ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಮಾಡಿ ಡಿಕೆಶಿ ಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ತಿಹಾರ್ ಜೈಲಿಗೆ ಕಳುಹಿಸದಂತೆ ಡಿಕೆಶಿ ವಕೀಲರ ಮನವಿ ಹಿನ್ನೆಲೆ ನಾಳೆ ಮತ್ತೆ ವಿಚಾರಣೆ ವರೆಗೆ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಕೋರ್ಟ್ ಅನುವು ಮಾಡಿಕೊಟ್ಟಿದೆ.
ಡಿಕೆಶಿ ಪ್ರಕರಣ ಸಂಬಂಧ ಮೊದಲು ವಾದ ಮಾಡಿದ ಇಡಿ ಪರ ವಕೀಲ ನಟರಾಜ್ ಯಾವುದೇ ಕಾರಣಕ್ಕೂ ಜಾಮೀನು ಕೊಡಬೇಡಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಇನ್ನು ಕೆಲವರನ್ನ ನಾವು ವಿಚಾರಣೆ ಮಾಡಬೇಕಿದೆ ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ಹಿನ್ನೆಲೆ ವಿಚಾರಣೆ ಸಾಧ್ಯವಾಗಿಲ್ಲ ಅಂತ ಇಡಿ ಪರ ವಕೀಲ ಹೇಳಿದ್ರು.
ಡಿಕೆ ಶಿವಕುಮಾರ್ ಆರೋಗ್ಯ ಅಪಾಯದಲ್ಲಿದೆ
ಇನ್ನೂ ಡಿಕೆ ಶಿವಕುಮಾರ್ ಆರೋಗ್ಯ ಗಂಭೀರವಾಗಿದೆ. ಹೀಗಾಗಿ ಜಾಮೀನು ನೀಡುವಂತೆ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದ್ರು. ಇದೇ ವೇಳೆ ಕಟ್ಟೆಯಲ್ಲಿ ನಿಂತಿದ್ದ ಡಿಕೆಶಿ ನಿತ್ರಾಣಗೊಂಡ್ರು ನಂತರ ಡಿಕೆಶಿಗೆ ಕುಳಿತುಕೊಳ್ಳಲು ಚೇರ್ ನೀಡಲಾಯ್ತು. ನಂತರ ವಾದ ಮುಂದುವರೆಸಿದ ಸಿಂಘ್ವಿ ಆರೋಗ್ಯ ಸಮಸ್ಯೆ ಹಿನ್ನೆಲೆ ಜಾಮೀನು ಕೊಡಲೇ ಬೇಕು ಅಂತ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಧೀಶರಿಗೆ ಮನವರಿಕೆ ಮಾಡಿದ್ರು.
ಇಡಿ ಪೂರ್ವಾಗ್ರಹ ಪೀಡಿತವಾಗಿ ವರ್ತಿಸುತ್ತಿದೆ
ಡಿಕೆಶಿಗೆ 41 ಲಕ್ಷ ಹಣ ಮಾತ್ರ ಸೇರಿದ್ದು. ಆದ್ರೆ ಉಳಿದ ಹಣ ಡಿಕೆಶಿವಕುಮಾರ್ ಗೆ ಸೇರಿದ್ದು ಎಂದು ಇಡಿ ಅಧಿಕಾರಿಗಳು ಹೇಳ್ತಿದ್ದಾರೆ. ಇದು ಪೂರ್ವಾಗ್ರಹ ಪೀಡಿತ ಅಂತ ಇಡಿ ಅಧಿಕಾರಿಗ ವಿರುದ್ಧ ವಕೀಲ ಸಿಂಘ್ವಿ ಆರೋಪ ಮಾಡಿದ್ರು. ಇಡಿ 53 ಸಾಕ್ಷಿಗಳ ವಿಚಾರಣ ಮಾಡಿದೆ ಎಂದು ಹೇಳಿಕೊಂಡಿದೆ ಆದ್ರೆ ಅವರ ಹೇಳಿಕೆಗಳನ್ನ ಕೋರ್ಟ್ ಗೆ ಕೊಟ್ಟಿಲ್ಲ ಅಂತ ಸಿಂಘ್ವಿ ಆರೋಪಿಸಿದ್ರು.
ಡಿಕೆಶಿ ಬಳಿ 317 ಖಾತೆ ಇಲ್ಲ ಇರೋದ 20 ಮಾತ್ರ
ಇನ್ನು ಡಿಕೆ ಶಿವಕುಮಾರ್ ಕುಟುಂಬಸ್ಥರ ಬಳಿ 317 ಖಾತೆ ಗಳಿದೆ ಅನ್ನೋದು ಸುಳ್ಳು, ಶಿವಕುಮಾರ್ ಕುಟುಂಬಸ್ಥರ ಅಕೌಂಟ್ ಸಂಖ್ಯೆ ಕೇವಲ 20 ಎಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ರು. ಡಿಕೆ ಶಿವಕುಮಾರ್ 12 ವರ್ಷದಲ್ಲಿ ಕೇವಲ 60 ಲಕ್ಷ ಡೆಪಾಸಿಟ್ ಮಾಡಿದ್ದಾರೆ ಇದಕ್ಕಿಂತ ಒಂದು ರೂಪಾಯಿ ಹೆಚ್ಚಿಗೆ ಯಾವುದೇ ಡೆಪಾಸಿಟ್ ಮಾಡಿಲ್ಲ ಅಂತ ಸಿಂಘ್ವಿ ಹೇಳಿದ್ರು.
ಡಿಕೆಶಿ ಪರ ಮುಕುಲ್ ರೋಹಟಗಿ ವಾದ
ಇನ್ನು ಅಚ್ಚರಿಯ ಬೆಳವಣಿಗೆಯಲ್ಲಿ ಸದಾ ಬಿಜೆಪಿ ಸಂಬಂಧಿಸಿದ ಕೇಸ್ ಹ್ಯಾಂಡಲ್ ಮಾಡ್ತಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಡಿಕೆಶಿ ಪರ ವಾದ ಮಂಡಿಸಿದ್ರು. ನನ್ನ ಕಕ್ಷಿದಾರ ವಿಚಾರಣೆಗೆ ಸಹಕರಿಸಿದ್ದಾರೆ. ಅವರ ಆರೋಗ್ಯ ಹದಗೆಟ್ಟಿದೆ ಹೀಗಾಗಿ ಜಾಮೀನು ಮಂಜೂರು ಮಾಡುವಂತರ ಮುಕುಲ್ ರೋಹಟಗಿ ವಾದ ಮಂಡಿಸಿದ್ರು.
ಡಿಕೆಶಿ ಆಸ್ತಿ ಏರಿಕೆಗೆ ಅವರ ತಂದೆ ಕಾರಣ
ಇನ್ನು ಡಿಕೆ ಶಿವಕುಮಾರ್ ಆಸ್ತಿ ಹೆಚ್ಚಳಕ್ಕೆ ಕಾರಣ ಅವರ ತಂದೆಯಿಂದ ಬಂದ ಆಸ್ತಿ. ಪಿತ್ರಾರ್ಜಿತ ಆಸ್ತಿ ಡಿಕೆ ಶಿವಕುಮಾರ್ ಗೆ ಬಂದ ಹಿನ್ನೆಲೆ 2013 ರಿಂದ 2018ರ ವೇಳೆ ಆಸ್ತಿ ಹೆಚ್ಚಳಕ್ಕೆ ಕಾರಣ ಅಂತ ಸಿಂಘ್ವಿ ವಾದ ಮಂಡಿಸಿದ್ರು.
ಡಿಕೆಶಿ ಮಗಳ ಖಾತೆಯಲ್ಲಿ 65 ಸಾವಿರ ಮಾತ್ರ
ಇನ್ನು ವಿಚಾರಣೆ ವೇಳೆ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಹೊರಬಂತು ನೂರಾರು ಕೋಟಿ ಒಡತಿ ಐಶ್ವರ್ಯಾ ಶಿವಕುಮಾರ್ ಖಾತೆಯಲ್ಲಿ ಕೇವಲ 60 ಸಾವಿರ ಮಾತ್ರ ಇದೆ. ಇಡಿ ಸುಮ್ಮನೆ ನಮ್ಮ ಕಕ್ಷಿದಾರ ಮೇಲೆ ಆರೋಪ ಮಾಡ್ತಿದೆ ಅಂತ ಸಿಂಘ್ವಿ ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ನ್ಯಾಯಾಧೀಶ ಮುಂದಿಟ್ರು. ಇದಲ್ಲದೇ ವಾಸ್ತವವಾಗಿ ಐಶ್ವರ್ಯಾ ಬಳಿ ನೂರಾರು ಕೋಟ ಆಸ್ತಿ ಇಲ್ಲ ಆಕೆ ಬಳಿ ಇರೋದು 70 ಲಕ್ಷ ಮೌಲ್ಯದ ಆಸ್ತಿ ಎಂದು ಸಿಂಘ್ವಿ ವಾದ ಮಂಡಿಸಿದ್ರು. ಆದ್ರೆ ಕಳೆದ ಚುನಾವಣೆ ವೇಳೆ ಡಿಕೆಶಿ ಪುತ್ರಿ ಹೆಸರಲ್ಲಿ ನೂರು ಕೋಟಿ ಯಷ್ಟು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಡಿಕೆಶಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ
ಡಿಕೆ ಶಿವಕುಮಾರ್ 7 ಬಾರಿ ಶಾಸಕ ಆಗಿದ್ದಾರೆ. 45 ವರ್ಷದಿಂದ ಸಾರ್ವಜನಿಕ ಜೀವನದಲ್ಲಿ ಇದ್ದಾರೆ. ಯಾವಾಗ ಕರೆದರೂ ವಿಚಾರಣೆಗೆ ಹಾಜರಾಗ್ತಾರೆ. ನೀವು ಯಾವುದೇ ಷರತ್ತು ವಿಧಿಸಿದರೂ ಪರವಾಗಿಲ್ಲ ಜಾಮೀನು ಕೊಡಿ ಎಂದು ಮುಕುಲ್ ರೋಹಟಗಿ ಡಿಕೆಶಿ ಪರ ವಾದ ಮಂಡಿಸಿದ್ರು.
ಡಿಕೆ ಶಿವಕುಮಾರ್ ಹೊರ ಬಂದ್ರೆ ಸಾಕ್ಷಿ ನಾಶ
ಇನ್ನು ಡಿಕೆ ಶಿವಕುಮಾರ್ ಪ್ರಭಾವಿ ವ್ಯಕ್ತಿ, ಅವರು ಹೊರ ಬಂದ್ರೆ ಸಾಕ್ಷ್ಯ ನಾಶ ಮಾಡ್ತಾರೆ. ಈಗಾಗಲೇ ಅವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೇವೆ. ಮತ್ತೆ ಅಗತ್ಯವಿದ್ದರೆ ಚಿಕಿತ್ಸೆ ಕೊಡಿಸುತ್ತೇವೆ. ಆರೋಪಿಗೆ ಜಾಮೀನು ಸಿಕ್ಕರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಕೊಡಿ ಅಂತ ಇಡಿ ಪರ ವಕೀಲ ನಟರಾಜ್ ವಾದ ಮಂಡಿಸಿದ್ರು. ನನಗೆ ಇನ್ನು ಹೆಚ್ಚಿನ ವಾದ ಮಾಡಲು ಒಂದು ಗಂಟೆ ಕಾಲಾವಕಾಶ ಬೇಕು ಹಾಗಾಗಿ ನಾಳೆ ವಾದ ಮಾಡುತ್ತೇನೆ ಎಂದು ವಕೀಲ ನಟರಾಜ್ ಹೇಳಿದ್ರು. ಈ ವೇಳೆ ನ್ಯಾಯಾಧೀಶರು ಒಂದು ಗಂಟೆ ಸಾಧ್ಯವಿಲ್ಲ ಅರ್ಧಗಂಟೆಯಲ್ಲಿ ವಾದ ಮುಗಿಸುವಂತೆ ಹೇಳಿದ್ರು.
ನಂತರ ವಾದ ಮುಂದುವರೆಸಿದ ನಟರಾಜ್ ಈ ಪ್ರಕರಣ ಸಂಬಂಧ ಇನ್ನು ಹಲವರಿಗೆ ಸಮನ್ಸ್ ನೀಡಲಾಗಿದೆ. 9 ಜನರ ವಿಚಾರಣೆ ಸಂದರ್ಭದಲ್ಲಿ 143 ಕೋಟಿ ದಾಖಲೆ ಇಲ್ಲದ ಅಕ್ರಮ ವ್ಯವಹಾರ ಪತ್ತೆಯಾಗಿದೆ. ಇನ್ನು ಹಲವರನ್ನ ವಿಚಾರಣೆ ಮಾಡಬೇಕಿದೆ ಹೀಗಾಗಿ ಆರೋಪಿಗೆ ಜಾಮೀನು ನೀಡದಂತೆ ನಟರಾಜ್ ನ್ಯಾಯಾಧೀಶರನ್ನ ಒತ್ತಾಯಿಸಿದ್ರು. ಇನ್ನು 143 ಕೋಟಿಗೆ ಡಿಕೆ ಶಿವಕುಮಾರ್ ಯಾವುದೇ ದಾಖಲೆ ಒದಗಿಸುತ್ತಿಲ್ಲ. ಕುಟುಂಬಸ್ಥರು, ಆಪ್ತರ ಮೂಲಕ ಅಕ್ರಮ ವ್ಯವಹಾರ ಮಾಡಿದ್ದಾರೆ ಅಂತ ನಟರಾಜ್ ವಾದ ಮಾಡಿದ್ರು.
ನಮಗೆ ದಾಖಲೆ ನೀಡಿಲ್ಲ, ನಿಮಗೆ ಕೊಡಲ್ಲ : ವಕೀಲರ ವಾದ ಪ್ರತಿವಾದ
ಡಿಕೆಶಿ ಮೇಲೆ ಇಡಿ ವಕೀಲ ಗಂಭೀರ ಆರೋಪ ಮಾಡಿದ ಹಿನ್ನೆಲೆ ಈ ಸಂಬಂಧ ನಮಗೆ ದಾಖಲೆ ಕೊಟ್ಟಿಲ್ಲ ಅಂತ ಡಿಕೆ ಶಿವಕುಮಾರ್ ಪರ ವಕೀಲ ಸಿಂಘ್ವಿ ಹೇಳಿದ್ರು. ಇದಕ್ಕೆ ಪ್ರತ್ಯುತ್ತರ ನೀಡಿದ ಇಡಿ ವಕೀಲ ಚಾರ್ಜ್ ಶೀಟ್ ಸಲ್ಲಿಸಿದ ನಂತರ ನಿಮಗೆ ಮಾಹಿತಿ ಸಿಗುತ್ತೆ ಅಂತ ಹೇಳಿದ್ರು. ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಗೆ 24 ವರ್ಷ. ಆರೋಪಿ ಮಗಳು 108 ಕೋಟ ವ್ಯವಹಾರ ಮಾಡಿರುವುದು ನಂಬಲು ಅಸಾಧ್ಯ ಅಂತ ನಟರಾಜ್ ವಾದ ಮಂಡಿಸಿದ್ರು. ಇನ್ನು ಗಿಫ್ಟ್ ಡೀಡ್ ಮುಲಕ ಐಶ್ವರ್ಯಾ ಹೆಸರಿನಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿದೆ ಇದು ಬರೀ 41 ಲಕ್ಷದ ವ್ಯವಹಾರ ಅಲ್ಲ ಅಂತ ನಟರಾಜ್ ಹೇಳಿದ್ರು.