- Advertisement -
ಇನ್ಮೇಲೆ ಎಕ್ಸ್‌ಪ್ರೆಸ್ ರೀತಿ ಬರುತ್ತೆ DL
ರಾಜ್ಯದಲ್ಲಿ ಚಾಲನಾ ಪರವಾನಗಿ ಅಂದ್ರೆ ಡಿಎಲ್ ಫಟಾಫಟ್ ಅಂತ ಸಿಗಲಿದೆ. ವಾಹನ ನೋಂದಣಿ ಪ್ರಮಾಣಪತ್ರದ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿನ ಅನಗತ್ಯ ವಿಳಂಬ ಹಾಗೂ ಅಕ್ರಮ ತಡೆಯಲು ಸಾರಿಗೆ ಇಲಾಖೆಯು ಸ್ಮಾರ್ಟ್ ಕಾರ್ಡ್‌ಗಳ ಕೇಂದ್ರಿಕೃತ ಮುದ್ದಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಮೂರು ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗಳು, 44 ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗಳಿವೆ. ಈ 67 ಕಚೇರಿಗಳ ಮೂಲಕ ಸಾರ್ವಜನಿಕರಿಗೆ ವೆಬ್ ಆಧಾರಿತ ಸಾರಥಿ 4 ಮತ್ತು ವಾಹನ್ 4 ತಂತ್ರಾಂಶದ ಮೂಲಕ DL ಮತ್ತು ವಾಹನ ನೋಂದಣಿ ಪ್ರಮಾಣಪತ್ರ ಒದಗಿಸಲಾಗುತ್ತಿದೆ.
ಸದ್ಯ ಆಯಾ RTO ಕಚೇರಿಗಳಲ್ಲೇ DL ಮತ್ತು RC ಸ್ಮಾರ್ಟ್ ಕಾರ್ಡ್ಗಳನ್ನು ಮುದ್ರಿಸಿ ಕೊಡಲಾಗುತ್ತಿದೆ. ಆದರೆ, ಸ್ಮಾರ್ಟ್ ಕಾರ್ಡ್ಗಳನ್ನು ಮುದ್ರಿಸಿ ಕೊಡಲಾಗುತ್ತಿದೆ. ಆದರೆ, ಸ್ಮಾರ್ಟ್ ಕಾರ್ಡ್ ಗಳು ಕಾಲಮಿತಿಯೊಳಗೆ ಜನರ ಕೈಸೇರುತ್ತಿಲ್ಲ ಎಂಬ ಆರೋಪವಿದೆ. ಜತೆಗೆ, ಅಕ್ರಮದ ಬಗ್ಗೆ ವ್ಯಾಪಕ ದೂರು ಕೇಳಿಬರುತ್ತಿದೆ. ಹೀಗಾಗಿ, ಇಲಾಖೆಯು ಹಳೆಯ ವ್ಯವಸ್ಥೆಗೆ ಇತಿಶ್ರೀ ಹಾಡುತ್ತಿದೆ. ಇನ್ನು ಮುಂದೆ ಬೆಂಗಳೂರಿನ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲೇ ಕೇಂದ್ರಿಕೃತ ಮುದ್ರಣ ವ್ಯವಸ್ಥೆ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ಗಳು ಸಿದ್ದವಾಗಲಿವೆ. ಬಳಿಕ ಸ್ಪೀಡ್ ಪೋಸ್ಟ್ ಮೂಲಕ ಜನರ ಮನೆ ಬಾಗಿಲಿಗೆ ತ್ವರಿತವಾಗಿ ಸ್ಮಾರ್ಟ್ ಕಾರ್ಡ್ ತಲುಪಿಸಲಾಗುತ್ತದೆ.
ಸದ್ಯ ನೀಡಲಾಗುತ್ತಿರುವ DL ಮತ್ತು RC ಗಳು ವಿನೈಲ್ ಕ್ಲೋರೈಡ್ ಕಾರ್ಡ್‌ಗಳಾಗಿವೆ. ಈ ಕಾರ್ಡ್ಗಳ ಮೇಲಿನ ಅಕ್ಷರಗಳು ಬೇಗನೆ ಅಳಿಸಿ ಹೋಗುವ ಅಥವಾ ಕಾರ್ಡ್ ಮುರಿದು ಹೋಗುವ ಸಾಧ್ಯತೆ ಇರುತ್ತದೆ. ಆದರೆ, ಹೊಸದಾಗಿ ನೀಡುವ ಸ್ಮಾರ್ಟ್ ಕಾರ್ಡ್‌ಗಳು ಪಾಲಿ ಕಾರ್ಬೊನೇಟ್ ಆಗಿರುವುದರಿಂದ ಬೇಗನೆ ಮುರಿಯುವುದಿಲ್ಲ ಹಾಗೂ ಅಕ್ಷರಗಳು ಅಳಿಸಿ ಹೋಗುವುದಿಲ್ಲ.
ನೂತನ ಸ್ಮಾರ್ಟ್ ಕಾರ್ಡ್ ಗಳಲ್ಲಿ ಚಿಪ್‌ನ ಜೊತೆಗೆ QR ಕೋಡ್ ಸಹ ಇರಲಿದೆ. ಈ QR ಕೋಡ್ ಸ್ಕ್ಯಾನ್ ಮಾಡಿದರೆ ಡಿಎಲ್ ಅಥವಾ ಆರ್ ಸಿ ಹೊಂದಿರುವವರ ಪ್ರಾಥಮಿಕ ಮಾಹಿತಿ ಸ್ಥಳದಲ್ಲೇ ಸಿಗಲಿದೆ. ಪೂರ್ಣ ಮಾಹಿತಿ ಮಾತ್ರ ಚಿಪ್‌ನಲ್ಲಿ ಇರುತ್ತದೆ. ಸಂಚಾರದ ಅವಧಿಯಲ್ಲಿ ಪೊಲೀಸರು ಅಥವಾ ಸಾರಿಗೆ ಇಲಾಖೆ ಸಿಬ್ಬಂದಿಯು ಸುಲಭವಾಗಿ ತಪಾಸಣೆ ಮಾಡಬಹುದು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -