನಾವಣೆ ಮಾಡಿ ಮೊದಲ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದ್ರು.. ಅದೃಷ್ಟವೆಂಬಂತೆ ಬಂಗಾರಪ್ಪ ಸರ್ಕಾರದಲ್ಲಿ ಬಂಧಿಖಾನೆ ಸಚಿವರಾದ್ರು. ಸಚಿವರಾದ ಮೇಲೆ ಸಾವಿರದ ಶಿವಕುಮಾರ್ ಲಕ್ಷ ಸಂಪತ್ತಿನ ಶಿವಕುಮಾರ್ ಆಗಿ ಪ್ರಮೋಟ್ ಆದ್ರು..

1994ರ ಚುನಾವಣೆಯಲ್ಲಿ ಸ್ವಂತ ಹಣದಲ್ಲಿ ಡಿಕೆಶಿ ಚುನಾವಣೆ

ನಂತರ 1994ರ ಚುನಾವಣೆಯನ್ನ ಬಹುತೇಕ ಸ್ವಂತ ಹಣದಿಂದ ಎದುರಿಸಿದ್ದ ಡಿಕೆ ಶಿವಕುಮಾರ್ 1999ರ ಚುನಾವಾಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಸ್ವಂತ ಖರ್ಚಿನಲ್ಲೇ ಚುನಾವಣೆ ಮಾಡಿ ಗೆಲುವು ಸಾಧಿಸಿದ್ರು. ಆಗಂತ ಆ ವೇಳೆಗೆ ಡಿಕೆ ಶಿವಕುಮಾರ್ ಆಸ್ತಿ ಕೋಟ್ಯಂತರ ರೂಪಾಯಿ ಏನು ಇರಲಿಲ್ಲ..

1999ರ ನಂತರ ಸಚಿವರಾದ ಮೇಲೆ ಶರವೇಗದಲ್ಲಿ ಸಂಪತ್ತು ಏರಿಕೆ

ಇನ್ನು 1999ರ ಎಸ್.ಎಂ ಕೃಷ್ಣ ಸಚಿವರಾಗಿದ್ದ ಡಿಕೆ ಶಿವಕುಮಾರ್ ಕೋಟಿ ನೋಡಿದ್ದೇ ಈ ಟೈಂನಲ್ಲಿ.. ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಲಕ್ಷಾಂತರ ಲೆಕ್ಕದಲ್ಲಿದ್ದ ಸಂಪತ್ತು ಕೋಟ್ಯಂತರ ಮೊತ್ತಕ್ಕೆ ಏರಿದ್ದು, ಏರಿಸಿಕೊಂಡಿದ್ದು ಈ ವೇಳೆಯೇ.. 2004 ಚುನಾವಣೆ ವೇಳೆಗೆ ಡಿಕೆ ಶಿವಕುಮಾರ್ ಎಲ್ಲರೂ ಆಶ್ವರ್ಯವಾಗುವಂತೆ ಸಂಪತ್ತನ್ನ ಏರಿಸಿಕೊಂಡ್ರು.. 2004ರಲ್ಲಿ ಶಾಸಕರಾಗಿ ಗೆದ್ದರೂ ದೇವೇಗೌಡರ ದ್ವೇಷ ರಾಜಕಾರಣದ ಫಲ ಶಿವಕುಮಾರ್ ಧರ್ಮಸಿಂಗ್ ಸರ್ಕಾರದಲ್ಲಿ ಸಚಿವರಾಗಲು ಸಾಧ್ಯವಾಗಿಲಿಲ್ಲ.. ಯಾಕದ್ರೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆಯಾದಗಲೇ ಡಿಕೆ ಶಿವಕುಮಾರ್ ರನ್ನದೂರವಿಡಲು ತೀರ್ಮಾನಿಸಲಾಗಿತ್ತು.. ಯಾಕಂದ್ರೆ 2004ರ ಲೋಕಸಭಾ ಚುನಾವಣೆಯಲ್ಲಿ ಇದೇ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಿಂದ ತೇಜಸ್ವಿನಿ ಅಖಾಡಕ್ಕಿಳಿಸಿ ದೇವೇಗೌಡರಿಗೆ ಸೋಲಿನ ರುಚಿ ತೋರಿಸಿದ್ರು.. ಈ ವೇಳೆ ಸಂಪತ್ತಿನ ಶರವೇಗದ ಬೆಳವಣಿಗೆಗೆ ಸ್ವಲ್ಪ ಬ್ರೇಕ್ ಬಿದ್ದಿತ್ತು..

2008ರಲ್ಲಿ 75 ಕೋಟಿ ಆಸ್ತಿ ಘೋಷಿಸಿಕೊಂಡ ಕನಕಪುರ ಬಂಡೆ

ಇನ್ನು 2008ರ ವಿಧಾನಸಭಾ ಚುನಾವಣೆ ವೇಳೆಗೆ ಡಿಕೆ ಶಿವಕುಮಾರ್ ಘೋಷಿಸಿಕೊಂಡ ಮೊತ್ತ 75 ಕೋಟಿ.. ರಾಜಕಾರಣಿಗಳ ಆಸ್ತಿ ಘೋಷಣೆ ಸಾಚಾತನದ ಬಗ್ಗೆ ನಾವೇನು ಹೇಳಬೇಕಿಲ್ಲ.. ಆಸ್ತಿಯನ್ನ ಸರ್ಕಾರ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಮಾತ್ರ ಘೋಷಣೆ ಮಾಡಲಾಗುತ್ತೆ.. ಆದ್ರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡುವಾಗ ಅದರ ಮೌಲ್ಯನೇ ಬೇರೆಯಾಗಿರುತ್ತೆ..

2013ರಲ್ಲಿ 251 ಕೋಟಿಗೆ ಏರಿದ ಡಿ.ಕೆ ಸಾಮ್ಯಾಜ್ಯದ ಸಂಪತ್ತು

ಇನ್ನು 2009ರಲ್ಲಿ 75 ಕೋಟಿ ಇದ್ದ ಆಸ್ತಿ 2013ರ ವೇಳೆಗೆ 251 ಕೋಟಿಗೆ ಜಿಗಿಯುತ್ತೆ.. ಈ ವಿಷಯವನ್ನ ಸ್ವತಃ ಡಿಕೆ ಶಿವಕುಮಾರ್ ಚುನಾವಣೆಯ ವೇಳೆ ಆಸ್ತಿ ಘೋಷಣೆಯಲ್ಲಿ ತಿಳಿಸಿದ್ದಾರೆ.. ಬೆಂಗಳೂರಿನ ಬಹುತೇಕ ಪ್ರಮುಖ ಸ್ಥಳಗಳಲ್ಲಿ ಡಿಕೆ ಶಿವಕುಮಾರ್ ಆಸ್ತಿಯನ್ನ ಸಂಪಾದನೆ ಮಾಡ್ತಾರೆ..

2018ರ ವೇಳೆಗೆ 840 ಕೋಟೆಗೇರಿದ ಕನಕಪುರ ಬಂಡೆಯ ಆಸ್ತಿ

ಇನ್ನು ಡಿಕೆ ಶಿವಕುಮಾರ್ 2018ರ ಚುನಾವಣೆಯಲ್ಲಿ ಸುಮಾರು ಸಾವಿರಕೋಟಿಯ ಸಮೀಪ ಘೋಷಣೆ ಮಾಡಿಕೊಳ್ತಾರೆ. ಅಂದ್ರೆ 840 ಕೋಟಿ ಆಸ್ತಿಯನ್ನ ಘೋಷಣೆ ಮಾಡಿಕೊಳ್ಳುವ ಡಿಕೆಶಿ ಎಲ್ಲರ ಹುಬ್ಬೇರುವಂತೆ ಮಾಡ್ತಾರೆ.. ಡಿಕೆಶಿಗೆ ಹಣ ಧಿಡೀರನೆ ಏನೂ ಬಂದಿದ್ದಲ್ಲ. ಸಾಕಷ್ಟು ವ್ಯವಹಾರ ಮಾಡ್ತಿದ್ದಾರೆ ಅದರಿಂದಲೂ ಹಣ ಸಂಪಾದನೆ ಮಾಡಿರಬಹುದು. ಡಿಕೆಶಿ ಮಾಡಿರುವ ವ್ಯವಹಾರದ ಪಕ್ಕಾ ದಾಖಲೆಗಳಿದ್ದರೆ ಯಾವ ಶಾನೂ ಏನು ಮಾಡಿಕೊಳ್ಳಲು ಆಗಲ್ಲ. ರಾಮನ ಲೆಕ್ಕ, ಕೃಷ್ಣನ ತೋರಿಸಿದ್ರು ಇಡಿ ಗ್ಯಾರಂಟಿ ಡಿಕೆಶಿಗೆ ಕೃಷ್ಣನ ಜನ್ಮಸ್ಥಾನ ತೋರಿಸುತ್ತೆ.

ಇನ್ನು ವ್ಯವಹಾರ ಮಾಡಿದವರ ಆಸ್ತಿ ಒಂದೇ ಸಮನೆ ಡಿಕೆಶಿಯ ಸಂಪತ್ತು ಏರಿಕೆ ಕಂಡಂತೆ ಏರಿಕೆ ಕಂಡಿಲ್ಲ. ಅನಿಲ್ ಅಂಬಾನಿ ಕೈಕೂಡ ಖಾಲಿಯಾಗಿದೆ, ಕಾಫಿ ಡೇ ಸಿದ್ದಾರ್ಥ ಕೂಡ ಹಣದ ಮುಗ್ಗಟ್ಟಿಗೆ ಸಿಲುಕಿದವರೆ. ಇದೆಲ್ಲದರ ನಡುವೆ ಡಿಕೆಶಿ ಸಂಪತ್ತು ನಿರಂತರ ಏರಿಕೆ ಕಾಣ್ತಿರೋದು ಎಂತಹವರಿಗೂ ಆಶ್ಚರ್ಯ ಮೂಡಿಸದೆ ಇರದು.

ಏನೇ ಆಗ್ಲಿ.. ಡಿಕೆ ಶಿವಕುಮಾರ್ ಆಸ್ತಿ ಈ ಪ್ರಮಾಣದ ಏರಿಕೆ ಪ್ರಮಾಣಿಕನಾ..? ಅಥವಾ ಐಟಿ, ಇಡಿಗೆ ಇರೋ ಅನುಮಾನ ನಿಮಗೂ ಕಾಡ್ತಿದೆಯಾ..? ಈ ಬಗ್ಗೆ ಕಾಮೆಂಟ್ ಮಾಡಿ

- Advertisement -

Latest Posts

Don't Miss