ರಂಗೋಲಿ. ಹಿಂದೂ ಸಂಪ್ರದಾಯದ ಒಂದು ಭಾಗ, ಕೆಲ ಹಿಂದೂ ಮಹಿಳೆಯರು ಪ್ರತಿದಿನ ಬೆಳಿಗ್ಗೆ ಎದ್ದು ಮನೆ ಅಂಗಳವನ್ನ ಗುಡಿಸಿ, ನೀರು ಹಾಕಿ, ರಂಗೋಲಿ ಇಡುತ್ತಾರೆ. ಆದ್ರೆ ಈ ವೇಳೆ ಹೆಂಗಸರು ಮಾಡುವ ಕೆಲ ತಪ್ಪುಗಳಿಂದ ಮನೆಗೆ ಒಳಿತಾಗುವುದಿಲ್ಲ. ಹಾಗಾದ್ರೆ ಏನು ಆ ತಪ್ಪುಗಳು..? ಆ ತಪ್ಪು ಮಾಡೋದ್ರಿಂದಾ ಏನಾಗತ್ತೆ ಅನ್ನೋದನ್ನ ನೋಡೋಣ ಬನ್ನಿ.

ರಂಗೋಲಿ ಬರೀ ಚಂದಕ್ಕಷ್ಟೇ ಹಾಕೋದಲ್ಲಾ. ಲಕ್ಷ್ಮೀ ದೇವಿಯ ಸ್ವಾಗತಕ್ಕೆ, ಆಕೆಯ ಆಗಮನದಿಂದ ಮನೆಗೆ ಒಳಿತಾಗಲಿ ಎಂಬ ಕಾರಣಕ್ಕೆ ರಂಗೋಲಿ ಹಾಕುತ್ತೇವೆ. ಆದ್ರೆ ರಂಗೋಲಿ ಹಾಕುವಾಗ ಕೆಲ ತಪ್ಪುಗಳು ನಮಗೆ ಗೊತ್ತಿಲ್ಲದೇ ನಡೆದು ಹೋಗುತ್ತದೆ. ಈ ಕಾರಣಕ್ಕೆ ಅಭಿವೃದ್ಧಿಗೊಳ್ಳಬೇಕಾದ ಮನೆ, ಅಭಿವೃದ್ಧಿಯಾಗದೇ ಹಾಗೆ ಇರುತ್ತದೆ.
ಬೆಳಗ್ಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ರಂಗೋಲಿ ಹಾಕುವುದು ಉತ್ತಮ. ರಂಗೋಲಿ ಹಾಕುವಾಗ ಕೆಲವರು ಅಂದಗಾಣಲಿ ಎಂದು ರಂಗೋಲಿಯ ಮಧ್ಯ ಭಾಗದಲ್ಲಿ ಅರಿಷಿನ ಕುಂಕುಮದಿಂದ ಅಲಂಕಾರ ಮಾಡ್ತಾರೆ. ಆದ್ರೆ ಅದು ತಪ್ಪು, ಅರಿಷಿನ ಕುಂಕುಮವನ್ನ ರಂಗೋಲಿ ಮಧ್ಯ ಭಾಗದಲ್ಲಿ ಹಾಕಬಾರದು.
ಹಿಂದೂಧರ್ಮದಲ್ಲಿ ಅರಿಷಿನ ಕುಂಕುಮಕ್ಕೆ ಉನ್ನತ ಪ್ರಾಧಾನ್ಯತೆ ನೀಡಲಾಗಿದೆ. ಅರಿಷಿನ ಕುಂಕುಮವಿಲ್ಲದೇ ಯಾವುದೇ ಶುಭಕಾರ್ಯ ಜರಗುವುದೇ ಇಲ್ಲ. ಚಿಕ್ಕ ಪುಟ್ಟ ಪೂಜೆಯಿಂದ ಹಿಡಿದು, ಗೃಹಪ್ರವೇಶ, ಮದುವೆ ವರೆಗೂ ಅರಿಷಿನ ಕುಂಕುಮ ಬೇಕೆ ಬೇಕು. ಇಂಥ ಅರಿಷಿನ ಕುಂಕುಮವನ್ನು ನಾವು ರಂಗೋಲಿ ಮಧ್ಯೆ ಅಲಂಕಾರಕ್ಕಾಗಿ ಹಾಕಿದ್ರೆ, ಅಪ್ಪಿ ತಪ್ಪಿ ಅದನ್ನ ಯಾರಾದ್ರೂ ಕಾಲಿನಿಂದ ತುಳಿದ್ರೆ, ಆ ಪಾಪ ರಂಗೋಲಿ ಹಾಕಿದವರಿಗೂ ಸುತ್ತಿಕೊಳ್ಳುತ್ತೆ.
ಇನ್ನು ಹಬ್ಬ ಹರಿದಿನಗಳಲ್ಲಿ ಕೆಲವರು ಬಣ್ಣ ಬಣ್ಣದ ರಂಗೋಲಿ ಹಾಕುತ್ತಾರೆ. ಆದ್ರೆ ಈ ವೇಳೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಹಾಕಲು, ಬಣ್ಣ ಬಳಸುವುದರ ಬದಲು, ಅರಿಷಿನ ಮತ್ತು ಕುಂಕುಮ ಬಳಸುತ್ತಾರೆ. ಇದು ತಪ್ಪು. ಹೀಗೆ ಮಾಡಿದ್ದಲ್ಲಿ ಮನೆಗೆ ಲಕ್ಷ್ಮೀಯ ಆಗಮನವಾಗುವುದಿಲ್ಲ. ಬದಲಾಗಿ ಮನೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.

ಶ್ರೀ ಗಣಪತಿ ಜ್ಯೋತಿಷ್ಯ ಕೇಂದ್ರ
ಭಾರತದ ಪ್ರಖ್ಯಾತ ಜ್ಯೋತಿಷ್ಯರು ಪಂಡಿತ್ ಸಂತೋಷ್ ರಾವ್
ದೂರವಾಣಿ ಸಂಖ್ಯೆ: 9380683911
ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷಗಳಿಗಿಂತಲೂ ಅಧಿಕ ಅನುಭವ, ನಿಮ್ಮ ಯಾವುದೇ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ದಾಂಪತ್ಯ ಕಲಹ, ವ್ಯವಹಾರದಲ್ಲಿ ಸಮಸ್ಯೆ, ಕೋರ್ಟ್ ಕೇಸ್, ಸ್ತ್ರೀ- ಪುರುಶ ವಶೀಕರಣ, ಮಾಟ ಮಂತ್ರ ಇತರೇ ಯಾವುದೇ ಸಮಸ್ಯೆಗಳಿಗೆ ಪ್ರಾಚೀನ ಕಾಲದ ವೇದ ಶಾಸ್ತ್ರದ ಮೂಲಕ ಕೇವಲ 7 ದಿನಗಳಲ್ಲೇ ಶಾಶ್ವತ ಪರಿಹಾರ.
ಇಂದೇ ಸಂಪರ್ಕಿಸಿ ಶ್ರೀ ಪಂಡಿತ್ ರಾವ್: 9380683911