ಬೆಂಗಳೂರು(ಫೆ.11): ಇಂದಿನ ಇಂಟರ್ ನೆಟ್ ಜಗತ್ತಿನಲ್ಲಿ ಸ್ಮಾರ್ಟ್ ಯೋಚನೆಗಳ ಜೊತೆ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ, ಹೊಸಹೊಸ ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳು ಕಡಿಮೆ ದರಗಳಲ್ಲಿ ಗ್ರಾಹಕರ ಕೈ ತಲುಪುತ್ತಿವೆ. ಇದೀಗ ಕೋಕಾ ಕೋಲಾ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ.
ಜನಪ್ರಿಯ ತಂಪು ಪಾನಿಯ ಬ್ರ್ಯಾಂಡ್ ಕೋಕಾ-ಕೋಲಾ ಮತ್ತು ರಿಯಲ್ಮಿ ಮೊಬೈಲ್ ಕಂಪೆನಿ ಸಹಯೋಗದೊಂದಿಗೆ ದೇಶದಲ್ಲಿಂದು ಫೆ.10 ರಂದು Coca-Cola ಸೀಮಿತ ಆವೃತ್ತಿಯ Realme 10 Pro ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ.ರಿಯಲ್ಮಿ ಕಂಪೆನಿ ಈ ಮಾದರಿಯಲ್ಲಿ ಕೇವಲ 1000 ಯೂನಿಟ್ ಸ್ಮಾರ್ಟ್ಫೋನ್ಗಳನ್ನು ತಯಾರಿಸುವುದಾಗಿ ಘೋಷಿಸಿದ್ದು, ಇದು ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ಕೋಕಾ-ಕೋಲಾದ ಕ್ಲಾಸಿಕ್ ಅಂಶಗಳಿಂದ ಪ್ರೇರಿತವಾದ ಕೋಕಾ-ಕೋಲಾ ಲೋಗೋ ಮತ್ತು ಕೆಲ ವಿಶೇಷ ಸಾಫ್ಟ್ವೇರ್ ನವೀಕರಣಗಳನ್ನು ಹೊತ್ತು ಗ್ರಾಹಕರ ಕೈ ಸೇರಲು ರೆಡಿಯಾಗಿದೆ.
ಕೋಕಾ ಕೋಲಾ ಸ್ಮಾರ್ಟ್ ಫೋನ್ ಬೆಲೆ ಎಷ್ಟು..?
Realme 10 Pro 5G ಸ್ಮಾರ್ಟ್ಫೋನ್ 6.72-ಇಂಚಿನ ಫುಲ್ HD+ (1,080x 2,400 ಪಿಕ್ಸೆಲ್ಗಳು) LCD ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್, 391ppi ಪಿಕ್ಸೆಲ್ ಸಾಂದ್ರತೆ ಮತ್ತು 93.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. Coca-Cola ಸೀಮಿತ ಆವೃತ್ತಿಯ Realme 10 Pro ಸ್ಮಾರ್ಟ್ಫೋನ್ ದೇಶದಲ್ಲಿ 8GB RAM + 128GB ಸ್ಟೋರೇಜ್ ಮಾದರಿಯಲ್ಲಿ 20,999 ರೂ.ಬೆಲೆಗೆ ಬಿಡುಗಡೆಯಾಗಿದೆ.