state news
ಬೆಂಗಳೂರು(ಫೆ.18): ಬಹುನಿರೀಕ್ಷಿತ ರಾಜ್ಯ ವಿಧಾನಸಭೆ ಚುನಾವಣೆಯ ಜನಸ್ನೇಹಿ ಬಜೆಟ್ ಮಂಡನೆಯಾಗಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ವರ್ಷದ ಬಜೆಟ್ ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರ ಹಿಡಿಯಲೇಬೇಕು ಎಂಬ ಹಠ ತೊಟ್ಟಿರುವ ಬಸವರಾಜ್ ಬೊಮ್ಮಾಯಿ ಮಂಡಿಸಿರುವ ಎರಡನೇ ಬಜೆಟ್ ನಲ್ಲಿ ಎಲ್ಲಾ ಸಮುದಾಯವನ್ನು ಸೆಳೆಯೋಕೆ ಪ್ರಯತ್ನ ಮಾಡಿದ್ದಾರೆ.
ಮಹಿಳೆ ದೇಶದ ಶಕ್ತಿ. ಒಂದು ಕುಟುಂಬಕ್ಕೆ ಮಹಿಳೆ ಹೇಗೆ ಮುಖ್ಯವೋ ಹಾಗೆಯೇ ದೇಶಕ್ಕೆ ಮಹಿಳೆಯೂ ಬಹು ದೊಡ್ಡ ಆಸ್ತಿ..ಇಂದು ಮಹಿಳೆ ಸಾಮಾಜಿಕ, ಶೈಕ್ಷಣಿಕ, ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡು ತನ್ನದೇ ಆದ ಸ್ಥಾನದಲ್ಲಿ ಮೆರೆಯುತ್ತಿದ್ದಾಳೆ. ಯಾರದೇ ಹಂಗಿಲ್ಲದೆ ತನ್ನ ಕುಟುಂಬ ಜವಾಬ್ದಾರಿಯನ್ನು ಹೊತ್ತುಕೊಂಡು ಸ್ವಾವಲಂಭಿ ಜೀವನ ನಡೆಸುತ್ತಿದ್ದಾಳೆ. ಹೀಗಾಗಿ ಈ ಬಜೆಟ್ ನಲ್ಲಿಯೂ ಮಹಿಳೆಗೆಯ ಏಳಿಗೆಗೆ ಒತ್ತು ನೀಡಲಾಗಿದ್ದು, ಮಹಿಳೆಯರಲ್ಲಿ ವಿಶ್ವಾಸ ಮೂಡಿಸಲು ನಿರ್ಭಯ ಯೋಜನೆಯಡಿ ನಗರದಲ್ಲಿ ಸುರಕ್ಷಿತ ನಗರ ಯೋಜನೆಯನ್ನು ೨೬೧ ಕೋಟಿ ರುಪಾಯಿ ವೆಚ್ಚ ನೀಡಲಾಗಿದೆ.
ಇನ್ನು ನಗರದ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕೆ ಶಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಮಹಿಳೆಯರಿಗಾಗಿ ಹಾಲುಣಿಸುವ ಕೊಠಡಿ, ಮೊಬೈಲ್ ಚಾರ್ಜಿಂಗ್, ತುರ್ತು ಎಸ್ ಒಎಸ್ ಸೌಲಭ್ಯಗಳಿಗೆ ೫೦ ಕೋಟಿ ಮೀಸಲಿಡಲಾಗಿದೆ. ಇನ್ನು ಒಂದು ಲಕ್ಷ ಮಹಿಳೆಯರಿಗೆ ಉಚಿತ ಕೌಶಲ ತರಬೇತಿ ನೀಡುವ ಬಗ್ಗೆ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ಅನೇಕ ಹೆಣ್ಣು ಮಕ್ಕಳು ಹಾಗೂ ಗೃಹಿಣಿಯರಿಗೆ ಸಹಾಯವಾಗಲಿದೆ. ಇನ್ನು ಮಹಿಳಾ ಕಾರ್ಮಿಕರಿಗೆ ೫೦೦ ರುಪಾಯಿ ಸಹಾಯಧನವನ್ನು ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತವಾದ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಶಿಕ್ಷಣದ ದೃಷ್ಟಿಯಿಂದಲೂ ಸಹಾಯವಾಗಲಿದೆ.
ಸಂಘಟಿತ ವಲಯದಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ನೀಡಿಲಾಗಿದ್ದು, ೩೦ ಲಕ್ಷ ಮಹಿಳೆಯರಿಗೆ ಅನುಕೂಲವಾಗುವಂತೆ ೧ ಸಾವಿರ ಕೋಟಿ ರುಪಾಯಿಯ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ. . ಸರ್ಕಾರಿ ಪದವಿ ಪೂರ್ವ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದ್ದು, ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇನ್ನು ಆಶಾಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಿಕರಿಗೆ ನೀಡಲಾಗುವ ಸಹಾಯಧನವನ್ನು ಒಂದು ಸಾವಿರ ಹೆಚ್ಚಳ ಮಾಡಲಾಗಿದೆ. ಇನ್ನು ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನ ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ಇಂತಹ ಕ್ರೌರ್ಯಗಳಿಗೆ ನಲುಗಿದ ಹೆಣ್ಣುಮಕ್ಕಳಿಗೆ ಬಲ ತುಂಬಿದAತಾಗಿದೆ. ಇನ್ನು ಬೆಂಗಳೂರಿನಲ್ಲಿ ಒಂಭತ್ತು ಕಾನೂನು ಸುವ್ಯವಸ್ಥೆ, ಆರು ಮಹಿಳಾ, ಐದು ಸಂಚಾರಿ ಠಾಣೆಗಳನ್ನು ಹೊಸದಾಗಿ ಸ್ಥಾಪನೆಗೆ ಘೋಷಣೆ ಮಾಡಲಾಗಿದೆ.