ನಾವು ಮಾಡೋ ಕೆಲಸ ನಡೆಯುವ ದಾರಿ ಆತ್ಮಸಾಕ್ಷಿಗೆ ವಿರುದ್ಧವಾಗಿರಬಾರದು ಅಂತಾ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಂ.ಎಲ್ ರಘುನಾಥ್ ಹೇಳಿದ್ರು.

ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಆತ್ಮಹತ್ಯೆಯ ಪ್ರಕರಣಗಳು ಬಲವಂತದ ಸಾವನ್ನ ತಂದುಕೊಡುತ್ತವೆ. ಆತ್ಮಹತ್ಯೆಗೆ ಭೇದಭಾವವಿರಲ್ಲ. ಆದರೆ ನಾವು ಸಾವನ್ನ ಜಯಿಸಿ ಉತ್ತಮ ಬದುಕನ್ನ ರೂಪಿಸಿಕೊಳ್ಳಬೇಕು ಅಂತಾ ಕಿವಿಮಾತು ಹೇಳಿದ್ರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಎನ್.ಸಿ ನಾರಾಯಣಸ್ವಾಮಿ, ದೇಶದಲ್ಲಿ ಒಂದು ಲಕ್ಷಕ್ಕೆ 12 ಜನರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಸಾಲಿನಲ್ಲಿ ವಿವಿಧ ಕಾರಣಗಳಿಂದಾಗಿ 11,288 ಜನರು ಆತ್ಮಹತ್ಯೆಗೆ ತುತ್ತಾಗಿದ್ದಾರೆ ಅಂತಾ ಕಳವಳ ವ್ಯಕ್ತಪಡಿಸಿದ್ರು.
ಕಾರ್ಯಕ್ರಮದಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್.ಡಿ, 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್, ಹಿರಿಯ ನ್ಯಾಯಾಧೀಶಕರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್.ಗಂಗಾಧರ್, ವಕೀಲರ ಸಂಘದ ಅಧ್ಯಕ್ಷರಾದ ಶ್ರೀಧರ್, ಕಾರ್ಯದರ್ಶಿಗಳಾದ ರಘುಪತಿ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.
ನಾಗೇಶ್ ಹುಳದೇನಹಳ್ಳಿ ಕರ್ನಾಟಕ ನ್ಯೂಸ್ ಕೋಲಾರ

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278




