Friday, November 22, 2024

Latest Posts

ನಿಮ್ಮ ಕನಸು ಈಡೇರಬೇಕಾ? ಇಲ್ಲಿಗೆ ಚಾಕಲೇಟ್ ಹರಕೆ ನೀಡಿ !

- Advertisement -

state news

ಕೇರಳ(ಫೆ.25): ಭಾರತದಲ್ಲಿ ಹಿಂದೂಗಳು ಮುಕ್ಕೋಟಿ ದೇವರನ್ನು ಪೂಜಿಸುತ್ತಾರೆ. ಎಲ್ಲಾ ದೇವರಿಗೂ ವಿವಿಧ ರೀತಿಯ ನೈವೇದ್ಯವನ್ನು ನೀಡುತ್ತಾರೆ. ಆದ್ರೆ ಈ ದೇವಸ್ಥಾನದಲ್ಲಿ ದೇವರಿಗೆ ಮಂಚ್ ನೈವೇದ್ಯ ಮಾಡ್ತಾರಂತೆ, ಅಷ್ಟಕ್ಕೂ ಆ ದೇವರು ಯಾರು? ಆ ದೇವಸ್ಥಾನ ಎಲ್ಲಿದೆ? ಈ ಸ್ಟೋರಿಲಿ ಓದಿ ನೋಡಿ.

ಗಣಪತಿಗೆ ಗರಿಕೆ, ಕೃಷ್ಣನಿಗೆ ಬೆಣ್ಣೆ, ಶಿವನಿಗೆ ಬಿಲ್ವಪತ್ರೆ ಹೀಗೆ ಒಂದೊಂದು ದೇವರಿಗೆ ಒಂದೊಂದು ಬಗೆ ಅಚ್ಚುಮೆಚ್ಚು ಎಂಬುದು ಜನರ ನಂಬಿಕೆ. ನಾವೆಲ್ಲಾ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಬೇಕಾದ್ರೆ ಒಂದಿಷ್ಟು ಮುಂಚೆಯೇ ಪ್ಲ್ಯಾನ್ ಮಾಡಿ, ದೇವರಿಗೆ ಇಷ್ಟವಾದ ತಿನಿಸು ತಗೊಂಡು ಹೋಗ್ತೀವಿ. ಆದ್ರೆ, ಆಳಪ್ಪುಳದ ಮುಂಚ್ ಮುರುಗನ್ ದೇವಾಲಯ ವಿಶೇಷತೆಯಿಂದ ಜನರ ಮನಗೆಲ್ಲುತ್ತಿದೆ.

ಮಕ್ಕಳನ್ನು ಓಲೈಸಲು ಚಾಕಲೇಟ್ ಕೊಡುವುದು ಸಹಜ ಆದರೆ ಕೇರಳದ ಆಳಪ್ಪುಳದ ಚೆಮ್ಮೋತ್ ನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ಬಾಲಮುರುಗನ್ ದೇವರನ್ನು ಒಲಿಸಲು ಕೂಡ ನೀವು ಮಂಚ್ ಚಾಕಲೇಟ್ ನೀಡಬೇಕಂತೆ. ಹೀಗೆ ಅಲ್ಲಿಗೆ ಬರುವ ಜನ ಬರುತ್ತಾ ಕೈಯಲ್ಲಿ ಮಂಚ್ ಹಿಡಿದುಕೊಂಡು ದೇಗುಲದತ್ತ ಆಗಮಿಸಿ, ದೇವರ ಪ್ರೀತಿಗೆ ಪಾತ್ರರಾಗ್ತಾರೆ, ಕೇರಳ ಅಲ್ಲದೆ ಬೇರೆ ಪ್ಲೇಸ್ ಗಳಿಂದಲೂ ಇಲ್ಲಿಗೆ ಜನಸಾಗರ ಹರಿದು ಬರುತ್ತೆ ಅಂತಾರೆ ಇಲ್ಲಿನ ಜನ.

ಅಷ್ಟಕ್ಕೂ ಈ ದೇವಾಲಯಕ್ಕೆ ಯಾಕೆ ಮಂಚ್ ನೈವೇದ್ಯವಾಗಿ ಅರ್ಪಿಸ್ತಾರೆ ಎಂಬ ಪ್ರಶ್ನೆ ಖಂಡಿತಾ ನಿಮ್ಗೆ ಕಾಡಿರುತ್ತೆ. ಎಸ್, ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ, ಪುರಾತನ ಹಿನ್ನಲೆ ಹೊಂದಿರುವ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಪುಟ್ಟ ಬಾಲಕನೊಬ್ಬ ಮಂಚ್ ಚಾಕೊಲೇಟ್ ಅನ್ನು ಬಾಲಮುರುಗನ್ ದೇವರಿಗೆ ಅರ್ಪಿಸಿದ ನಂತರ ಅದನ್ನು ದೇವರು ಮೆಚ್ಚಿದ್ದಾರೆ ಎಂಬುದು ಇಲ್ಲಿನ ಭಕ್ತಾದಿಗಳ ನಂಬಿಕೆ.

ಈ ದೇವಾಲಯದಲ್ಲೂ ಮೊದ ಮೊದಲು ಎಲ್ಲ ದೇವರಿಗೆ ನೈವೇದ್ಯ ನೀಡುವ ರೀತಿ ಹಣ್ಣು-ಕಾಯಿ, ಹೂವು, ಇತ್ಯಾದಿಗಳನ್ನು ನೀಡುತ್ತಿದ್ದರಂತೆ ಆದರೆ 6 ವರ್ಷಗಳ ಹಿಂದೆ ನಡೆದ ಆ ಒಂದು ಘಟನೆಯಿಂದ ಈಗ ಎಲ್ಲ ಭಕ್ತಾದಿಗಳು ಮಂಚ್ ಚಾಕಲೇಟ್ ಅನ್ನು ನೈವೇದ್ಯವಾಗಿ ನೀಡುತ್ತಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿಯ ಜನ ಹೇಳೋ ಮಾತು.

6 ವರ್ಷಗಳ ಹಿಂದೆ ಆಟವಾಡುತ್ತಿದ್ದ ಒಬ್ಬ ಪುಟ್ಟ ಮುಸ್ಲಿಂ ಬಾಲಕ ಈ ದೇವಾಲಯಕ್ಕೆ ಬಂದು ಗಂಟೆ ಬಾರಿಸಿದನಂತೆ. ಇದಕ್ಕೆ ಆತನ ಪೋಷಕರು ಅವನನ್ನು ತರಾಟೆಗೆ ತೆಗೆದುಕೊಂಡಿದ್ದರಂತೆ. ಅದೇ ದಿನ ರಾತ್ರಿ ಬಾಲಕನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ರಾತ್ರಿ ಪೂರ್ತಿ ಬಾಲಕ ಮುರುಗನ್ ಹೆಸರು ಕನವರಿಸುತ್ತಿದ್ದ ಕಾರಣ ಪೋಷಕರು ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ಅರ್ಚಕರ ಬಳಿ ನಡೆದದ್ದನ್ನು ಹೇಳಿದ್ದಾರೆ.

ಅರ್ಚಕರು ದೇವರಿಗೆ ಏನಾದರು ನೈವೇದ್ಯ ನೀಡಬೇಕೆಂದಾಗ ಬಾಲಕನ ತಂದೆ ತಾಯಿ ಎಳ್ಳೆಣ್ಣೆ ನೀಡಲು ಒಪ್ಪಿಕೊಂಡ್ರು,, ಅಲ್ಲೇ ಇದ್ದ ಬಾಲಕ ತನ್ನ ಬಳಿ ಇದ್ದ ಮಂಚ್ ಚಾಕಲೇಟ್ ಅನ್ನು ದೇವರಿಗೆ ನೈವೇದ್ಯ ಮಾಡುವಂತೆ ಪಟ್ಟು ಹಿಡಿದ್ದಿದ್ದ. ಕೊನೆಗೆ ಮಂಚ್ ಚಾಕಲೇಟ್ ಅನ್ನೇ ದೇವರಿಗೆ ಅರ್ಪಿಸಿದ್ದಾರೆ ಅಂತ ಹೇಳಲಾಗುತ್ತೆ. ಪವಾಡ ಎಂಬಂತೆ ಈ ಘಟನೆಯ ನಂತರ ಆತ ಗುಣಮುಖನಾಗಿಬಿಟ್ಟಿದ್ದ. ಈ ಘಟನೆಯ ಬಳಿಕ ಬಾಲ ಮುರುಗನ್ ‘ಮಂಚ್ ಮುರುಗನ್’ ಆಗಿ ಪ್ರಸಿದ್ದಿ ಹೊಂದಿದರು.

ಇದೀಗ ಕೇರಳದ ವಿವಿಧ ಭಾಗಗಳಿಂದ ಭಕ್ತಾದಿಗಳು ಮಂಚ್ ಚಾಕಲೇಟ್ ಅನ್ನು ರಾಶಿ ರಾಶಿಯಾಗಿ ತಂದು ದೇವರಿಗೆ ಅರ್ಪಿಸುತ್ತಾರೆ. ಪರೀಕ್ಷಾ ಸಮಯ ದಲ್ಲಂತೂ ಮಕ್ಕಳು ತಮ್ಮ ಇಷ್ಟ ದೈವ ಬಾಲ ಮುರುಗನ್ ದರ್ಶನ ಪಡೆದು ದೇವರಿಗೆ ಮುಂಚ್ ಅನ್ನು ನೀಡುತ್ತಾರಂತೆ. ಅಷ್ಟೇ ಅಲ್ಲದೆ ಈ ದೇವಾಲಯದಲ್ಲಿ ಯಾವುದೇ ಜಾತಿ ಧರ್ಮದ ಭೇದವಿಲ್ಲದೇ ಎಲ್ಲ ಭಕ್ತರಿಗೆ ಮಂಚ್ ಚಾಕಲೇಟ್ ಅನ್ನು ಪ್ರಸಾದವಾಗಿ ನೀಡ್ತಾ ಇರ್ತಾರೆ.

ಬಿಜೆಪಿಯವರು ನೂರು ಸುಳ್ಳು ಹೇಳುತ್ತಾರೆ, ಮೂರು ಕೆಲಸ ಮಾಡುತ್ತಾರೆ: ಹೆಚ್.ಡಿ.ಕೆ

ಮಹಿಳಾ ಕಾರ್ಮಿಕರ ಕೆಲಸದ ಸಮಯ ಹೆಚ್ಚಿಸಿದ  ಸರ್ಕಾರ 

- Advertisement -

Latest Posts

Don't Miss