Wednesday, May 15, 2024

Latest Posts

ವ್ಯಾಲೆಂಟೈನ್ಸ್ ಡೇ ಹಿನ್ನಲೆ ಇಷ್ಟೊಂದು ಡಿಸ್ಕೌಂಟ್ ನಲ್ಲಿ ಸ್ಮಾರ್ಟ್ ಫೋನ್ ಗಳಾ….?

- Advertisement -

ಬೆಂಗಳೂರು(ಫೆ.10): ಇನ್ನೇನು ಫೆ.14 ರಂದು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ಜನ ಆಕರ್ಷಕ ಗಿಫ್ಟ್ ಗಳನ್ನು ಖರೀದಿಸಿ, ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಗಳನ್ನು ನೀಡಲು ರೆಡಿಯಾಗಿರ್ತಾರೆ, ಇಂತವರಿಗೆ ಇದೀಗ ಒಂದೊಳ್ಳೆಯ ಪ್ಲಾನ್ ಇದಾಗಿದೆ, ಹೌದು, ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸ್ತಾ ಇದ್ರೆ, ನಿಮಗೆ ಸ್ಮಾರ್ಟ್ ಫೋನ್ ಗಳ ಭರ್ಜರಿ ಸೇಲ್ ಇದೆ.

ನೀವು ನಿಮ್ಮ ಸಂಗಾತಿಯನ್ನು ಖುಷಿಯಾಗಿರಿಸಲು, ಸರ್ಪ್ರೈಸ್ ಕೊಡಬೇಕು ಅಂತ ಅಂದುಕೊಂಡಿದ್ದರೆ, ನಿಮಗೆ ಒಳ್ಳೆಯ ಆಫರ್ ಇದೆ. ಫ್ಲಿಪ್ ಕಾರ್ಡ್ ನಲ್ಲಿ ವಿಶೇಷ ಮೇಳ ಆಯೋಜಿಸಲಾಗಿದೆ. ಈ ಭರ್ಜರಿ ಡಿಸ್ಕೌಂಟ್ ಸೇಲ್ ಫೆ. 12 ರ ವರೆಗೆ ನಡೆಯಲಿದ್ದು, ಈಗಾಗಲೇ ಸಾಕಷ್ಟು ಜನ ಖರೀದಿಯಲ್ಲಿ ತೊಡಗಿದ್ದಾರೆ.ಈ ಸೇಲ್​ನಲ್ಲಿ ಸ್ಮಾರ್ಟ್ ಫೋನ್ ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ.

ಒನ್​ಪ್ಲಸ್, ಶವೋಮಿ, ರಿಯಲ್ ಮಿ, ಸ್ಯಾಮ್​ಸಂಗ್ ಕಂಪನಿಯ ಫೋನುಗಳು ಮಾತ್ರವಲ್ಲದೆ ದುಬಾರಿ ಬೆಲೆಯ ಐಫೋನ್​ಗಳನ್ನು ಕೂಡ ಕಡಿಮೆ ದರಕ್ಕೆ ಖರೀದಿಸಬಹುದು.  ಆ್ಯಪಲ್ ಐಫೋನ್ 14, ಮೋಟೋರೊಲಾ G52, ಐಫೋನ್ 13, ರಿಯಲ್ ಮಿ GT ನಿಯೋ 3T,ಗ್ಯಾಲಕ್ಸಿ A23 ಸ್ಮಾರ್ಟ್ ಫೋನ್ ಗಳು ಅತ್ಯಂತ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

- Advertisement -

Latest Posts

Don't Miss