Thursday, December 5, 2024

Latest Posts

ಆ್ಯ*ಕ್ಸಿಡೆಂಟ್ ಸ್ಕ್ಯಾಮ್‌ನಲ್ಲಿ ಸಿಲುಕಿಕೊಳ್ಳಬಾರದು ಅಂದ್ರೆ ಈ ಕೆಲಸ ಮಾಡಿ.

- Advertisement -

Tech News: ನೀವು ನಿಮ್ಮ ಸ್ವಂತ ಕಾರಿನಲ್ಲಿ ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವಾಗ, ಸಡನ್ನಾಗಿ ಯಾರೋ ಅಡ್ಡ ಬಂದು ಬಿದ್ದು, ಆ್ಯಕ್ಸಿಡೆಂಟ್ ಮಾಡಿದ್ರಿ, ನನಗೆ ಇಂತಿಷ್ಟು ದುಡ್ಡು ಕೊಡಿ, ಇಲ್ಲವಾದಲ್ಲಿ ಗಲಾಟೆ ಮಾಡ್ತೇನೆ ಅಂತಾ ಹೇಳಿದ್ರೆ, ನೀವು ಕಕ್ಕಾಬಿಕ್ಕಿಯಾಗದೇ ಇರ್ತೀರಾ..? ಖಂಡಿತ ಆಗುತ್ತೀರಿ. ಹಾಗಾಗಿಯೇ ನೀವು ಒಂದು ಉಪಾಯ ಮಾಡಿ, ಈ ರೀತಿಯ ಸ್ಕ್ಯಾಮ್‌ನಿಂದ ತಪ್ಪಿಸಿಕೊಳ್ಳಬಹುದು. ಹಾಗಾದ್ರೆ ಅದ್ಯಾವ ಉಪಾಯ ಅಂತಾ ತಿಳಿಯೋಣ ಬನ್ನಿ..

ಡ್ಯಾಶ್‌ಕ್ಯಾಮ್. ಇದೊಂದು ಕ್ಯಾಮೆರಾ ಆಗಿದ್ದು, ನಿಮ್ಮ ಗಾಡಿಯ ಮುಂದೆ ಈ ಕ್ಯಾಮೆರಾ ಫಿಕ್ಸ್ ಮಾಡಿದ್ರೆ, ನಿಮ್ಮ ತಪ್ಪಿನಿಂದ ಅಪಘಾತವಾಯಿತಾ ಅಥವಾ ಯಾರೋ ನಿಮ್ಮ ಮೇಲೆ ಗೂಬೆ ಕೂರಿಸಿ, ಲಾಭ ಪಡೆಯಲು ಬಂದ್ರಾ ಅನ್ನೋದು ಗೊತ್ತಾಗುತ್ತದೆ. ಆಗ ಅವರೇನೆ ಹೇಳಿ ಹೆದರಿಸಿದರೂ, ನೀವು ಹೆದರದೇ, ಪೊಲೀಸರಿಗೆ ಸಾಕ್ಷಿ ತೋರಿಸಿ, ನಿಮಗೆ ಮೋಸ ಮಾಡಿದವರನ್ನೇ ಪೊಲೀಸರಿಗೆ ಹಿಡಿದೊಪ್ಪಿಸಬಹುದು.

ಅಲ್ಲದೇ, ನಿಮ್ಮ ಕಾರಿಗೆ ಏನಾದರೂ ಸಮಸ್ಯೆ ಆಗಿದ್ದಲ್ಲಿ, ಇನ್ಶೂರೆನ್ಸ್ ಕೂಡ ಕೂಡಲೆ ಸಿಗುತ್ತದೆ. ಕಾರ್ ಇನ್ಶೂರೆನ್ಸ್‌ನಲ್ಲಿ 20 ಪರ್ಸೆಂಟ್ ಲಾಭಸಿಗುತ್ತದೆ. ಇದರೊಂದಿಗೆ ನಿಮಗೆ ಹಲವು ಲಾಭಗಳು ಆಗಲಿದೆ. ಆದರೆ ತಪ್ಪು ನಿಮ್ಮದಾಗಿರಬಾರದು ಅಷ್ಟೇ. 2ರಿಂದ 5 ಸಾವಿರದವರೆಗೆ ಉತ್ತಮ ಕ್ವಾಲಿಟಿಯ ಡ್ಯಾಶ್‌ಕ್ಯಾಮ್ ನಿಮಗೆ ಸಿಗುತ್ತದೆ. ಖರೀದಿಸಿ, ನಿಮ್ಮ ತಪ್ಪಿಲ್ಲದೇ ಆಗುವ ಅನಾಹುತವನ್ನು ತಪ್ಪಿಸಿಕೊಳ್ಳಬಹುದು.

- Advertisement -

Latest Posts

Don't Miss