Health tips:
ಮೂರು ಹೊತ್ತು ಅನ್ನ ತಿಂದರೆ ತೂಕ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಮತ್ತು ರಾತ್ರಿ ಟಿಫಿನ್ ತಿಂದರೆ ಹೆಚ್ಚಾದ ತೂಕವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಕೆಲವರು ಅನುಸರಿಸುವ ವಿಧಾನ ಬೆಳಿಗ್ಗೆ ಟೀ, ಕಾಫಿಯನ್ನು ಮಾತ್ರ ಕುಡಿಯುತ್ತಾರೆ ಇದು ಹಸಿವು ಕಡಿಮೆ ಮಾಡುತ್ತದೆ, ಈ ಮೂಲಕ ತೂಕ ಇಳಿಸಿಕೊಳ್ಳುವ ಯೋಚನೆ ಇರುತ್ತದೆ. ಆದರೆ ಟೀ ಮತ್ತು ಟಿಫಿನ್ ಗಳು ನಿಮಗೆ ತಿಳಿಯದಂತೆ ನಿಮ್ಮ ದೇಹಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತಿವೆ. ಇಡ್ಲಿ, ದೋಸೆ, ವಡೆ ಯಂತಹ ಟಿಫಿನ್ ಗಳನ್ನು ದಿನನಿತ್ಯ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟಾಗುತ್ತದೆ.
ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಆರೋಗ್ಯಕರ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಮತ್ತು ಸ್ನಾಯುಗಳ ಬೆಳವಣಿಗೆಯನ್ನು ಒದಗಿಸುವ ಆಹಾರವನ್ನು ಸೇವಿಸುತ್ತಿದ್ದರು. ಅವುಗಳಲ್ಲಿ ,ಮೊಸರಿನಲ್ಲಿ ರಾತ್ರಿ ಮಾಡಿದಅನ್ನ ತಿನ್ನುವುದು ಜೋಳ ರೊಟ್ಟಿ,ರಾಗಿ ಮುದ್ದೆ ,ಹೀಗೆ ಪೋಷಕಾಂಶಗಳ ಲೆಕ್ಕದಲ್ಲಿ ಬೆಲೆಯಿಲ್ಲದ ಅನೇಕ ಆಹಾರಗಳಿವೆ.
ಮಧ್ಯಾಹ್ನ ಅನ್ನ, ರಾತ್ರಿ ಟಿಫಿನ್ ತಿನ್ನುತ್ತಿದ್ದಾರೆ. ಇತರ ಟಿಫಿನ್ ಗಳಿಗೆ ಹೋಲಿಸಿದರೆ ಇಡ್ಲಿ ಉತ್ತಮ ಆದರೆ ಸಾಂಬಾರ್, ಶುಂಠಿ ಚಟ್ನಿ, ಕಾರದ ಪುಡಿ, ತುಪ್ಪ ಇವೆಲ್ಲವನ್ನೂ ಒಟ್ಟಿಗೆ ತಿಂದರೆ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಹಾಗೆಯೇ ಅನ್ನಕ್ಕಿಂತ ಉದ್ದಿನ ಬೇಳೆಯಲ್ಲಿ ಹೆಚ್ಚಿನ ಕ್ಯಾಲೋರಿಗಳಿರುತ್ತದೆ.ಇವು ಸಕ್ಕರೆಯಅಂಶವನ್ನು ಹೆಚ್ಚಿಸುತ್ತದೆ .ಪ್ರತಿದಿನ ಟಿಫಿನ್ ತಿನ್ನುವುದರಿಂದ ಕರುಳು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತದೆ ,ಕೀಲು ನೋವುಗಳಂತಹ ವಾತ ರೋಗಗಳು ಬರುತ್ತವೆ. ಪ್ರತಿನಿತ್ಯವೂ ಇಡ್ಲಿ, ದೋಸೆ, ವಡಾ,ಪೂರಿ, ಪರೋಟದಂತಹ ಟಿಫಿನ್ ಗಳನ್ನು ತಿನ್ನುವವರಿಗೆ ಮಧುಮೇಹ ಬರುತ್ತಿದೆ. ಹಾಗಾಗಿ ಟಿಫಿನ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಸೀಮಿತಗೊಳಿಸಬೇಕು.
ನೀವು ಬೆಳಿಗ್ಗೆ ಮೊಸರಿನಲ್ಲಿ ರಾತ್ರಿ ಉಳಿದ ಅನ್ನವನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ ಅಥವಾ ಮೊಳಕೆಯೊಡೆದ ಬೀಜಗಳು, ಹಣ್ಣುಗಳು, ಖರ್ಜೂರ ಇತ್ಯಾದಿಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಕೆಲವೇ ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆಯನ್ನು ಗಮನಿಸಬಹುದು. ಮಧ್ಯಾಹ್ನ ಹೊಟ್ಟೆ ತುಂಬ ತಿನ್ನಬೇಕು ಕೆಲವರು ಉಪವಾಸದ ಹೆಸರಿನಲ್ಲಿ ರಾತ್ರಿ ಅನ್ನವನ್ನು ಬಿಡುತ್ತಾರೆ. ಕೆಲವರು ಇಡ್ಲಿ, ದೋಸೆ, ಬೋಂಡಾ, ಪರೋಟ ಇತ್ಯಾದಿಗಳನ್ನು ತಿನ್ನುತ್ತಾರೆ .
ಆದರೆ ಹೀಗೆ ಮಾಡುವುದರಿಂದ ಸಾಮಾನ್ಯವಾಗಿ ಅನ್ನ ತಿನ್ನುವುದಕ್ಕಿಂತ ಹೆಚ್ಚು ದೇಹಕ್ಕೆ ಹಾನಿಯಾಗುತ್ತದೆ. ಬದಲಾಗಿ ಲಘುವಾಗಿ ತಿನ್ನುವುದರಿಂದ ನೀವು ಆರೋಗ್ಯವಂತರಾಗಿರುತ್ತೀರಿ. ಒಳ್ಳೆಯ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.