Health Tips: ನಾವು ಆರೋಗ್ಯವಾಗಿರಬೇಕು ಅಂದ್ರೆ, ಮೊದಲು ನಮ್ಮ ಹೃದಯ, ಜೀರ್ಣಾಂಗ, ಲಿವರ್, ಕಿಡ್ನಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಇವೆಲ್ಲವೂ ಚೆನ್ನಾಗಿರಬೇಕು ಅಂದ್ರೆ, ನಾವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಪದಾರ್ಥಗಳು, ಬೀದಿಬದಿ ತಿಂಡಿಗಳನ್ನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರು ಈ ಬಗ್ಗೆ ಮಾತನಾಡಿದ್ದು, ನಮ್ಮ ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನಾವು ಕೆಲ ಆಹಾರಗಳನ್ನು ಸೇವಿಸಬಾರದು ಅಂದಿದ್ದಾರೆ.
ನಾವು ಹೊಟೇಲ್‌ನಲ್ಲಿ ಸಿಗುವ ಸ್ಮೋಕಿ ಫುಡ್‌ಗಳನ್ನು ತಿನ್ನಬಾರದು ಅಂತಾರೆ ವೈದ್ಯರು. ತಿಂಗಳಿಗೆ ಅಥವಾ ಎರಡು-ಮೂರು ತಿಂಗಳಿಗೆ ಒಮ್ಮೆ ಸ್ಮೋಕಿ ಫುಡ್ ತಿಂದರೆ, ತೊಂದರೆ ಇಲ್ಲ. ಆದರೆ ನೀವು ವಾರಕ್ಕೊಮ್ಮೆ ಅಥವಾ ಪದೇ ಪದೇ ಸ್ಮೋಕಿ ಫುಡ್ ತಿಂದರೆ, ನಿಮ್ಮ ಹೃದಯದ ಆರೋಗ್ಯ ಬಹುಬೇಗ ಹಾಳಾಗುತ್ತದೆ. ಹಾಗಾಗಿ ಹೃದಯದ ಆರೋಗ್ಯ ಚೆನ್ನಾಗಿರಬೇಕು. ರಕ್ತನಾಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು ಅಂದ್ರೆ ಇಂಥ ಸ್ಮೋಕಿ ಫುಡ್ ಸೇವಿಸಬೇಡಿ ಅಂತಾರೆ ವೈದ್ಯರು.
ಅಷ್ಟೇ ಅಲ್ಲದೇ ಬಿಪಿ, ಶುಗರ್ ಕಂಟ್ರೋಲ್‌ನಲ್ಲಿ ಇರಬೇಕು ಅಂದ್ರೆ, ನಾವು ಸ್ಮೋಕಿ ಫುಡ್ ಸೇವನೆ ಕಡಿಮೆ ಮಾಡಬೇಕು. ಇಲ್ಲದಿದ್ದಲ್ಲಿ, ಬಿಪಿ, ಶುಗರ್ ಲೇವಲ್ ಹೆಚ್ಚಾಗುತ್ತದೆ. ಬಿಪಿ ಲೇವಲ್ ಹೆಚ್ಚಾದರೆ, ಬ್ರೇನ್ ಟ್ಯೂಮರ್, ಹಾರ್ಟ್ ಅಟ್ಯಾಕ್ ಬಂದು ಸಾವು ಸಂಭವಿಸುತ್ತದೆ. ಹಾಗಾಗಿ ಸ್ಮೋಕಿ ಫುಡ್ ಸೇವಿಸಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.