Valentines day
ಬೆಂಗಳೂರು(ಫೆ.10): ಇಂದು ಟೆಡ್ಡಿ ಡೇ..ಎಸ್ ಈ ವಾರ ವ್ಯಾಲೆಂಟೈನ್ಸ್ ಡೇ ಇರೋದರಿಂದಾಗಿ ಪ್ರತಿ ಪ್ರೇಮಿಗಳಿಗೂ ಈ ವಾರ ಖುಷಿಯ ವಾರವಾಗಿರುತ್ತದೆ. ಹಾಗೆಯೇ ಈ ದಿನ ಟೆಡ್ಡಿ ಡೇ ಅನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಪ್ರೀತಿ ಪಾತ್ರರಾದ ಪ್ರೇಮಿಗೆ ಟೆಡ್ಡಿ ನೀಡುವ ಮೂಲಕ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಈ ದಿನವನ್ನು ವಿಶೇಷವಾಗಿ ಆಚರಿಸಬಹುದು.
ವಾರ ಪೂರ್ತಿ ಪ್ರೇಮಿಗಳಿಗೆ ತಮ್ಮ ಭಾವನೆಗಳನ್ನು ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಇದು ಸೂಕ್ತ ಸಮಯವಾಗಿದೆ. ರೋಸ್ ಡೇ, ಚಾಕೊಲೇಟ್ ಡೇಗಳ ಸಾಲಿನಲ್ಲಿಯೇ ನಂತರ ಬರುವ ವಿಶೇಷ ದಿನವೇ ಟೆಡ್ಡಿ ಡೇ. ಮುದ್ದು ಮೃದು ಆಟಿಕೆ ಪ್ರೀತಿಯ ಮುದ್ದಾದ ಮತ್ತು ಮುಗ್ಧ ಸಂಕೇತಗಳಲ್ಲಿ ಒಂದಾಗಿದೆ. ಟೆಡ್ಡಿ ಬೇರ್ ಪ್ರೀತಿ ಮತ್ತು ಕಾಳಜಿಯ ಪರಿಪೂರ್ಣ ಪ್ರಾತಿನಿಧ್ಯವೆಂದು ಪರಿಗಣಿಸಲಾಗಿದೆ. ಇದನ್ನು ಉಡುಗೊರೆಯಾಗಿ ನೀಡುವುದರಿಂದ ನೀವು ನಿಮ್ಮ ಪ್ರೀತಿಪಾತ್ರರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಮತ್ತು ಸದಾ ಅವರೊಂದಿಗೆ ಇರಲು ಬಯಸುತ್ತೀರಿ ಎಂಬುದನ್ನು ತೋರಿಸುತ್ತದೆ.
ಇನ್ನು ನಿಮ್ಮ ಪ್ರೀತಿ ಪಾತ್ರರಾದವರಿಗೆ ಇಂದು ಮುದ್ದಾದ ಪಾಂಡವನ್ನು ನೀಡುವುದರಿಂದ ನಿಮ್ಮ ಪ್ರೀತಿಯ ಮನ ಗೆಲ್ಲಲು ಬೆಸ್ಟ್ ಆಪ್ಶನ್. ಪಾಂಡಾ ಆಕಾರದಲ್ಲಿರುವ ಈ ಟೆಡ್ಡಿ ಯಾವಾಗಲೂ ನಿಮ್ಮ ಸಂಗಾತಿಗೆ ನಿಮ್ಮನ್ನು ನೆನಪಿಸುತ್ತದೆ. ಈ ದಿನ ನೀವು ನಿಮ್ಮ ಸಂಗಾತಿ ಅಥವಾ ಪ್ರೀತಿ ಪಾತ್ರರಿಗೆ ಮುದ್ದಾಗ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವುದರ ಮೂಲಕ ಅವರ ಮುಖದಲ್ಲೊಂದು ನಗು ಮೂಡಿಸುವುದಾಗಿದೆ. ಇದರೊಂದಿಗೆ ನೀವು ನೀಡುವ ಟೆಡ್ಡಿಯ ಬಣ್ಣಗಳು ಕೂಡ ಒಂದೊಂದು ಅರ್ಥವನ್ನು ನೀಡುತ್ತದೆ.
ನಿಮ್ಮ ಸಂಗಾತಿಯಿಂದ ಕಪ್ಪು ಬಣ್ಣದ ಟೆಡ್ಡಿ ಬೇರ್ ಪಡೆದರೆ ಅವರು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಹೆಚ್ಚಿನ ಹುಡುಗಿಯರು ಟೆಡ್ಡಿಯನ್ನು ಇಷ್ಟ ಪಡುವುದರಿಂದ ನಿಮ್ಮ ಪ್ರೇಮಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡಿ. ಇದಲ್ಲದೇ ನೀವು ಅವರೊಂದಿಗೆ ಸದಾ ಜೊತೆಯಾಗಿ ಇದ್ದೀರಿ ಎಂಬ ಭಾವನೆಯನ್ನು ಅದು ನೀಡುತ್ತದೆ. ಹೀಗೆ ನಿಮ್ಮ ಪ್ರೀತಿಯನ್ನು ಟೆಡ್ಡಿ ನೀಡುವ ಮೂಲಕ ಪ್ರೀತಿಯನ್ನು ಹಚ್ಚಿಸಿಕೊಳ್ಳಬಹುದು.