Tuesday, December 10, 2024

Latest Posts

ಚನ್ನಪಟ್ಟಣ ಯಾರಿಗೆ ಓಪನ್, ಯಾರಿಗೆ ಕ್ಲೋಸ್? – ಒಬ್ಬರ ರಾಜಕೀಯ ಅಂತ್ಯ ಫಿಕ್ಸ್​!

- Advertisement -

ಚನ್ನಪಟ್ಟಣ ಅಖಾಡ.. ಈ ಬಾರಿಯ ವಿಧಾನಸಭೆಗೆ ನಡೆದ ಉಪಾಚುನಾವಣೆಯಲ್ಲಿ ಈ ಚನ್ನಪಟ್ಟಣ ಹೈವೋಲ್ಟೇಜ್​ನಿಂದ ಕೂಡಿದ್ದ ಕ್ಷೇತ್ರ.. ಒಂದ್ಕಡೆ ಮೊದಲ ಬಾರಿ ಗೆಲುವಿನ ರುಚಿ ನೋಡೋಕೆ ಹಪಹಪಿಸ್ತಿರೋ ಜೆಡಿಎಸ್​ ಯುವರಾಜ ನಿಖಿಲ್ ಕುಮಾರಸ್ವಾಮಿ, ಇನ್ನೊಂದ್ಕಡೆ ತನ್ನ ಸ್ವಕ್ಷೇತ್ರದಲ್ಲಿ ಈ ಬಾರಿಯಾದ್ರೂ ಗೆದ್ದು ಮರ್ಯಾದೆ ಉಳಿಸ್ಕೊಳ್ಳಬೇಕು ಅಂತ ಹವಣಿಸ್ತಿರೋ ಸೈನಿಕ ಸಿಪಿ ಯೋಗೇಶ್ವರ್. ಇವರಿಬ್ಬರ ನಡುವಿನ ಸಮಬಲದ ಫೈಟ್​​​​​ ಮುಕ್ತಾಯವಾಗಿದೆ. ಆದ್ರೆ ಬಿಗ್​ ಬಾಸ್ ಮತದಾರ ಯಾರ ಕೈ ಮೇಲೆತ್ತುತ್ತಾನೆ ಅನ್ನೋ ಕುತೂಹಲ ಕಾಡ್ತಿದೆ.

ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್​​ ಇಬ್ಬರಿಗೂ ಈ ಉಪಚುನಾವಣೆ ಮುಂದಿನ ರಾಜಕೀಯದ ಅಳಿವು ಉಳಿವಿನ ಪ್ರಶ್ನೆಯಾಗಿತ್ತು.. ತಂದೆಯಿಂದ ತೆರವಾಗಿದ್ದ ಕ್ಷೇತ್ರವನ್ನ ಉಳಿಸಿಕೊಳ್ಳಲೇಬೇಕಂತ ನಿಖಿಲ್​ ಹೋರಾಟ ನಡೆಸಿದ್ರು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು, ಕಳೆದಬಾರಿ ರಾಮನಗರ ವಿಧಾನಸಭಾ ಚುನಾವಣೆಯಲ್ಲೂ ನಿಖಿಲ್ ಸೋಲು ಕಂಡಿದ್ರು.. 3ನೇ ಬಾರಿ ತಂದೆಯ ಕ್ಷೇತ್ರದಿಂದ ನಿಖಿಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.. ಈ ಕದನದಲ್ಲಿ ಯಾರು ಸೋತ್ರೆ ಏನಾಗುತ್ತೆ? ಯಾರು ಗೆದ್ರೆ ಅವ್ರಿಗೆ ಸಿಗೋ ಅವಕಾಶಗಳೇನು ಅನ್ನೋದನ್ನ ನೋಡೋಣ

– ನಿಖಿಲ್ ಕುಮಾರಸ್ವಾಮಿ ಗೆದ್ದರೆ ಏನು ಲಾಭ?
ಒಂದುವೇಳೆ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದಿದ್ದೇ ಆದ್ರೆ, ತಂದೆ ಹೆಚ್​ಡಿ ಕುಮಾರಸ್ವಾಮಿಯವರ ಕ್ಷೇತ್ರ ಜೆಡಿಎಸ್​ಗೆ ಉಳಿದಂತೆ ಆಗುತ್ತೆ. ಇನ್ನೊಂದ್ಕಡೆ ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ಶಕ್ತಿಸೌಧಕ್ಕೆ ಎಂಟ್ರಿ ಕೊಟ್ಟಂತಾಗುತ್ತೆ.. ದೇವೇಗೌಡರ ಕುಟುಂಬದಲ್ಲಿ ಈವರೆಗೂ ಹೆಚ್​ಡಿಡಿ ಸೇರಿ, ಕುಮಾರಸ್ವಾಮಿ, ರೇವಣ್ಣ ಶಾಸಕರಾಗಿದ್ರು.. ಸೂರಜ್ ರೇವಣ್ಣ ಎಂಎಲ್​ಸಿ ಆಗಿದ್ದಾರೆ.. ಪ್ರಜ್ವಲ್ ರೇವಣ್ಣ ಸಂಸದರಾಗಿದ್ರು.. ಈಗ ನಿಖಿಲ್ ಕುಮಾರಸ್ವಾಮಿ ಶಾಸಕನಾಗಿ ವಿಧಾನಸೌಧಕ್ಕೆ ಎಂಟ್ರಿ ಕೊಡಬಹುದು.. ಇದಾದ್ಮೇಲೆ ರಾಜ್ಯ ಜೆಡಿಎಸ್​​ನಲ್ಲೇ ಮಹತ್ವದ ಬದಲಾವಣೆಗಳು ನಡೆಯುತ್ತೆ.. ಇಲ್ಲಿ ಕೇಂದ್ರಕ್ಕೆ ಕುಮಾರಸ್ವಾಮಿ, ರಾಜ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಅನ್ನೋ ಲೆಕ್ಕಾಚಾರ ಶುರುವಾಗುತ್ತೆ.. ಹೆಚ್​ಡಿಕೆ ರಾಷ್ಟ್ರೀಯ ಅಧ್ಯಕ್ಷರಾದ್ರೆ, ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗಲಿದೆ.. ಜೆಡಿಎಸ್​ಗೂ ಯುವನಾಯಕತ್ವ ಸಿಗುತ್ತೆ.. ಇದಿಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಿಖಿಲ್​ ಮಿನಿಸ್ಟರ್ ಆಗೋಕೂ ಇದೇ ಹೆದ್ದಾರಿ ಓಪನ್ ಆಗಲಿದೆ.. ಇನ್ನೊಂದ್ಕಡೆ ಚನ್ನಪಟ್ಟಣ ಸಿಪಿ ಯೋಗೇಶ್ವರ್​ಗೆ ಸ್ವಕ್ಷೇತ್ರ.. ಅವರ ತವರು ನೆಲದಲ್ಲೇ ಸೈನಿಕನ ಸೋಲಿಸಿದ್ರೆ, ದೈತ್ಯ ಸಂಹಾರಿ ಅನ್ನೋ ಹೆಗ್ಗಳಿಗೆ ನಿಖಿಲ್​ ಅವರದ್ದಾಗಲಿದೆ. ಅತ್ತ ಕುಮಾರಸ್ವಾಮಿಯವರಿಗೂ ಮಗನ ಗೆಲ್ಲಿಸಿಕೊಂಡು, ಕೇಂದ್ರಮಟ್ಟದಲ್ಲಿ ವರ್ಚಸ್ಸು ವೃದ್ಧಿಯಾಗಿಸಿಕೊಳ್ಳಬಹುದು.. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್​​ ಸಂಘಟನೆಗೂ ಪ್ಲಸ್ ಆಗುತ್ತೆ.. ಎನ್​ಡಿಎ ಮೈತ್ರಿ ಕೂಟಕ್ಕೂ ಶಕ್ತಿ ಬರುತ್ತೆ… ದೇವೇಗೌಡರ ಕುಟುಂಬವನ್ನ ಯಾರೇ ಎದುರುಹಾಕಿಕೊಂಡ್ರೂ, ಅವ್ರಿಗೆ ಉಳಿಗಾಲವಿಲ್ಲ ಅನ್ನೋ ಸಂದೇಶ ರವಾನೆಯಾಗುತ್ತೆ.

– ನಿಖಿಲ್ ಸೋತರೆ ಏನಾಗುತ್ತೆ?
ಒಂದ್ವೇಳೆ ಈ ಉಪಚುನಾವಣೆಯಲ್ಲಿ ನಿಖಿಲ್ ಸೋತರೆ, ಸತತ 3ನೇ ಬಾರಿಗೆ ಅಪಜಯದ ಮುಖಭಂಗ ಎದುರಾಗುತ್ತೆ.. ಅಲ್ದೇ ಮುಂದಿನ ರಾಜಕೀಯ ಹಾದಿ ಕೂಡ ಕಷ್ಟ ಆಗ್ಬೋದು.. ಸೋತ್ರೆ ರಾಜ್ಯಾಧ್ಯಕ್ಷ ಪಟ್ಟವೂ ಕೈತಪ್ಪುತ್ತೆ.. ಯಾಕಂದ್ರೆ, ಸೋತವ್ರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ರೆ, ಉಳಿದ ಜೆಡಿಎಸ್ ಶಾಸಕರು, ನಾಯಕರು, ಕಾರ್ಯಕರ್ತರು ಅಸಮಾಧಾನಗೊಳ್ತಾರೆ.. ಮಗನ ಸೋಲು, ಕೇಂದ್ರ ಮಟ್ಟದಲ್ಲಿ ಹೆಚ್​ಡಿಕೆಗೂ ಮುಜುಗರ ತರುತ್ತೆ.. ಇನ್ನು ನಿಖಿಲ್​​​ ಇಷ್ಟೆಲ್ಲಾ ಸರ್ಕಸ್ ಮಾಡಿದ್ರೂ, ವಿಧಾನಸೌಧ ಪ್ರವೇಶಿಸೋ ಕನಸ್ಸು ಇನ್ನೂ ಮರೀಚಿಕೆಯಾಗೇ ಉಳಿಯುತ್ತೆ.

– ಸಿಪಿ ಯೋಗೇಶ್ವರ್​​ ಗೆದ್ದರೇನು ಲಾಭ?
ಒಂದ್ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆದ್ದರೆ ಏನಾಗಬಹುದು.. ಸಾಮಾನ್ಯವಾಗಿ ಆಡಳಿತದಲ್ಲಿರೋ ಪಕ್ಷವೇ ಉಪಚುನಾವಣೆಯಲ್ಲೂ ಸಾಮಾನ್ಯವಾಗಿ ಗೆಲ್ಲುತ್ತೆ.. ಇಲ್ಲಿ ಸಿಪಿ ಯೋಗೇಶ್ವರ್ ಕೂಡ ಸರ್ಕಾರದ ನೆರಳಲ್ಲಿ ಗೆಲ್ತಾರೆ ಅಷ್ಟೆ… ಇನ್ನೊಂದ್ಕಡೆ ಸಿಪಿವೈ ವೈಯಕ್ತಿಕ ವರ್ಚಸ್ಸು ಸಾಮಾನ್ಯವಾಗಿ ವೃದ್ಧಿ ಆಗುತ್ತೆ. ಯಾಕಂದ್ರೆ, ಯಾವ ಪಕ್ಷ ಸೇರಿದ್ರೂ ಜನ ತನ್ನನ್ನ ನೋಡಿ ಮತ ಹಾಕ್ತಾರೆ ಅನ್ನೋದು ಸಾಬೀತಾಗುತ್ತೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗಿಂತಲೂ ಸಿಪಿವೈ ಸ್ಟ್ರಾಂಗ್ ಆಗ್ತಾರೆ. ಇದರಿಂದ ಡಿಕೆ ಬ್ರದರ್ಸ್​​ಗೂ ರಾಜಕೀಯವಾಗಿ ಲಾಭ ಆಗುತ್ತೆ.. ಇಷ್ಟೆಲ್ಲಾ ಆದ್ರೂ, ಸಿಪಿವೈ ಗೆದ್ರೆ ಅವ್ರಿಗೆ ವೈಯಕ್ತಿಕವಾಗಿ ಅಂತ ಲಾಭೆ ಏನೂ ಆಗಲ್ಲ.. ಯಾಕಂದ್ರೆ ಅವ್ರಿಗೆ ಸಚಿವ ಸ್ಥಾನ ಸಿಗೋದು ಕೂಡ ಡೌಟ್.. ಕೇವಲ ಎಂಎಲ್​​ಎ ಕಾರ್​​ನಲ್ಲಿ ಸುತ್ತಾಡಬಹುದು ಅಷ್ಟೇ.

– ಸೋತರೆ ಸೈನಿಕನ ರಾಜಕೀಯ ಅಂತ್ಯ?
ಅದೇ ಸಿಪಿ ಯೋಗೇಶ್ವರ್ ಸೋತುಬಿಟ್ರೆ, ಅದಕ್ಕಿಂತಾ ದೊಡ್ಡ ಮುಖಭಂಗ ಇನ್ನೊಂದಿಲ್ಲ.. ಹೊರಗಿನವರಿಂದ ಬಂದವರ ಎದುರು ಸೋತಂತಾ ಅವಮಾನ.. ನಿಖಿಲ್​ ಅವ್ರಂತಾ ಅಷ್ಟೇನೂ ರಾಜಕೀಯ ಅನುಭವ ಇಲ್ಲದ ಹುಡುಗನ ಮುಂದೆ, ಹಿರಿಯ ವಯಸ್ಸಿನ ಅನುಭವಿ ಸೋತ ಅವಮಾನ ಎದುರಿಸ್ಬೇಕು.. ಅಷ್ಟೇ ಅಲ್ಲ, ಚನ್ನಪಟ್ಟಣದ ಜನರೇ ಸಿಪಿ ಯೋಗೇಶ್ವರ್​​ರನ್ನೂ ಮರೆತುಬಿಡೋ ಸಾಧ್ಯತೆ ಇದೆ.. ಇತ್ತ ಬಿಜೆಪಿಯಲ್ಲೂ ಇಲ್ಲ, ಅತ್ತ ಕಾಂಗ್ರೆಸ್​​ನಲ್ಲೂ ಸಲ್ಲ ಅನ್ನೋ ಅಪವಾದ ಎದುರಿಸ್ಬೇಕು.. ಇಷ್ಟೇ ಅಲ್ಲ, ಡಿಕೆ ಬ್ರದರ್ಸ್​​ಗೂ ಈ ಸೋಲು ಭಾರಿ ಪೆಟ್ಟು ಕೊಡುತ್ತೆ.. ಹೆಚ್​ಡಿಕೆ ಮುಂದೆ ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಆಟ ನಡೆಯಲ್ಲ ಅನ್ನೋದು ಸಾಬೀತಾಗುತ್ತೆ.. ಜೊತೆಗೆ ಈ ಬೈ ಎಲೆಕ್ಷನ್ ಗೆದ್ದು, ಸಿಎಂ ಕುರ್ಚಿ ಮೇಲೆ ಕಣ್ಣು ಹಾಕೋಣ ಅಂತ ಡಿಕೆಶಿ ಅಂದುಕೊಂಡಿದ್ರು.. ಅದು ಕೂಡ ಉಲ್ಟಾ ಆಗುತ್ತೆ.. ಅಬ್ಬಬ್ಬಾ ಅಂದ್ರೆ ಎಲೆಕ್ಷನ್ ಸೋತ ಸಿಪಿ ಯೋಗೇಶ್ವರ್​​ರನ್ನ ಮತ್ತೆ ಕಾಂಗ್ರೆಸ್​​ನಿಂದ ಎಂಎಲ್​​ಸಿ ಮಾಡಬಹುದು, ಇಲ್ಲದಿದ್ರೆ, ಅದೂ ಇಲ್ಲ.. ಎರಡು ಕಣ ಕಾದು ದಾಸಯ್ಯ ಕೆಟ್ಟ ಅನ್ನುವಂತಾಗುತ್ತೆ ಯೋಗೇಶ್ವರ್ ಮುಂದಿನ ಪಾಡು

ಸದ್ಯ ಈ ಬೈ ಎಲೆಕ್ಷನ್​​ ಏನಾಗುತ್ತೆ ಅನ್ನೋದನ್ನ ಮತದಾರ ಈಗಾಗ್ಲೇ ನಿರ್ಧರಿಸಿದ್ದಾನೆ.. ನವೆಂಬರ್ 23ಕ್ಕೆ ಮತದಾರ ಬರೆದ ಭವಿಷ್ಯ ಏನಾಗುತ್ತೆ ಅನ್ನೋದು ಗೊತ್ತಾಗುತ್ತೆ.. ಚನ್ನಪಟ್ಟಣದಲ್ಲಿ ನಡೆದ ದೈತ್ಯರ ಕಾಳಗಕ್ಕೆ ಅಲ್ಲಿ ಫುಲ್ ಸ್ಟಾಪ್ ಬೀಳುತ್ತೆ.. ಈ ಎಲೆಕ್ಷನ್​​​ನಲ್ಲಿ ನಿಖಿಲ್ ಗೆದ್ದರೆ, ಅವ್ರ ಮುಂದಿನ ರಾಜಕೀಯದ ಹೆದ್ದಾರಿ ಓಪನ್ ಆಗುತ್ತೆ.. ಸೈನಿಕ ಸೋತರೆ ಅವ್ರ ರಾಜಕೀಯದ ಹೆದ್ದಾರಿಯೇ ಬಂದ್ ಆಗುತ್ತೆ.

- Advertisement -

Latest Posts

Don't Miss