ಈ ಆರ್ಥಿಕ ಯುಗದಲ್ಲಿ ಜನರು ಈಗ ಮತ್ತೆ ಚಿನ್ನದತ್ತ ಮುಖ ಮಾಡಿದ್ದಾರೆ. ಇಂದು ನೀವು ₹1 ಲಕ್ಷಕ್ಕೆ 10 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ಖರೀದಿಸಿದರೆ, 2050ರ ವೇಳೆಗೆ ಅದರ ಮೌಲ್ಯ ಎಷ್ಟು ಆಗಬಹುದು ಗೊತ್ತಾ? ಚಿನ್ನದ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಮದುವೆಗಾಲ, ಹಬ್ಬಗಳು, ಅಥವಾ ಹೂಡಿಕೆ—ಪ್ರತಿ ಸಂದರ್ಭದಲ್ಲಿಯೂ ಚಿನ್ನವೇ ಮೊದಲ ಆಯ್ಕೆ.
ಒಂದು ವೇಳೆ ನೀವು ಈಗ ₹1 ಲಕ್ಷ ಮೌಲ್ಯದ ಚಿನ್ನವನ್ನು ಖರೀದಿಸಿದರೆ, ಮುಂದಿನ 25 ವರ್ಷಗಳಲ್ಲಿ ಇದರ ಮೌಲ್ಯ ಎಷ್ಟು ಆಗಬಹುದು ಎಂಬುದು ಬಹುಮಾನವಾಗಿ ಜನರ ಮನಸ್ಸಿನಲ್ಲಿರುವ ಪ್ರಶ್ನೆಯಾಗಿದೆ. ಆಗ, ಒಂದು ಕೆಜಿ ಚಿನ್ನ ಖರೀದಿಸಿದವರು ಇಂದು ಕೋಟ್ಯಾಧಿಪತಿ ರೇಂಜ್’ನಲ್ಲಿದ್ದಾರೆ.
2000ನೇ ಇಸವಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ ₹4,400 ಇತ್ತು.
ಇಂದು ಅದು ₹1,24,000ಕ್ಕೆ ಏರಿಕೆಯಾಗಿದೆ. ಅಂದರೆ, 25 ವರ್ಷಗಳಲ್ಲಿ ಚಿನ್ನದ ಬೆಲೆ ಸುಮಾರು 25 ಪಟ್ಟು ಏರಿದೆ. ಇದನ್ನೇ ಆಧಾರಮಾಡಿಕೊಂಡು ಮುಂದಿನ 25 ವರ್ಷಗಳಿಗಾಗಿಯೂ ಅಂದಾಜು ಮಾಡಬಹುದು.
ಸರಾಸರಿ ಬೆಳವಣಿಗೆ ದರ 10% ಆಗಿದ್ದರೆ, ನಿಮ್ಮ ₹1 ಲಕ್ಷ ಮೌಲ್ಯದ ಚಿನ್ನವು 2050ರ ವೇಳೆಗೆ ₹11 ಲಕ್ಷದಿಂದ ₹12 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಳವಣಿಗೆ ದರ ಶೇ.8 ಆಗಿದ್ದರೆ, ಅದರ ಮೌಲ್ಯ ಸುಮಾರು 7 ಲಕ್ಷ ಹೆಚ್ಚಾಗಬಹುದು. ಬೆಳವಣಿಗೆ ದರ ಶೇ.12ಕ್ಕೆ ಹೆಚ್ಚಾದರೆ, ನಿಮ್ಮ ಹೂಡಿಕೆ ₹15 ಲಕ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಇದು ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆಗಳು ಮತ್ತು ವ್ಯವಹಾರಗಳಿಗಿಂತ ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಮಾರ್ಗ ಎಂದು ಜನರು ಭಾವಿಸುವಂತೆ ಮಾಡುತ್ತದೆ.
ಪ್ರಪಂಚದಾದ್ಯಂತ ನಡೆಯುತ್ತಿರುವ ಆರ್ಥಿಕ ಅನಿಶ್ಚಿತತೆ ವಿಶೇಷವಾಗಿ ಅಮೆರಿಕ ಮತ್ತು ಯುರೋಪ್ ನಂತಹ ದೊಡ್ಡ ದೇಶಗಳ ಆರ್ಥಿಕತೆಯ ದುರ್ಬಲತೆ, ಹಣದುಬ್ಬರ ಮತ್ತು ಡಾಲರ್ ನ ಮೌಲ್ಯವರ್ಧನೆ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಹೂಡಿಕೆಯ ಆಯ್ಕೆಗಳ ನಡುವೆ ಚಿನ್ನ ಇನ್ನೂ ದೀರ್ಘಕಾಲಿಕವಾಗಿ ವಿಶ್ವಾಸಾರ್ಹವಾದ ಮಾಧ್ಯಮವಾಗಿದೆ. ಹೆಚ್ಚು ಲಾಭದಾಸಕ್ತಿಯಿಲ್ಲದವರು, ಸುರಕ್ಷಿತ ಹೂಡಿಕೆಯನ್ನು ಬಯಸುವವರು ಚಿನ್ನವನ್ನು ಆಯ್ಕೆ ಮಾಡುತ್ತಿದ್ದಾರೆ. 2050ರಲ್ಲಿ ನೀವು ಚಿನ್ನದಿಂದ ಕೋಟ್ಯಾಧಿಪತಿ ಆಗಬಲ್ಲಿರಾ? ಈ ಪ್ರಶ್ನೆಗೆ ಉತ್ತರ ನಿಮ್ಮ ಹೂಡಿಕೆ ನಿರ್ಧಾರದಲ್ಲಿದೆ.
ವರದಿ : ಲಾವಣ್ಯ ಅನಿಗೋಳ

