Tuesday, April 15, 2025

Latest Posts

ಡಿಕೆಶಿ ಭೇಟಿ ನೀಡಿದ ಈ ಶಕ್ತಿ ಪೀಠದ ವಿಶೇಷತೆಯೇನು..?

- Advertisement -

ಕರ್ನಾಟಕ ಟಿವಿ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಅಂತಿವಾಗಿದ್ರೂ ಘೋಷಣೆ ಮಾಡುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೀನಾಮೇಷ ಎಣಿಸ್ತಿದೆ..  ಕಳೆದೊಂದು ವಾರದಿಂದ ರಾಜ್ಯ ಕಾಂಗ್ರೆಸ್ ನಲ್ಲಿ ನೂತನ ಅಧ್ಯಕ್ಷರ ಘೋಷಣೆ ಬಗ್ಗೆಯೇ ದೊಡ್ಡ ಚರ್ಚೆ ನಡೀತಿದೆ.. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ  ಡಿ.ಕೆ ಶಿವಕುಮಾರ್ ಮಾತ್ರ ದೇವರ ಮೊರೆ ಹೋಗಿದ್ದಾರೆ.. ಇಷ್ಟು ದಿನ ರಾಜ್ಯದ ಶಕ್ತಿ ಪೀಠಗಳ ಮೊರೆ ಹೋಗ್ತಿದ್ದ ಡಿಕೆ ಶಿವಕುಮಾರ್ ಈ ಬಾರಿ ಮಧ್ಯಪ್ರದೇಶದ ಪವರ್ ಫುಲ್ ದೇವರ ಮೊರೆ ಹೋಗಿದ್ದಾರೆ.. ಧಾತಿಯದ ಪೀತಾಂಬರ ಪೀಠಕ್ಕೆ ಭೇಟಿ ನೀಡಿದ್ದ  ಡಿಕೆ ಶಿವಕುಮಾರ್ ಹೋಮ ಹವನದಲ್ಲಿ ಭಾಗಿಯಾಗಿದ್ದಲ್ಲದೇ ಧ್ಯಾನಾಸಕ್ತರಾಗಿ ಸಂಕಲ್ಪ ಮಾಡಿ ಬಂದಿದ್ದಾರೆ.. ಅಷ್ಟಕ್ಕೂ ಈ ಪೀತಾಂಬರ ಪೀಠದ ವಿಶೇಷ ಏನು..? ಡಿಕೆ ಶಿವಕುಮಾರ್ ಈ ಪವರ್ ಪೀಠದಲ್ಲಿ ಕೂತು ಮಾಡಿದ ಸಂಕಲ್ಪ ಏನು ಅನ್ನೋದನ್ನ ನೋಡೋದಾದ್ರೆ.. ಧಾತಿಯಾದ ಈ ಪೀತಾಂಬರ್ ಪೀಠ ಮಹಾಭಾರತದಲ್ಲೂ ಉಲ್ಲೇಖವಾಗಿದೆ.. ಇಲ್ಲಿ ವೆಂಖಂಡೇಶ್ವರ ಶಿವಲಿಂಗ ಮಹಾಭಾರತ ಕಾಲದ್ದು ಅಂತಾನೂ ಮಾತಿದೆ.. ದೇಶದ ಪ್ರಖ್ಯಾತ ವ್ಯಕ್ತಿಗಳು ಇಲ್ಲಿ ಕುಳಿತು ಧ್ಯಾನ ಮಾಡಿದ್ದಾರೆ.. ಧೂಮವತಿ ಹಾಗೂ ಭಾಗಲ್ಮುಖಿ ದೇವಿಯಲ್ಲಿ ಈ ಕ್ಷೇತ್ರದ ಶಕ್ತಿ ದೇವತೆಗಳು.. ಇದಲ್ಲದೇ ಪರಶುರಾಮ, ಕಾಲಭೈರವ ಹಾಗೂ ಹನುಮಾನ್ ದೇವರ ಮೂರ್ತಿಗಳೂ ಸಹ ಈ ಕ್ಷೇತ್ರ ಮಹಿಮೆಯ ಕಾರಣಕರ್ತರು.. ಇಂಥಹ ಇತಿಹಾಸ ಇರುವ ಕ್ಷೇತ್ರಕ್ಕೆ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಸದ್ದಿಲ್ಲದೇ ಭೇಟಿ ನೀಡಿದ್ದಾರೆ.. ಅಲ್ಲದೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸಾರಥ್ಯವಹಿಸಿಕೊಂಡು ಪಕ್ಷವನ್ನಅಧಿಕಾರಕ್ಕೆ ತರಲು ಸಂಕಲ್ಪ ಮಾಡಿ ಬಂದಿದ್ದಾರಂತೆ.. ಇದಿಷ್ಟೆ ಅಲ್ಲ ಕೆಪಿಸಿಸಿ ಅಧ್ಯಕ್ಷ ಘೋಷಣೆ ಆಗುವವರೆಗೂ ದೇಶದ ಇತರ ಶಕ್ತಿ ಪೀಠಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ.. ಕೆಪಿಸಿಸಿ ಅಧ್ಯಕ್ಷಸ್ಥಾನ ದೊರಕಿತ ನಂತರ ರಾಜ್ಯಾದ್ಯಂತ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಸರ್ಕಾರ ವಿರುದ್ಧ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತರಲು ಯೋಜನೆ ಸಿದ್ಧಪಡಿಸಿದ್ದಾರಂತೆ.

ಯಸ್ ವೀಕ್ಷಕರೆ ನಿಮ್ಮ ಪ್ರಕಾರ ಡಿಕೆ ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನಅಧಿಕಾರಕ್ಕೆ ತರ್ತಾರಾ..? ತಾವೇ ಸಿಎಂ ಆಗ್ತಾರಾ..?ಈ ಬಗ್ಗೆ ಕಾಮೆಂಟ್ ಮಾಡಿ..

- Advertisement -

Latest Posts

Don't Miss