Wednesday, December 3, 2025

Latest Posts

ನನ್ನ ಸಾಧನೆ ಬಗ್ಗೆ ಗೊತ್ತಾ? ಜಂಟಿಯಾಗಿ ಹೋಗಿದ್ದು ತಪ್ಪಾಯ್ತಾ? RJ Amith Podcast

- Advertisement -

Big boss Kannada: ಬಿಗ್‌ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದ ಆರ್‌ಜೆ ಅಮೀತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಜಂಟಿಯಾಗಿ ಹೋಗಿದ್ದರ ಬಗ್ಗೆ ಮಾತನಾಡಿದ್ದಾೆರೆ.

ಅಮೀತ್ ಅವರು ನಾರ್ಮಲ್ ಆಗಿ ಬಿಗ್‌ಬಾಸ್ ಮನೆಗೆ ಹೋಗಿದ್ದರು. ಅವರಿಗೆ ಜಂಟಿ, ಒಂಟಿ ವಿಷಯದ ಬಗ್ಗೆ ತಿಳಿದೇ ಇರಲಿಲ್ಲ. ಅಲ್ಲಿರುವ ಸಿಬ್ಬಂದಿ ಬಗ್ಗೆ ಬೇಗ ಬೇಗ ಈ ಬಗ್ಗೆ ವಿವರಿಸಿ ಹೋಗಿದ್ದರು. ಆದರೆ ಸುದೀಪ್ ಎದುರಿಗೆ ಹೋದಾಗ ಅವರಿಗೆ ಮಾತೇ ಬರಲಿಲ್ಲವಂತೆ. ಆದರೆ ವೇದಿಕೆ ಮೇಲೆ ಹೋಗಿ ಅಮೀತ್ ಅವರು ಜಂಟಿಯಾಗಿ ಹೋಗಬೇಕು ಎಂದು ವೋಟ್ ಬಿದ್ದಾಗ, ಕರಿಬಸಪ್ಪ ಅವರು ಅಮೀತ್ ಅವರನ್ನು ಆಯ್ಕೆ ಮಾಡಿದ್ದರು.

ಆದರೆ ಅಮೀತ್ ಅವರಿಗೆ ಜಂಟಿಯಾಗಿ ಹೋಗಲು ಮನಸ್ಸಿರಲಿಲ್ಲ. ಹಾಗಾಗಿ ನಾನು ಓರ್ವ ಹೋಗಿದ್ದರೆ, ಇನ್ನೂ ಬಿಗ್‌ಬಾಸ್ ಮನೆಯಲ್ಲಿ ಇರುತ್ತಿದ್ದೆ ಅಂತಾರೆ ಅಮೀತ್. ಹಾಗಂತ ಕರಿಬಸಪ್ಪ ಅವರು ಕೆಟ್ಟವರಲ್ಲ. ಆದರೆ ಆ ಶೋಗೆ ಅವರು ತಕ್ಕವರಲ್ಲ ಅಂತಾ ಅಮೀತ್ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss