Friday, December 6, 2024

Latest Posts

ಬಾಲಿವುಡ್‌ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳುವರಿಗೆ ಎಷ್ಟು ಸಂಬಳ ಕೊಡುತ್ತಾರೆ ಗೊತ್ತಾ..?

- Advertisement -

Bollywood News: ಬಾಲಿವುಡ್‌ ಮಂದಿ ಏನೇ ಮಾಡಿದ್ರು ಸುದ್ದಿಯಾಗತ್ತೆ. ಏಕೆಂದ್ರೆ, ಬಾಲಿವುಡ್ ಮಂದಿ ಕೂತು ಏಳೋದು ಕೂಡ ಪ್ರಸಿದ್ಧಿಗಾಗಿಯೇ. ಹಾಗಾಗಿಯೇ ಅವರು ಏನು ಮಾಡಿದ್ರು ಸುದ್ದಿಯಾಗ್ತಾರೆ. ಅದೇ ರೀತಿ ಬಾಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ದಾದಿಯರನ್ನ ಖಂಡಿತವಾಗಿಯೂ ನೇಮಿಸಿರುತ್ತಾರೆ.

ಅವರ ಮಕ್ಕಳನ್ನು ಬೆಳಿಗ್ಗಿ ಎಬ್ಬಿಸಿ, ಸ್ನಾನ ಮಾಡಿ, ತಿಂಡಿ ತಿನ್ನಿಸಿ, ಶಾಲೆಗೆ ರೆಡಿ ಮಾಡಿ ಕಳುಹಿಸುವುದರಿಂದ ಹಿಡಿದು, ಶಾಲೆಯಿಂದ ಮಕ್ಕಳು ಬಂದ ಬಳಿಕ ಅವರನ್ನು ಫ್ರೆಶಪ್ ಗೊಳಿಸಿ, ಅವರಿಗೆ ತಿಂಡಿ ತಿನ್ನಿಸಿ, ಆಟವಾಡಿಸಿ, ಮಲಗಿಸುವರೆಗೂ ಅವರು ದಾದಿಯರ ಜವಾಬ್ದಾರಿ.

ಅಲ್ಲದೇ, ಸೆಲೆಬ್ರಿಟಿಗಳು ಬೇರೆ ಬೇರೆ ಕಾರ್ಯಕ್ರಮ, ಶೂಟಿಂಗ್, ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋದಾಗ, ಅಲ್ಲಿ ಅವರಿಗೆ ಪ್ರೈವೇಸಿ ಬೇಕಾದಾಗ, ಅಥವಾ ಮಕ್ಕಳನ್ನು ಕೂಡ ಆಯಾ ಜಾಗಕ್ಕೆ ಕರೆದುಕೊಂಡು ಹೋಗುವಾಗ, ಅವರೊಂದಿಗೆ ದಾದಿಯರು ಹೋಗಲೇಬೇಕು. ಜೊತೆಗೆ ಅಲ್ಲಿಯೂ ಮಕ್ಕಳ ಸೇವೆ ಮಾಡಬೇಕು.

ಇಷ್ಟೆಲ್ಲ ಮಾಡುವ ದಾದಿಯರಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಯಾವ ಮಟ್ಟಕ್ಕೆ ಸಂಬಳ ನೀಡುತ್ತಾರೆ ಎಂದರೆ, ಎಂಎನ್‌ಸಿ ಕಂಪನಿಯಲ್ಲಿ ಕೂಡ ಅಷ್ಟು ಸಂಬಳ ಕೊಡುವುದು ಅಪರೂಪವಿರಬಹುದು. ಆ ರೇಂಜಿನ ಸಂಬಳ ನೀಡುತ್ತಾರೆ. ಹಾಗಾದ್ರೆ ಯಾವ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ ಎಷ್ಟು ಸಂಬಳ ಕೊಡುತ್ತಾರೆ ಅಂತಾ ತಿಳಿಯೋಣ ಬನ್ನಿ.

ನಟ ಶಾಹಿದ್ ಕಪೂರ್ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ ತಿಂಗಳಿಗೆ 80 ಸಾವಿರ ಸಂಬಳ ನೀಡುತ್ತಾರೆ.

ನಟ ಶಾರುಖ್ ಖಾನ್ ತಮ್ಮ ಕಿರಿಯ ಪುತ್ರನನ್ನು ಆರೈಕೆ ಮಾಡುವ ದಾದಿಗೆ ತಿಂಗಳಿಗೆ 2ರಿಂದ 5 ಲಕ್ಷ ರೂಪಾಯಿ ನೀಡುತ್ತಾರೆ.

ನಿರ್ದೇಶಕ ಕರಣ್ ಜೋಹರ್ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ 6-8 ಲಕ್ಷ ರೂಪಾಯಿ ತಿಂಗಳ ಸಂಬಳ ನೀಡುತ್ತಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ ತಿಂಗಳಿಗೆ 1.5-3 ಲಕ್ಷ ರೂಪಾಯಿ ನೀಡುತ್ತಾರೆ.

ಸನ್ನಿ ಲಿಯೋನ್ ತನ್ನ ಮೂವರು ಮಕ್ಕಳನ್ನು ನೋಡಿಕೊಳ್ಳುವ ದಾದಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ನೀಡುತ್ತಾರೆ.

ನಟ ಆಮೀರ್ ಖಾನ್ ತನ್ನ ಕಿರಿಯ ಮಗನನ್ನು ನೋಡಿಕೊಳ್ಳುವ ದಾದಿಗೆ ವರ್ಷಕ್ಕೆ 2.5 ಕೋಟಿ ರೂಪಾಯಿ

ನೇಹಾ ಧೂಪಿಯಾ ತಮ್ಮ ಮಗನನ್ನು ನೋಡಿಕೊಳ್ಳುವ ದಾದಿಗೆ ತಿಂಗಳಿಗೆ 60 ಸಾವಿರ ಸಂಬಳ ನೀಡುತ್ತಾರೆ.

- Advertisement -

Latest Posts

Don't Miss