Health Tips: ಜೀವನದಲ್ಲಿ ಗಂಡಿಗಿಂತ ಹೆಚ್ಚು ಹೆಣ್ಣು ಮಾನಸಿಕ ಸಮಸ್ಯೆ ಎದುರಿಸಿರುತ್ತಾಳೆ ಅನ್ನೋ ಮಾತನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಹೆಂಗಸರಿಗೆ ಹೆಚ್ಚು ಮಾನಸಿಕ ಹಿಂಸೆ ಆಗೋದೇಕೆ ಅನ್ನೋ ಬಗ್ಗೆ ವೈದ್ಯರೇ ಹೇಳಿದ್ದಾರೆ ಕೇಳಿ.
ಗಂಡಿನ ದೇಹದಲ್ಲಾಗುವ ಬದಲಾವಣೆಗಿಂತ, ಹೆಣ್ಣಿನ ದೇಹದಲ್ಲಿ ಹೆಚ್ಚು ಬದಲಾವಣೆಗಳಾಗುತ್ತದೆ. ಏಕೆಂದರೆ ಆಕೆ ಋತುಮತಿಯಾಗುತ್ತಾಳೆ. ಆಕೆ ಗರ್ಭಿಣಿಯಾಗುತ್ತಾಳೆ. ಮಗುವನ್ನು ಹೆರುತ್ತಾಳೆ. ಕಡೆಗೆ ಋತುಚಕ್ರ ಮುಗಿಸುತ್ತಾಳೆ. ಹಾಗಾಗಿ ಹೆಣ್ಣಿನ ದೇಹದಲ್ಲಾಗುವ ಈ ಬದಲಾವಣೆಗಳಿಂದಲೇ, ಅವರ ಮಾನಸಿಕ ನೆಮ್ಮದಿಯ ಮೇಲೂ ಸಮಸ್ಯೆಗಳಾಗುತ್ತದೆ.
ಹೆಣ್ಣು ಪ್ರಥಮ ಬಾರಿಗೆ ಋತುಮತಿಯಾದಾಗ, ಆಕೆ ಗರ್ಭಿಣಿಯಾದಾಗ, ಹೆರಿಗೆಯಾದಾಗ, ಮತ್ತು ಋತುಚಕ್ರ ನಿಲ್ಲುವ ವೇಳೆಗೆ, ಆಕೆಗೆ ಮಾನಸಿಕ ನೆಮ್ಮದಿ ಇರುವುದಿಲ್ಲ. ಹಾಗಾಗಿ ಮಾತಿನಲ್ಲೂ ಕೆಲವು ಬಾರಿ ಹಿಡಿತ ತಪ್ಪುತ್ತದೆ. ಆಗ ಸಮಸ್ಯೆ ಉಂಟಾಗಬಹುದು. ಜಗಳವಾಗಬಹುದು. ಆ ವೇಳೆ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.