valentine’s day
ಬೆಂಗಳೂರು(ಫೆ.9): ಫೆ.14 ವ್ಯಾಲೆಂಟೈನ್ಸ್ ಡೇ ದಿನಾಚರಣೆಯ ದಿನ. ಈ ದಿನ ಪ್ರೇಮಿಗಳಿಗೆ ಬಹಳ ವಿಶೇಷವಾದ ದಿನ. ಈ ದಿನ ಬಹಳ ಚೆನ್ನಾಗಿರಬೇಕು ಅಂತ ಪ್ರತಿಯೊಂದು ಜೋಡಿಗಳೂ ಬಯಸ್ತಾರೆ. ಪವಿತ್ರ ಪ್ರೀತಿಯನ್ನು ಸೆಲೆಬ್ರೇಷನ್ ಮಾಡೋಕೆ ಈ ದಿನವನ್ನು ಚಂದವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳಿಗೆ ಇದೀಗ ಒಂದು ಸಂತಸದ ಸುದ್ದಿ, ಅದೇನಪ್ಪಾ ಅಂದ್ರೆ ನೀವುಪ್ರೇಮಿಗಳಾಗಿದ್ದರೆ ಈ ಪ್ರೇಮಮಂದಿರಕ್ಕೆ ಹೋದರೆ, ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತೆ ಅಂತಾರೆ, ಹಾಗಾದ್ರೆ ಆ ಮಂದಿರ ಯಾವುದು ಈ ಸ್ಟೋರಿಲಿ ನೋಡೋಣ.
ವ್ಯಾಲೆಂಟೈನ್ಸ್ ದಿನದ ಆಚರಣೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಕ್ಷಣಗಣನೆ ಆರಂಭವಾಗುತ್ತದೆ. ಈಗಾಗಲೇ ಕೆಲವರು ಪ್ರೇಮ ನಿವೇದನೆ ಮಾಡಲು ಗಿಫ್ಟ್ಗಳನ್ನು ಖರೀದಿಸಿದ್ದು, ಇನ್ನೂ ಕೆಲವೂ ಯೋಚನೇ ಮಾಡ್ತಾನೇ ಇದ್ದಾರೆ, ಹಾಗಿದ್ರೆ ನಿಮ್ಮ ಸಂಗಾತಿಗೆ ಪ್ರೇಮಿಗಳ ಹೇಗಿರ್ಬೇಕು, ನಿಮ್ಮ ಸಂಬಂಧ ಗಟ್ಟಿಯಾಗಬೇಕಾದ್ರೆ ಈ ಪ್ರೇಮಮಂದಿರಕ್ಕೆ ಹೋದರೆ ಇನ್ನೂ ಚಂದ, ಆ ಮಂದಿರ ಏನು ಅಂತ ನಿಮಗೆ ಅನಿಸ್ಬೋದು, ಎಸ್, ನಾವಂದುಕೊಂಡಿದ್ದೀವಿ ಭಾರತದಲ್ಲಿ ತಾಜ್‌ಮಹಲ್ ಮಾತ್ರವೇ ಪ್ರೇಮದ ಸಂಕೇತವಲ್ಲ, ಮತ್ತೊಂದು ಮಂದಿರವಿದೆ.. ಮಥುರಾದ ಹತ್ತಿರದಲ್ಲಿರುವ ಪ್ರೇಮಮಂದಿರಕ್ಕೆ ಜೋಡಿಗಳು ಹೋದರೆ ಅವರ ನಡುವೆ ಪ್ರೀತಿ ಹೆಚ್ಚಾಗುವುದಲ್ಲದೆ ಸಂಬಂಧ ಗಟ್ಟಿಯಾಗುತ್ತದೆ ಅಂತ ಹೇಳಲಾಗುತ್ತದೆ.
ಎಲ್ಲಾ ಪ್ರೇಮಿಗಳಿಗೂ ಸಾಮಾನ್ಯವಾಗಿ ಪ್ರೇಮದ ಪ್ರತೀಕವೆನಿಸಿರುವ ತಾಜ್‌ಮಹಲ್ ಮುಂದೆ ನಿಂತು ಜೋಡಿ ಫೋಟೋ ತೆಗೆಸಿಕೊಳ್ಳುವ ಹಂಬಲವಿರುತ್ತದೆ. ಪ್ರೇಮಿಗಳ ದಿನದಂದು ತಾಜ್ ಮಹಲ್ ನೋಡಲು ಪ್ರೀತಿಯ ಜೋಡಿ ಹೋಗುವುದಿದೆ. ತಾಜ್ ಮಹಲ್ ಅನ್ನು ಪ್ರಪಂಚದ 7 ನೇ ಅದ್ಭುತವೆಂದು ಪರಿಗಣಿಸಲಾಗಿದೆ ಮತ್ತು ಪ್ರೀತಿಯ ಸಂಕೇತವಾಗಿದೆ.ಆದ್ರೆ ಕೇವಲ ತಾಜ್ ಮಹಲ್ ಮಾತ್ರವೇ ಅಲ್ಲ , ಇನ್ನೂ ಒಂದು ಮಹಲ್ ಇದೆ, ಅದೂ ಪ್ರೇಮಮಂದಿರ ಅಂತ, ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಹೋಗುತ್ತಾ, ತಮ್ಮ ಅಮೂಲ್ಯ ಕ್ಷಣಗಳನ್ನು ಇಲ್ಲಿ ಕಳೆಯುತ್ತಾರೆ.
ಇನ್ನು ಈ ಪ್ರೇಮಮಂದಿರದ ವಿಶೇಷತೆಗಳೇನು ಅನ್ನೋದನ್ನು ನೋಡೋದಾದ್ರೆ, ಕೃಷ್ಣ ರಾಧೆಯ ಪ್ರೀತಿಗೆ ಸಾಕ್ಷಿಯಾದ ವೃಂದಾವನದ ಪುಣ್ಯ ಭೂಮಿಯಲ್ಲಿ ಈ ಪ್ರೇಮಮಂದಿರದಲ್ಲಿದೆ.. ವೃಂದಾವನದ ‘ಪ್ರೇಮ ಮಂದಿರ’ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವು ರಾಧಾ-ಕೃಷ್ಣರ ಪ್ರೀತಿಯ ಸಂಕೇತವಾಗಿದೆ. ದೇವಾಲಯದ ಸೌಂದರ್ಯವು ನಿಮ್ಮನ್ನು ಆಕರ್ಷಿಸುತ್ತದೆ ಮತ್ತು ಮಂತ್ರಮುಗ್ಧಗೊಳಿಸುತ್ತದೆ. ಈ ದೇವಾಲಯಕ್ಕೆ ಜೋಡಿಯಾಗಿ ಭೇಟಿ ನೀಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಮತ್ತು ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ.ಪ್ರೇಮಮಂದಿರದ ನಿರ್ಮಾಣ ಕಾರ್ಯವು 2001ರಲ್ಲಿ ಪ್ರಾರಂಭವಾಯಿತು. ಪ್ರೇಮ ಮಂದಿರದ ಎತ್ತರ 125 ಮತ್ತು ಉದ್ದ 122 ಅಡಿ. ಇದರ ಅಗಲ ಸುಮಾರು 115 ಅಡಿ. ಇಟಲಿಯಿಂದ ಆಮದು ಮಾಡಿಕೊಂಡ ಅಮೃತಶಿಲೆಯ ಕಲ್ಲುಗಳಿಂದ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ದೇವಾಲಯದಲ್ಲಿ ಶ್ರೀ ಕೃಷ್ಣನ ಸುಂದರವಾದ ಮೇಜುಗಳ ಜೊತೆಗೆ ರಾಮ-ಸೀತೆಯ ಸುಂದರವಾದ ಹೂವಿನ ಬಂಗಲೆಯೂ ಇದೆ. ದೇವಾಲಯವನ್ನು 2018ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಪ್ರೇಮ ಮಂದಿರದ ವಿಶೇಷತೆ ಎಂದರೆ ಹಗಲಿನಲ್ಲಿ ಬಿಳಿಯಾಗಿ, ಸಂಜೆ ವಿವಿಧ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರತಿ 30 ಸೆಕೆಂಡಿಗೆ ದೇವಸ್ಥಾನದ ಬಣ್ಣ ಬದಲಾಗುವ ರೀತಿಯಲ್ಲಿ ದೇವಸ್ಥಾನದಲ್ಲಿ ದೀಪಾಲಂಕಾರ ಮಾಡಲಾಗಿದೆ. ಪ್ರೇಮ ಮಂದಿರಕ್ಕೆ ಭೇಟಿ ನೀಡಲು, ನೀವು ಮಥುರಾ ರೈಲು ನಿಲ್ದಾಣದಿಂದ ಸುಮಾರು 12 ಕಿ.ಮೀ. ಮತ್ತು ವಿಮಾನ ನಿಲ್ದಾಣದಿಂದ ದೇವಾಲಯದ ದೂರವು 54 ಕಿಲೋಮೀಟರ್ ಆಗಿದೆ.