Bollywood News: ಯಾರಾದರೂ ಮದುವೆಗೆ ಕರೆದರೆ, ನಾವೇನು ಮಾಡುತ್ತೇವೆ..? ಮದುವೆಗೆ ಹೋಗಿ, ಉಡುಗೊರೆ ನೀಡಿ, ಊಟ ಮಾಡಿ, ವಿಶ್ ಮಾಡಿ ಬರುತ್ತೇವೆ. ಆದರೆ ಬಾಲಿವುಡ್ ನಟ ನಟಿಯರು ತಮ್ಮ ಸಂಬಂಧಿಕರ ಮನೆಗೆ ಬಿಟ್ಟರೆ, ಇತರರ ಮನೆಯ ಮದುವೆಗೆ ಎಂದಿಗೂ ಫ್ರೀಯಾಗಿ ಹೋಗೋದಿಲ್ಲ. ಅವರಿಗೆ ಸಿಕ್ಕಿರುವ ಪ್ರಸಿದ್ಧಿಯಿಂದ ಅವರು, ಗೆಸ್ಟ್ ಆಗಿ ಹೋಗುವುದಕ್ಕೂ ದುಡ್ಡು ಪಡೆಯುತ್ತಾರೆ ಅಂದ್ರೆ ನೀವು ನಂಬಲೇಬೇಕು.
ಬಾಲಿವುಡ್ ನಟ ನಟಿಯರು ಕೆಲವು ಶ್ರೀಮಂತರ ಮಕ್ಕಳ ಮದುವೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ಅಲ್ಲಿ ಫ್ರೀಯಾಗಿ ಹೋಗುವುದೇ ಇಲ್ಲ. ಬದಲಾಗಿ ಅದಕ್ಕೂ ಫೀಸ್ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಅವರು ಎರಡು ರೀತಿಯ ಫೀ ತೆಗೆದುಕೊಳ್ಳುತ್ತಾರೆ. ಒಂದು ಜಸ್ಟ್ ಬಂದು, ಹ್ಯಾಂಡ್ ಶೇಕ್ ಮಾಡಿ, ನಿಮಗೆ ಅವರು ತುಂಬಾನೇ ಪರಿಚಯ ಅನ್ನೋ ರೀತಿ ನಟಿಸಿ, ಅಪ್ಪಿ- ವಿಶ್ ಮಾಡಿ ಹೋಗಲು ಒಂದು ರೀತಿಯ ಫೀಸ್. ಮತ್ತು ಇದೆಲ್ಲ ಮಾಡುವುದಲ್ಲದೇ, ಡಾನ್ಸ್ ಮಾಡಿ, ಎಲ್ಲರನ್ನೂ ರಂಜಿಸಲು ಬೇರೆ ಫೀಸ್.ಮಹೀಗೆ ಎರಡು ರೀತಿಯ ಫೀಸ್ ತೆಗೆದುಕೊಳ್ಳುತ್ತಾರೆ.
ನೀವೇನಾದರೂ ತೆಗೆದುಕೊಂಡರೆ ಎಷ್ಟು ಫೀಸ್ ತೆಗೆದುಕೊಳ್ಳುತ್ತಾರೆ. 2ರಿಂದ 3 ಲಕ್ಷವಿರಬಹುದು ಎಂದರೆ, ನಿಮ್ಮ ಊಹೆ ತಪ್ಪು. ಬರೀ ವಿಶ್ ಮಾಡಿ ಪೋಸ್ ಕೊಡಲು 30 ಲಕ್ಷ ತೆಗೆದುಕೊಂಡರೆ, ಡಾನ್ಸ್ ಮಾಡಿ ರಂಜಿಸಲು 60 ಲಕ್ಷಕ್ಕೂ ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಇದು ಶುರುವಾಗುವ ಫೀಸ್, ಅಂದ್ರೆ ಸ್ಟಾರ್ಟಿಂಗ್ ಫೀಸ್. ಮುಂದುವರೆದು ಕೋಟಿ ದಾಟಬಹುದು. ಭಾರತದ ಶ್ರೀಮಂತರ ಇವೆಂಟ್ ಮ್ಯಾನೇಜರ್ ಆಗಿರುವ ದೇವಾಂಶಿ ಪಟೇಲ್ ಎಂಬಾಕೆ ಸಂದರ್ಶನವೊಂದರಲ್ಲಿ ಈ ಸತ್ಯ ರಿವೀಲ್ ಮಾಡಿದ್ದಾರೆ.
ಅಂಬಾನಿ ಮನೆಯಲ್ಲಿ ಬಾಲಿವುಡ್ ಸ್ಟಾರ್‌ಗಳ ದಂಡು ಬಂದು ಕುಣಿಯಲು ಕೂಡ ಇದೇ ಕಾರಣ. ಸೆಲೆಬ್ರಿಟಿಗಳಿಗೆ ಲಕ್ಷದಿಂದ ಕೋಟಿಯವರೆಗೆ ದುಡ್ಡು ಕೊಟ್ಟು ಅಂಬಾನಿ, ತನ್ನ ಕಿರಿಯ ಪುತ್ರನ ಮನೆಗೆ ಎಲ್ಲ ಬಾಲಿವುಡ್ ಸೆಲೆಬ್ರಿಟಿಗಳನ್ನು ಇನ್ವೈಟ್ ಮಾಡಿದ್ದರು. ಅಲ್ಲದೇ, ಕೋಟಿ ಬೆಲೆ ಬಾಳುವ ವಾಚ್ ಸಹ ಗಿಫ್ಟ್ ಆಗಿ ನೀಡಿದ್ದರು. ಇದರಲ್ಲಿ ಅಂಬಾನಿಯೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಕೆಲವು ಸೆಲೆಬ್ರಿಟಿಗಳು ದುಡ್ಡು ತೆಗೆದುಕೊಳ್ಳದೇ, ಫ್ರೀಯಾಗಿ ಬಂದು ಮದುವೆಯನ್ನು ಎಂಜಾಯ್ ಮಾಡಿದ್ದರು.