ಗುರುಪ್ರಸಾದ್ ಏನಂದ್ರು ಗೊತ್ತಾ? ಮಾಸ್ತಿ ಬಿಚ್ಚಿಟ್ಟ ಸತ್ಯ!: Dialogue Writer Masthi Podcast

Sandalwood News: ಸ್ಯಾಂಡಲ್‌ವುಡ್‌ನ ಡೈಲಾಗ್ ರೈಟರ್ ಮಾಸ್ತಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಕೋಲಾರ ಜಿಲ್ಲೆಯ ಉಪ್ಪರಹಳ್ಳಿಯಲ್ಲಿ ಮಾಸ್ತಿ ಅವರು ಜನಿಸಿದ್ದು. ಮಾಸ್ತಿ ಕೂಡ ಅಲ್ಲೇ ಹತ್ತಿರದ ಸ್ಥಳವಾದ್ದರಿಂದ ಇವರ ಅಡ್ಡನಾಮ ಮಾಸ್ತಿ ಎಂದಾಗಿದೆ. ಇದರ ವಿಶೇಷತೆ ಅಂದ್ರೆ, ಇವರ ಜನ್ಮ ಸ್ಥಳ ಕರ್ನಾಟಕದ ಗಡಿನಾಡು. ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯದ ಸಂಪರ್ಕವಿರುವ ಸ್ಥಳ.

ಆದರೆ ಮಾಸ್ತಿ ಅವರ ತಂದೆ ಪೋಲೀಸ್ ಇಲಾಖೆಯಲ್ಲಿರುವ ಕಾರಣ, ಬೇರೆ ಬೇರೆ ಊರುಗಳಿಗೆ ಹೋಗಬೇಕಾಯಿತು. ಚಿಂತಾಮಣಿ, ಗೌರಿಬಿದನೂರು ಹೀಗೆ ಬೇರೆ ಬೇರೆ ಊರುಗಳಿಗೆ ಹೋಗಿ, ನೆಲೆನಿಂತು, ಬಳಿಕ ಬೆಂಗಳೂರಿನ ವಿವೇಕಾನಂದ ಕಾಲೇಜಿಗೆ ಬಂದರು. ಬಳಿಕ ಸಿನಿಮಾ ಕಥೆ ಬರೆಯುವ ಹುಚ್ಚು ಹಿಡಿಯಿತು.

ಮಾಸ್ತಿ ಸ್ಯಾಂಡಲ್‌ವುಡ್‌ಗೆ ಬಂದಾಗ, ಅವರಿಗೆ ಬೆಂಬಲಿಸಿದವರು ತುಷಾರ್ ರಂಗನಾಥ್ ಮತ್ತು ಗುರುಪ್ರಸಾದ್ ಅವರು. ಅವರಿಬ್ಬರೂ ಈಗ ಇಲ್ಲ. ಅದರಲ್ಲೂ ಗುರುಪ್ರಸಾದ್ ಅವರ ಸಾವಿನ ಬಗ್ಗೆ ಮಾಸ್ತಿ ಅವರು ಹೆಚ್ಚು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಸಿನಿಮಾ ರಂಗದಲ್ಲಿ ಎಷ್ಟು ಪ್ರಸಿದ್ಧರಾದವರು. ಆದರೆ 1 ಸೋಲು ಅವರನ್ನು ಇನ್ನಿಲ್ಲವಾಗಿಸಿತು ಅಂತಾ ಮಾಸ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

 

 

About The Author