Sunday, November 16, 2025

Latest Posts

ಬಿಹಾರದಲ್ಲಿ 100 ವರ್ಷ ಮೇಲ್ಪಟ್ಟ 14,000 ಮತದಾರರು!

- Advertisement -

ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಬಿಹಾರದಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 14,000 ಮತದಾರರಿದ್ದಾರೆ. ಎಂದು ಚುನಾವಣಾ ಆಯೋಗ ತಿಳಿಸಿದೆ. ಆಯೋಗ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಹಿರಿಯ ನಾಗರಿಕರ ಸಂಖ್ಯೆಯಲ್ಲಿ ಸ್ಪಷ್ಟ ಕುಸಿತ ಕಂಡುಬಂದಿದೆ.

ಜನವರಿ 1ರ ವೇಳೆಗೆ 85 ವರ್ಷಕ್ಕಿಂತ ಮೇಲ್ಪಟ್ಟ 16,07,527 ಮತದಾರರು ಇದ್ದರೆ, ಇದೀಗ ಈ ಸಂಖ್ಯೆ 4,03,985 ಕ್ಕೆ ಇಳಿದಿದೆ. ಇದು ವಿವಿಧ ಕಾರಣಗಳ ಪೈಕಿ ಸಾವಿನ ಪ್ರಮಾಣ ಹೆಚ್ಚಾಗಿರಬಹುದು ಎನ್ನಲಾಗಿದೆ. ಆದರೆ ಜಿಲ್ಲಾವಾರು ವಯೋಮಾನದ ವಿವರ ಅಥವಾ ಮರಣದ ವಿವರಗಳನ್ನು ಆಯೋಗ ಬಹಿರಂಗಪಡಿಸಿಲ್ಲ.

ಇದೇ ರೀತಿ, ಮತದಾರರ ಲಿಂಗ ಸಮತೋಲದಲ್ಲೂ ಬದಲಾವಣೆ ಕಂಡುಬಂದಿದೆ. ಮಹಿಳಾ ಮತದಾರರ ಸಂಖ್ಯೆ 3.72 ಕೋಟಿಯಿಂದ 3.49 ಕೋಟಿಗೆ ಕುಸಿತ ಕಂಡಿದೆ. ಪುರುಷ ಮತದಾರರು 4.07 ಕೋಟಿಯಿಂದ 3.92 ಕೋಟಿಗೆ ಕುಸಿತಗೊಂಡಿದ್ದಾರೆ. ತೃತೀಯ ಲಿಂಗ ಮತದಾರರ ಸಂಖ್ಯೆಯೂ 2,104 ರಿಂದ 1,725 ಕ್ಕೆ ಇಳಿದಿದೆ.

2025ರ ನವೆಂಬರ್ 6 ಮತ್ತು 11ರಂದು ನಡೆಯಲಿರುವ ಎರಡು ಹಂತಗಳ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 243 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪರಿಷ್ಕರಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನ, ಬಿಹಾರದಲ್ಲಿ ಒಟ್ಟು 7.89 ಕೋಟಿ ಮತದಾರರು ಇದ್ದರು.

ಪರಿಷ್ಕರಣೆ ವೇಳೆ 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದ್ದು, ಆಗಸ್ಟ್ 1ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ 7.24 ಕೋಟಿ ಮತದಾರರು ಪಟ್ಟಿ ಮಾಡಲ್ಪಟ್ಟಿದ್ದರು. ನಂತರ, 3.66 ಲಕ್ಷ ಅನರ್ಹ ಮತದಾರರನ್ನು ತೆಗೆದುಹಾಕಿ, ಫಾರ್ಮ್ 6 ಮೂಲಕ 21.53 ಲಕ್ಷ ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಯಿತು. ಪರಿಣಾಮವಾಗಿ ಅಂತಿಮ ಮತದಾರರ ಸಂಖ್ಯೆ 7.43 ಕೋಟಿಗೆ ಏರಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss