Devotional:
ದೀಪಾವಳಿ ಎಂದರೆ ಇಡೀ ವಿಶ್ವವೇ ಆಚರಿಸುವ ಹಬ್ಬವಾಗಿದೆ ಎಲ್ಲೆಡೆ ಬೆಳಕು ತುಂಬಿ ಕೊಂಡಿರುತ್ತದೆ .ಅತ್ಯಂತ ಸಂಭ್ರಮ ಸಡಗರದಿಂದ ಹಿಂದೂಗಳು ಆಚರಿಸುವ ಹಬ್ಬವಾಗಿದೆ. ಈ ದಿನ ಲಕ್ಷ್ಮಿ ಪೂಜೆಯನ್ನು ಎಲ್ಲೆಡೆ ಆಚರಿಸುತ್ತಾರೆ,ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಅನುಗ್ರಹಿಸುವಂತೆ ಸಂಪತ್ತಿನ ದೇವತೆಯನ್ನು ಪ್ರಾರ್ಥಿಸುತ್ತಾರೆ. ಹಾಗಾದರೆ ಲಕ್ಷ್ಮಿ ದೇವಿಯನ್ನು ದೀಪಾವಳಿ ದಿನ ಹೇಗೆ ಪೂಜಿಸಿದರೆ ಸಮೃದ್ಧಿ ವೃದ್ಧಿಯಾಗುತ್ತದೆ ಎನ್ನುವುದನ್ನು ತಿಳಿದು ಕೊಳ್ಳೋಣ .
ದೀಪಾವಳಿ ಹಬ್ಬದ ದಿನ ಲಕ್ಷ್ಮಿ ಕುಬೇರ ಯಂತ್ರವನ್ನು ಸ್ಥಾಪನೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ,ಹಾಗಾದರೆ ಲಕ್ಷ್ಮಿ ಕುಬೇರ ಯಂತ್ರ ಎಂದರೆ ಏನು…?ಯಾವ ರೀತಿ ಸ್ಥಾಪನೆ ಮಾಡಬೇಕು…? ಯಂತ್ರವನ್ನು ಎಲ್ಲಿ ತೆಗೆದುಕೊಳ್ಳಬೇಕು..? ಎಂದು ತುಂಬಾ ಜನರಿಗೆ ಕುತುಹಲವಿರುತ್ತದೆ ,ಆದರೆ ಈ ಯಂತ್ರವನ್ನು ಸ್ವಂತ ನೀವೇ ತಯಾರಿಸಿ ಕೊಳ್ಳಬಹುದು ,ಮೊದಲು ಒಂದು ಬಿಳಿ ಕಾಗದವನ್ನು ತೆಗೆದುಕೊಂಡು 4ದಿಕ್ಕುಗಳಲ್ಲಿ ಅರಿಶಿನವನ್ನು ಹಚ್ಚಬೇಕು. ನಂತರ ಸ್ಕ್ರೀನ್ ಮೇಲೆ ಬಂದಿರುವಂತಹ ಕುಬೇರ ಲಕ್ಷ್ಮಿ ಯಂತ್ರವನ್ನು ನೋಡಿ ಹಾಗೆಯೆ ನೀವು ಯಂತ್ರವನ್ನು ತಯಾರು ಮಾಡಿಕೊಳ್ಳಬೇಕು ,ಆ ಒಂಬತ್ತು ಸಂಖ್ಯೆಗಳನ್ನು ಸರಿಯಾಗಿ ನೀವೆ ಬ್ಲೂಇಂಕ್ ಪೆನ್ನಿನಲ್ಲಿ ಬರೆದು ಕೊಂಡು, ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಇಟ್ಟು ದೇವರ ಕೋಣೆಯಲ್ಲಿ ಇಡ ಬೇಕು ನಂತರ ಎಲ್ಲ 9ಸಂಖ್ಯೆಗಳಿಗೆ ಅರಿಶಿನ ಕುಂಕುಮ ಹಾಗೂ 1ರೂಪಾಯಿ ಕಾಯಿನ್ ಇಡಬೇಕು. ಅದರ ಮೇಲೆ ಲಕ್ಷ್ಮಿಗೆ ಪ್ರಿಯವಾದ ಕೆಂಪು ಹೂವನ್ನು ಇಟ್ಟು ದೂಪ ದೀಪಗಳಿಂದ ಯಂತ್ರವನ್ನು ಪೂಜಿಸಬೇಕು ಪೂಜಿಸುವಾಗ ಲಕ್ಷ್ಮಿ ಕುಬೇರ ಮಂತ್ರವನ್ನು 108ಸಲ ಪಠಿಸಬೇಕು ,ಒಂದು ವರ್ಷ ಆಂದರೆ ಮುಂದಿನ ದೀಪಾವಳಿಯ ವರೆಗೂ ಪ್ರತಿದಿನ ಯಂತ್ರವನ್ನು ಪೂಜಿಸಿ ಈ ಮಂತ್ರವನ್ನು ಪಠಿಸಬೇಕು .ಅತ್ಯಂತ ಶಕ್ತಿಶಾಲಿ ಮಂತ್ರ ,ನಿಮಗೆ ಸಾಲ ಬಾದೆಗಳಿದ್ದರೆ ,ಅನವಶ್ಯಕ ದುಡ್ಡು ಖರ್ಚಾಗುತ್ತಿದ್ದರೆ ,ಈ ತರಹದ ತೊಂದರೆಗಳಿಂದ ವಿಮುಕ್ತಿ ಹೊಂದಬಹುದು .
ಹಾಗೆಯೆ ದೀಪಾವಳಿಯ ದಿನ ಇನೊಂದು ಕೆಲಸ ಮಾಡಿ ಏನೆಂದರೆ 6ಹರಿಶಿನ ಬಣ್ಣ ಇರುವಂತಹ ಕವಡೆಗಳನ್ನು ಮತ್ತು 6ಗೋಮತಿ ಚಕ್ರ, 6ಬಟ್ಲಡಿಕೆ,ಹಾಗೂ1ರೂಪಾಯಿ ಕೊಯಿನ್ಸ್6 ,ಕರ್ಪುರ 6 ,ಈ 5 ಪದಾರ್ತಗಳನ್ನು ತೆಗೆದುಕೊಂಡು ಒಂದು ಬಿಳಿ ಬಟ್ಟೆಗೆ ಅರಿಶಿನ ಹಚ್ಚಿ ಈ ಎಲ್ಲ ಪದಾರ್ಥಗಳನ್ನು ಆ ಬಿಳಿ ಬಟ್ಟೆಯಲ್ಲಿ ಕಟ್ಟಿ ದೇವರಮನೆಯಲ್ಲಿ ನೀವು ದುಡ್ಡು ಇಡುವ ಜಾಗದಲ್ಲಿ ಇಡಬೇಕು ಅದನ್ನು ಮುಂದಿನ ದೀಪಾವಳಿಯ ವರೆಗೂ ಹಾಗೆಯೆ ಇಟ್ಟು ದಿನವೂ ಪೂಜೆ ಮಾಡಬೇಕು, ದೀಪಾವಳಿಯ ದಿನ ಮನೆಯಲಿ ಸಾಂಬ್ರಾಣಿ ಹಚ್ಚಿ ಹೊಸ್ತಿಲಿನಲ್ಲಿ ತಪ್ಪದೆ ದೀಪಗಳನ್ನು ಹಚ್ಚಬೇಕು .
ಈ ನಾಲ್ಕು ನಕ್ಷತ್ರಗಳಲ್ಲಿ ಹುಟ್ಟಿದವರು ಅದೃಷ್ಟವಂತರು, ನಿಮ್ಮ ನಕ್ಷತ್ರ ಇದರಲ್ಲಿದ್ಯಾ…?
ಜ್ಯೋತಿಷ್ಯದ ಪ್ರಕಾರ ಸೋಮವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?




