Darshan : ದರ್ಶನ್‌ ಕುರಿತು ರಮೇಶ್‌ ಅರವಿಂದ್‌ ಹೇಳಿದ್ದೇನು ಗೊತ್ತಾ?

ನಟ ದರ್ಶನ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿರೋದು ಗೊತ್ತೇ ಇದೆ. ಅವರು ಯಾವಾಗ ಜೈಲು ಸೇರಿದರೋ, ಆಗ ಒಬ್ಬೊಬ್ಬರೇ ಒಂದೊಂದು ರೀತಿ ಮಾತುಗಳನ್ನು ಹರಿಬಿಡೋಕೆ ಶುರುಮಾಡಿದರು. ದರ್ಶನ್‌ ಪರ ಮತ್ತು ವಿರೋಧದ ಹೇಳಿಕೆಗಳೂ ಬಂದವು. ದರ್ಶನ್‌ ಅಭಿಮಾನಿಗಳಂತೂ ಅವರ ಪರವಾಗಿಯೇ ಬ್ಯಾಟಿಂಗ್‌ ಶುರುಮಾಡಿದರು. ಈಗಲೂ ಅದೇ ನಿಲುವಿನಲ್ಲಿದ್ದಾರೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಕೂಡ ತಮ್ಮ ಹೇಳಿಕೆಗಳನ್ನು ನೀಡಲು ಮುಂದಾದರು. ಅಂತೆಯೇ ನಟ ರಮೇಶ್‌ ಅರವಿಂದ್ ಕೂಡ ದರ್ಶನ್‌ ಕುರಿತು ಮಾತನಾಡಿದ್ದಾರೆ.
ಈಗಾಗಲೇ ದರ್ಶನ್ ಅವರು ಜೈಲಿಗೆ ಸೇರಿದ ಬಳಿಕ ಒಬ್ಬೊಬ್ಬೊರು ಒಂದೊಂದು ರೀತಿ ಹೇಳಿಕೆ ನೀಡುತ್ತಿರುವುದು ಗೊತ್ತೇ ಇದೆ. ಇದೀಗ ನಟ ರಮೇಶ್ ಅರವಿಂದ್ ಕೂಡ ತಮ್ಮ ಹೇಳಿಕೆ ಕೊಟ್ಟಿದ್ದಾರೆ. ಅವರು ಏನೇ ಮಾತಾಡಿದರೂ ಅದಕ್ಕೊಂದು ಅರ್ಥ ಇರುತ್ತೆ. ಅಂತಹ ಅರ್ಥಪೂರ್ಣ ಮಾತುಗಳನ್ನು ಹರಿಬಿಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

 

ದರ್ಶನ್‌ ಕುರಿತಾಗಿ ರಮೇಶ್‌ ಅರವಿಂದ್‌ ಅವರು ತಮ್ಮ ಹೇಳಿಕೆಯಲ್ಲಿ ಹೇಳಿದ್ದಿಷ್ಟು.”ಇಸ್ರೇಲ್ ಪ್ರಧಾನಿಯ ಮಾತನ್ನು ಹೇಳುತ್ತೇನೆ. ಗೊತ್ತಿರುವ ವ್ಯಕ್ತಿ ತಪ್ಪು ಮಾಡಿದಾಗ, ತಪ್ಪು ತಪ್ಪಾಗಿರುತ್ತದೆ. ಗೊತ್ತಿರೋ ವ್ಯಕ್ತಿ ಗೊತ್ತಿರುವ ವ್ಯಕ್ತಿಯಾಗಿರುತ್ತಾನೆ. ಗೊತ್ತಿರುವ ವ್ಯಕ್ತಿ ಎನ್ನುವ ಕಾರಣಕ್ಕೆ ನಡೆದಿರುವುದು ತಪ್ಪಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ. ಅದು ತಪ್ಪು ಎನ್ನುವ ಕಾರಣಕ್ಕೆ ವ್ಯಕ್ತಿಯೇ ಗೊತ್ತಿಲ್ಲ ಅನ್ನುವುದಕ್ಕೂ ಆಗಲ್ಲ. ಇದು ತುಂಬಾನೇ ಇಕ್ಕಟ್ಟಿನ ಪರಿಸ್ಥಿತಿ ಎಂದಿದ್ದಾರೆ ರಮೇಶ್.‌

About The Author