- Advertisement -
ನಟ ನಿಖಿಲ್ ಕುಮಾರಸ್ವಾಮಿ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ಕೊಡೋದು ಎಲ್ರಿಗೂ ಗೊತ್ತೇ ಇದೆ.. ಇಷ್ಟು ದಿನ ಒಂಟಿಯಾಗಿ ವರ್ಕೌಟ್ ಮಾಡುತ್ತಿದ್ದ ನಟ ನಿಖಿಲ್ ಅವರು ಇದೀಗ ಅವರಿಗೆ ಸ್ಫೂರ್ತಿ ನೀಡುವ ಜೊತೆಗಾತಿಯೊಬ್ಬರು ಸಿಕ್ಕಿದ್ದಾರೆ.. ಅದು ಮತ್ಯಾರೂ ಅಲ್ಲ ಅವರ ಪತ್ನಿ ರೇವತಿ.. ವ್ಯಾಯಾಮ ಮಾಡಲು ಜಿಮ್ ಇರಬೇಕೆಂದೇನೂ ಇಲ್ಲ.. ಅದಕ್ಕೆ ನಮ್ಮೊಳಗೆ ಪ್ರೇರಣೆ ಇರಬೇಕು.. ಪ್ರಕೃತಿಯ ಮಧ್ಯೆ ನನ್ನ ಬಾಳ ಸಂಗಾತಿ ಜೊತೆ ವ್ಯಾಯಾಮ ಮಾಡುತ್ತಿರೋದಾಗಿ ಬರೆದುಕೊಂಡು ಈ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.. ತನಗೆ ತನ್ನ ಪತ್ನಿ ರೇವತಿಯೇ ಪ್ರೇರಣೆ ಎಂದೂ ಬರೆದುಕೊಂಡಿದ್ದಾರೆ..
ಚಂದನ, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ
- Advertisement -