Wednesday, September 11, 2024

Latest Posts

ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ..!

- Advertisement -

www.karnatakatv.net: ವೈದ್ಯಲೋಕ ನಮ್ಮ ಪ್ರಾಣವನ್ನು ಉಳಿಸುವ ದೇವಲೋಕ. ಆದರೆ ಕೆಲವೊಮ್ಮೆ ಕೆಲವೈದ್ಯರು ಮಾಡುವ ತಪ್ಪುಗಳಿಂದ ವೈದ್ಯಲೋಕದಲ್ಲೂ ಕೂಡ ಸಾಕಷ್ಟು ತಪ್ಪುಗಳು ನಡೆಯುತ್ತಲೆ ಬಂದಿವೆ, ಇದರಿಂದ ಎಷ್ಟೋ ಜನರ ಪ್ರಾಣ ಹೋಗುವ ಸಾಧ್ಯತೆಗಳೂ ಸಹ ಇರುತ್ತವೆ, ಮತ್ತು ಆಪರೇಷನ್ ಎಂದಾಗ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಡುವುದು ಗ್ಯಾರಂಟಿ, ಇದು ಸಂಪೂರ್ಣವಾಗಿ ವೈದ್ಯರ ಬುದ್ದಿವಂತಿಕೆಯಿoದಲೇ ಕೂಡಿದ್ದು ವೈದ್ಯರು ಎಷ್ಟು ಜಾಗರೂಕತೆಯಿಂದ ಆಪರೇಷನ್ ಅನ್ನು ಮಾಡುತ್ತಾರೋ ಅಷ್ಟರ ಮಟ್ಟಿಗೆ ಆಪರೇಷನ್ ಸಕ್ಸಸ್ ಆಗುತ್ತದೆ ಮತ್ತು ಜನರ ಜೀವ ಉಳಿಯುತ್ತದೆ, ವೈದ್ಯರೇ ಮೈಮರೆತರೆ ಹೇಗೆ.

ಹೌದು..ಇಂತಹದ್ದೇ ಒಂದು ಘಟನೆ ಗುಜರಾತಿನಲ್ಲಿ ನಡೆದಿದೆ. ಗುಜರಾತ್ ನ ವೈದ್ಯರೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯ ಮೂತ್ರಪಿಂಡದ ಕಲ್ಲನ್ನು ತೆಗೆಯುವ ಬದಲು ಕಿಡ್ನಿಯನ್ನೇ ತೆಗೆದಿದ್ದಾರೆ. ಗುಜರಾತ್‌ನ ದೇವೇಂದ್ರಭಾಯಿ ರಾವಲ್ ಎಂಬ ವ್ಯಕ್ತಿ ಹೊಟ್ಟೆನೋವಿನಿಂದ ಅಹಮದಾಬಾದ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಡಾ.ಶಿವುಭಾಯಿ ಪಟೇಲ್ ಎಂಬ ವೈದ್ಯರ ಬಳಿ ತಪಾಸಣೆಯನ್ನು ಮಾಡಿಸಿಕೊಂಡಿದ್ದರು. ಆಗ ಅವರ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿತ್ತು. ಅವರಿಗೆ 2011 ರ ಸೆಪ್ಟೆಂಬರ್ 3 ರಂದು ಆಪರೇಷನ್ ಮಾಡಲಾಗಿತ್ತು. ಆದರೆ ಆಪರೇಷನ್ ಬಳಿಕ ಆ ರೋಗಿಯ ಕಿಡ್ನಿಯಲ್ಲಿರುವ ಕಲ್ಲುಗಳ ಬದಲಾಗಿ ಕಿಡ್ನಿಯನ್ನೆ ತೆಗೆದುಹಾಕಲಾಗಿತ್ತು. ಆಪರೇಷನ್ ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ 2012 ಜನವರಿ 8 ರಂದು ದೇವೆಂದ್ರಭಾಯಿ ಸಾವನ್ನಪ್ಪಿದ್ದರು ಈ ಘಟನೆಯಿಂದ ಸಾಕಷ್ಟು ಮನನೊಂದಿದ್ದ ರೋಗಿಯ ಕುಟುಂಬಸ್ಥರು ಗ್ರಾಹಕರ ಪರಿಹಾರ ಆಯೋಗಕ್ಕೆ ದಾಖಲಿಸಿದ್ದರು, ವೈದ್ಯರು ಮಾಡಿದ ತಪ್ಪಿನಿಂದಾಗಿ ರೋಗಿ ಸಾವನ್ನಪ್ಪಿದ್ದು ,ಅದಾದ 10 ವರ್ಷಗಳಬಳಿಕ ಇದೀಗ ಆಸ್ಪತ್ರೆ ರೋಗಿಯ ಕುಟುಂಬಸ್ತರಿಗೆ 11.23 ಲಕ್ಷ ರೂ ಪರಿಹಾರ ನೀಡಿದೆ.

ಇದೀಗ ಈ ಘಟನೆ ಬಗ್ಗೆ ವಿಚಾರಣೆ ಮಾಡಿದ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ , ವೈದ್ಯರ ನಿರ್ಲಕ್ಷದಿಂದಲೇ ಈ ಘಟನೆ ನಡೆದಿರುವುದರಿಂದ ಆಸ್ಪತ್ರೆಯು ಪರಿಹಾರವನ್ನು ಘಟನೆ ನಡೆದಾಗಲೇ ನೀಡಬೇಕಿತ್ತು ಎಂದು ಅಸಮಾದಾನ ವ್ಯಕ್ತ ಪಡಿಸಿದೆ. 11.23 ಲಕ್ಷ ಪರಿಹಾರದ ಜೊತೆಗೆ 2012 ರಿಂದ ಇಲ್ಲಿಯವರೆಗೆನ 7.5% ಬಡ್ಡಿಯನ್ನು ಸೇರಿಸಿ ಪರಿಹಾರ ನೀಡುವಂತೆ ಆದೇಶ ನೀಡಿದೆ .

ಸಂಪತ್‌ಶೈವ ,ಸ್ಪೆಷಲ್ ಡೆಸ್ಕ್ -ಕರ್ನಾಟಕ. ಟಿವಿ

- Advertisement -

Latest Posts

Don't Miss